Mysore
33
few clouds

Social Media

ಶುಕ್ರವಾರ, 28 ಮಾರ್ಚ್ 2025
Light
Dark

IPL 2023: ಧೋನಿ ಐಪಿಎಲ್ ಭವಿಷ್ಯದ ಗುಟ್ಟು ಬಿಚ್ಚಿಟ್ಟ ಆಪ್ತ ಗೆಳೆಯ ಸುರೇಶ್ ರೈನಾ

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಐಪಿಎಲ್ ಭವಿಷ್ಯದ ವಿಚಾರವು ಈ ಬಾರಿಯ ಕೂಟದ ಪ್ರಮುಖ ಚರ್ಚೆಯ ವಿಷಯವಾಗಿದೆ. ಹಲವು ಪಂದ್ಯಗಳ ವೇಳೆ ಧೋನಿ ಈ ಬಗ್ಗೆ ಸುಳಿವು ಕೂಡಾ ನೀಡಿದ್ದಾರೆ.

ಇದೀಗ ಧೋನಿ ಆಪ್ತ ಮಿತ್ರ, ಮಾಜಿ ಸಿಎಸ್ ಕೆ ಆಟಗಾರ ಸುರೇಶ್ ರೈನಾ ಧೋನಿ ನಿವೃತ್ತಿ ವಿಚಾರದ ಕುರಿತು ಮಾತನಾಡಿದ್ದಾರೆ.

“ಐಪಿಎಲ್ ಟ್ರೋಫಿ ಗೆದ್ದ ನಂತರ ನಾನು ಇನ್ನೂ ಒಂದು ವರ್ಷ ಆಡುತ್ತೇನೆ ಎಂದು ಅವರು ಹೇಳುತ್ತಿದ್ದರು. ಆದರೆ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ, ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಜೊತೆಗೆ ಈಗ ಉತ್ತಮ ತಂಡದ ಸಂಯೋಜನೆಯಿದೆ ಮತ್ತು ಅನೇಕರು ನೋಡುವಂತೆ, ಆಟದ ನಂತರದ ಪ್ರಶಸ್ತಿ ಸಮಾರಂಭದಲ್ಲಿ ಧೋನಿ ಮಾಸ್ಟರ್‌ ಕ್ಲಾಸ್ ಇರುತ್ತದೆ” ಎಂದು ರೈನಾ ಜಿಯೋ ಸಿನಿಮಾದಲ್ಲಿ ಹೇಳಿದರು.

“ಅವರಿಂದ ಬಹಳಷ್ಟು ಆಟಗಾರರು ಬಹಳಷ್ಟು ಕಲಿಯುತ್ತಿರುವುದನ್ನು ನೀವು ನೋಡಬಹುದು. ಆದರೆ ಅವನ ದೇಹವು ಹೇಗೆ ಸ್ಪಂದಿಸುತ್ತದೆ ಎಂಬುದರ ಆಧಾರದ ಮೇಲೆ ಅವರು ನಿರ್ಧಾರ ಮಾಡಬಹುದು, ಅವರೊಂದಿಗೆ ಸಮಯ ಕಳೆದ ಅನುಭವದ ಮೇಲೆ ಅವರು ಇನ್ನೊಂದು ವರ್ಷ ಆಡಬೇಕು ಎಂದು ನಾನು ಭಾವಿಸುತ್ತೇನೆ” ಎಂದು ರೈನಾ ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ