ಮುಂಬೈ: ಒಂದು ವಾರ ಮುಂದೂಡಿಕೆಯಾಗಿದ್ದ ಐಪಿಎಲ್ ಪಂದ್ಯಗಳು ಮೇ.17ರಿಂದ ಮತ್ತೆ ಆರಂಭವಾಗಲಿದೆ.
ಮೇ.29ಕ್ಕೆ ಮೊದಲ ಕ್ವಾಲಿಫೈಯರ್ ಪಂದ್ಯ ನಡೆದರೆ ಮೇ.30 ಎಲಿಮಿನೇಟರ್ ಪಂದ್ಯ ನಡೆಯಲಿದೆ. ಜೂನ್.1ರಂದು ಎರಡನೇ ಪ್ವಾಲಿಫೈಯರ್ ಪಂದ್ಯ ನಡೆದರೆ ಜೂನ್.3ರಂದು ಫೈನಲ್ ಪಂದ್ಯ ನಡೆಯಲಿದೆ.
ಬೆಂಗಳೂರು, ಜೈಪುರ, ದೆಹಲಿ, ಮುಂಬೈ, ಅಹಮದಾಬಾದ್, ಲಕ್ನೋದಲ್ಲಿ ಉಳಿದ ಪಂದ್ಯಗಳು ನಡೆಯಲಿದೆ.
ಕ್ವಾಲಿಫೈಯರ್, ಎಲಿಮಿನೇಟರ್ ಮತ್ತು ಫೈನಲ್ ಪಂದ್ಯದ ಸ್ಥಳಗಳು ಇನ್ನೂ ನಿಗದಿಯಾಗಿಲ್ಲ.
ಆರ್‌ಸಿಬಿ ಮತ್ತು ಕೆಕೆಆರ್ ಮಧ್ಯೆ ಮೇ.17ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆಯಲಿದೆ.





