Mysore
27
light rain

Social Media

ಭಾನುವಾರ, 16 ಮಾರ್ಚ್ 2025
Light
Dark

ಟ್ರಿಪಲ್ ಜಂಪ್‌ನಲ್ಲಿ ಚಿನ್ನ, ಬೆಳ್ಳಿ ಪದಕ ಪಡೆದು ಇತಿಹಾಸ ನಿರ್ಮಿಸಿದ ಭಾರತ ಕ್ರೀಡಾಪಟುಗಳು

ಬರ್ಮಿಂಗ್‌ಹ್ಯಾಮ್‌: ಕಾಮನ್‌ವೆಲ್ತ್ ಗೇಮ್ಸ್‌ನ  CWG 2022 ಪುರುಷರರ ಟ್ರಿಪಲ್ ಜಂಪ್‌ನಲ್ಲಿ ಭಾತಕ್ಕೆ ಮೊದಲ ಬಾರಿಗೆ ಚಿನ್ನ ಲಭಿಸಿದೆ.  ಭಾರತದ ಎಲ್ಡೋಸ್ ಪೌಲ್ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಅದೇ ಸಮಯದಲ್ಲಿ ಭಾರತದ ಅಥ್ಲೀಟ್ ಅಬ್ದುಲ್ಲಾ ಬೆಳ್ಳಿ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಭಾರತದ ಮತ್ತೊಬ್ಬ ಅಥ್ಲೀಟ್ ಪ್ರವೀಣ್ ಕಂಚಿನ ಪದಕದಿಂದ ವಂಚಿತರಾಗಿ ನಾಲ್ಕನೇ ಸ್ಥಾನದಲ್ಲಿದ್ದರು.

ಪೌಲ್ 17.03 ಮೀಟರ್ ಜಿಗಿತದೊಂದಿಗೆ ಮೊದಲ ಸ್ಥಾನವನ್ನು ಪಡೆದರು. ಅದೇ ಸಮಯದಲ್ಲಿ, ಭಾರತದ ಎರಡನೇ ಅಥ್ಲೀಟ್ ಅಬ್ದುಲ್ಲಾ ಅಬೂಬಕರ್ ಕೇವಲ .01 (17.02) ಅಂತರದಿಂದ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

ಭಾರತ ಎರಡನೇ ಬಾರಿಗೆ ಬೆಳ್ಳಿ ಪದಕ ಗೆದ್ದಿದೆ. ಈ ಹಿಂದೆ ಮೊಹಿಂದರ್ ಸಿಂಗ್ ಗಿಲ್ 1970 ರಲ್ಲಿ ಕಂಚಿನ ಪದಕ ಗೆದ್ದರು. ಇದಾದ ನಂತರ ಮೊಹಿಂದರ್ ಸಿಂಗ್ ಗಿಲ್ 1974 ರಲ್ಲಿ ಬೆಳ್ಳಿ ಪದಕ ಪಡೆದರು. 2010 ರಲ್ಲಿ ರಂಜಿತ್ ಮಹೇಶ್ವರಿ ಮತ್ತು 2014 ರಲ್ಲಿ ಅರ್ಪಿಂದರ್ ಸಿಂಗ್ ಕಂಚಿನ ಪದಕವನ್ನು ಗೆದ್ದರು. ಇದೀಗ ಪಾಲ್ ಚಿನ್ನ ಹಾಗೂ ಅಬ್ದುಲ್ಲಾ ಬೆಳ್ಳಿ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ