Mysore
25
overcast clouds

Social Media

ಮಂಗಳವಾರ, 24 ಜೂನ್ 2025
Light
Dark

IPL 2024‌ Final : ಶರಣಾದ ಸನ್‌ರೈಸರ್ಸ್‌; ಮೂರನೇ ಬಾರಿಗೆ ಚಾಂಪಿಯನ್‌ ಆದ ಕೆಕೆಆರ್

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ 17ನೇ ಐಪಿಎಲ್ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಮೂರನೇ ಬಾರಿಗೆ ಐಪಿಎಲ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಕೊಲ್ಕತ್ತಾ ನೈಟ್‌ ರೈಡರ್ಸ್‌ ಬೌಲಿಂಗ್‌ ದಾಳಿ ಎದುರು ಮಂಕಾಗಿ 18.3 ಓವರ್‌ಗಳಲ್ಲಿ ಕೇವಲ 113 ರನ್‌ಗಳಿಗೆ ಆಲ್‌ಔಟ್‌ ಆಗಿ 114 ರನ್‌ಗಳ ಗುರಿ ನೀಡಿತು. ಈ ಸುಲಭ ಗುರಿಯನ್ನು ಬೆನ್ನಟ್ಟಿದ ಕೊಲ್ಕತ್ತಾ ನೈಟ್‌ ರೈಡರ್ಸ್‌ ರಹ್ಮನುಲ್ಲಾ ಗುರ್ಬಝ್‌ ಹಾಗೂ ವೆಂಕಟೇಶ್‌ ಐಯ್ಯರ್‌ ಜತೆಯಾಟದ ನೆರವಿನಿಂದ 10.3 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 114 ರನ್‌ ಕಲೆಹಾಕಿತು.

ಸನ್ ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್: ತಂಡ ಕೇವಲ 21 ರನ್‌ಗಳಿಗೆ ತನ್ನ ಮೊದಲ 3 ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿ ನಂತರ ಎಲ್ಲಿಯೂ ಹೇಳಿಕೊಳ್ಳುವಂತ ಸುಧಾರಣೆಯನ್ನು ಕಾಣಲೇ ಇಲ್ಲ. ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ 2 (5) ರನ್ ಮತ್ತು ಟ್ರಾವಿಸ್ ಹೆಡ್ ‌ಡಕ್‌ಔಟ್‌ ಆದರು. ಇನ್ನುಳಿದಂತೆ ರಾಹುಲ್‌ ತ್ರಿಪಾಠಿ 9 (13) ರನ್‌, ಏಡನ್‌ ಮಾರ್ಕ್ರಮ್‌ 20 (23) ರನ್‌, ನಿತಿಶ್‌ ರೆಡ್ಡಿ 13 (10) ರನ್‌, ಹೆನ್‌ರಿಚ್‌ ಕ್ಲಾಸೆನ್‌ 16 (17) ರನ್‌, ಶಹಬಾಜ್‌ ಅಹ್ಮದ್‌ 8 (7) ರನ್‌, ಅಬ್ದುಲ್‌ ಸಮದ್‌ 4 (4) ರನ್‌, ನಾಯಕ ಪ್ಯಾಟ್‌ ಕಮಿನ್ಸ್‌ 24 (19) ರನ್‌, ಜಯದೇವ್‌ ಉನಾದ್ಕತ್‌ 4 (11) ರನ್‌ ಮತ್ತು ಭುವನೇಶ್ವರ್‌ ಕುಮಾರ್‌ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರು.

ಕೊಲ್ಕತ್ತಾ ನೈಟ್‌ ರೈಡರ್ಸ್‌ ಪರ ಆಂಡ್ರೆ ರಸೆಲ್‌ 3 ವಿಕೆಟ್‌, ಮಿಚೆಲ್‌ ಸ್ಟಾರ್ಕ್‌ ಮತ್ತು ಹರ್ಷಿತ್‌ ರಾಣಾ ತಲಾ ಎರಡೆರಡು ವಿಕೆಟ್‌, ವೈಭವ್‌ ಅರೋರಾ, ಸುನಿಲ್ ನರೈನ್‌ ಮತ್ತು ವರುಣ್‌ ಚಕ್ರವರ್ತಿ ತಲಾ ಒಂದೊಂದು ವಿಕೆಟ್‌ ಪಡೆದರು.

ಕೊಲ್ಕತ್ತಾ ನೈಟ್‌ ರೈಡರ್ಸ್‌ ಇನ್ನಿಂಗ್ಸ್:‌ ತಂಡದ ಪರ ಆರಂಭಿಕರಾಗಿ ಸುನಿಲ್‌ ನರೈನ್‌ ಹಾಗೂ ರಹ್ಮನುಲ್ಲಾ ಗುರ್ಬಝ್‌ ಕಣಕ್ಕಿಳಿದರು. ಸುನಿಲ್‌ ನರೈನ್‌ 6 (2) ರನ್‌ ಗಳಿಸಿ ಔಟ್‌ ಆದರೆ, ರಹ್ಮನುಲ್ಲಾ ಗುರ್ಬಝ್‌ 39 (32) ರನ್‌ ಬಾರಿಸಿದರು. ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅಬ್ಬರಿಸಿದ ವೆಂಕಟೇಶ್‌ ಐಯ್ಯರ್‌ 26 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ ಸಹಿತ ಅಜೇಯ 52 ರನ್‌ ಬಾರಿಸಿದರು ಮತ್ತು ನಾಯಕ ಶ್ರೇಯಸ್‌ ಐಯ್ಯರ್‌ ಅಜೇಯ 6 (3) ರನ್‌ ಕಲೆಹಾಕಿದರು.

ಸನ್‌ರೈಸರ್ಸ್‌ ಹೈದರಾಬಾದ್‌ ಪರ ನಾಯಕ ನಾಯಕ ಪ್ಯಾಟ್‌ ಕಮಿನ್ಸ್‌ ಹಾಗೂ ಶಹಬಾಜ್‌ ಅಹ್ಮದ್‌ ತಲಾ ಒಂದೊಂದು ವಿಕೆಟ್‌ ಪಡೆದರು,

Tags:
error: Content is protected !!