Mysore
22
mist

Social Media

ಬುಧವಾರ, 10 ಡಿಸೆಂಬರ್ 2025
Light
Dark

ಟೆಸ್ಟ್‌ ಕ್ರಿಕೆಟ್‌ನಲ್ಲಿ 34ನೇ ಶತಕ ಬಾರಿಸಿ ಹಲವು ದಾಖಲೆ ಪುಡಿಗಟ್ಟಿದ ರೂಟ್‌!

ಲಂಡನ್‌: ತವರಿನಂಗಳದಲ್ಲಿ ಶ್ರೀಲಂಕಾ ವಿರುದ್ಧ ನಡೆಯತ್ತಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಬ್ಯಾಟರ್‌ ಜೋ ರೂಟ್‌ ಅವರು ಹಲವು ದಾಖಲೆಗಳನ್ನು ನಿರ್ಮಿಸಿ, ಹಿರಿಯ ಕ್ರಿಕೆಟ್‌ ಆಟಗಾರರ ದಾಖಲೆಗಳನ್ನು ಪುಡಿಗಟ್ಟಿದ್ದಾರೆ.

ಶ್ರೀಲಂಕಾ ವಿರುದ್ಧದ ಪಂದ್ಯ ಒಂದರಲ್ಲಿ ಎರಡೂ ಇನ್ನಿಂಗ್ಸ್‌ನಲ್ಲಿ ಎರಡು ಸೆಂಚುರಿ (143 ಮತ್ತು 103ರನ್‌) ದಾಖಲಿಸಿದ ರೂಟ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ತಮ್ಮ ವೈಯಕ್ತಿಕ 34ನೇ ಶತಕ ಬಾರಿಸಿದರು. ಈ ಶತಕದೊಂದಿಗೆ ಹಲವು ವಿಶ್ವ ದಾಖಲೆಗಳನ್ನು ಸಹಾ ರೂಟ್‌ ನಿರ್ಮಿಸಿದರು.

ಇಂಗ್ಲೆಂಡ್‌ನ ಮಾಜಿ ಕ್ಯಾಪ್ಟನ್‌ ಅಲಿಸ್ಟಾರ್‌ ಕುಕ್‌ ಅವರ ಇಂಗ್ಲೆಂಡ್‌ ಪರ ಅತೀಹೆಚ್ಚು ಶತಕ ದಾಖಲಿಸಿದ (33 ಶತಕ) ರೆಕಾರ್ಡ್‌ನ್ನು ರೂಟ್‌ ಮುರಿದು ನೂತನ ದಾಖಲೆ ನಿರ್ಮಿಸಿದರು. ಇಂಗ್ಲೆಂಡ್‌ ಪರ ವೈಯಕ್ತಿಕ ಗರಿಷ್ಠ ಸೆಂಚುರಿ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆ ರೂಟ್‌ ಪಾಲಾಯಿತು.

ಇದರೊಂದಿಗೆ ಕ್ರಿಕೆಟ್‌ ದಿಗ್ಗಜರಾದ ಸುನೀಲ್‌ ಗವಾಸ್ಕರ್‌, ಮಹೇಲಾ ಜಯವರ್ಧನೆ, ಬ್ರಿಯಾನ್‌ ಲಾರಾ, ಯೂನಿಸ್‌ ಖಾನ್‌ ಅವರ ಹಲವು ದಾಖಲೆಗಳನ್ನು ಪುಡಿಗಟ್ಟಿದರು. ಇನ್ನು ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೆಚ್ಚು ಶತಕ ದಾಖಲಿಸಿದ ಆಟಗಾರ ಎಂಬ ದಾಖಲೆ ಸಚಿನ್‌ ತೆಂಡುಲ್ಕರ್‌ (51 ಶತಕ) ಅವರ ಹೆಸರಿನಲ್ಲಿದೆ.

ಇನ್ನು ಸಕ್ರಿಯ ಆಟಗಾರರ ಪೈಕಿ ಅತಿಹೆಚ್ಚು ಶತಕ ದಾಖಲಿಸಿದ ದಾಖಲೆ ರೂಟ್‌ ಹೆಸರಿನಲ್ಲಿದೆ. ರೂಟ್‌ 34 ಶತಕ ಬಾರಿಸಿ ಅಗ್ರಸ್ಥಾನದಲ್ಲಿದ್ದೇ, ನಂತರದ ಸ್ಥಾನದಲ್ಲಿ ನ್ಯೂಜಿಲೆಂಡ್ಸ್‌ನ ಕೇನ್‌ ವಿಲಿಯಮ್ಸ್‌ 32 ಶತಕ, ಆಸೀಸ್‌ನ ಸ್ಟೀವ್‌ ಸ್ಮಿತ್‌ 32 ಶತಕ ಹಾಗೂ ಭಾರತದ ವಿರಾಟ್‌ ಕೊಹ್ಲಿ 29 ಶತಕ ದಾಖಲಿಸಿದ್ದಾರೆ.

Tags:
error: Content is protected !!