Mysore
20
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಗೆದ್ದ ಭಾರತ : ಮಲೇಷ್ಯಾ ವಿರುದ್ಧ 4-3 ಅಂತರದ ರೋಚಕ ಜಯ

ಚೆನ್ನೈ : ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ-2023 ಫೈನಲ್‌ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಭಾರತ ರೋಚಕ ಜಯ ಸಾಧಿಸಿದೆ. ಆ ಮೂಲಕ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿಯನ್ನು ಭಾರತ ತನ್ನದಾಗಿಸಿಕೊಂಡಿದೆ.

ಚೆನ್ನೈನಲ್ಲಿ ಶನಿವಾರ ನಡೆದ ಫೈನಲ್‌ ಪಂದ್ಯದಲ್ಲಿ ಭಾರತ 4-3 ಅಂತರದಲ್ಲಿ ಮಲೇಷ್ಯಾ ವಿರುದ್ಧ ವಿರೋಚಿತ ಜಯ ಗಳಿಸಿತು. ಆ ಮೂಲಕ ACT ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

ರಣರೋಚಕ ಆಟದಲ್ಲಿ ಮೊದಲ ಕ್ವಾರ್ಟರ್‌ನಲ್ಲಿ ಭಾರತದ ಜುಗರಾಜ್ ಸಿಂಗ್ ಗೋಲು ಗಳಿಸಿ ಭಾರತಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು. ಆದರೆ ಮಲೇಷ್ಯಾದ ಕಮಲ್ ಅಬು ಅರ್ಜೈ 1-1 ರಿಂದ ಸಮಬಲ ಸಾಧಿಸಿದರು. ನಂತರ ಎರಡನೇ ಕ್ವಾರ್ಟರ್‌ನಲ್ಲಿ ರಾಝೀ ರಹೀಮ್ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ ಮಲೇಷ್ಯಾಗೆ 2-1 ಗೋಲು ಗಳಿಸಿದರು. ಅಮಿನುದ್ದೀನ್ ಮುಹಮ್ಮದ್ ಎರಡನೇ ಕ್ವಾರ್ಟರ್‌ನಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ 3-1 ಗೋಲು ಗಳಿಸಿದರು.

ಈ ವೇಳೆ ಭಾರತ ಮತ್ತೆ ಪುಟಿದೆದ್ದಿತು. ಮೂರನೇ ಕ್ವಾರ್ಟರ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಸ್ಟ್ರೋಕ್ ಅನ್ನು 2-3 ಗೆ ಪರಿವರ್ತಿಸಿದರು. ನಂತರ ಗುರ್ಜಂತ್ 3-3 ಮೂಲಕ ಸಮಬಲಕ್ಕೆ ತಂದರು. ಕೊನೆಯದಾಗಿ ಆಕಾಶದೀಪ್ ಗೋಲ್‌ ನೀಡುವ ಮೂಲಕ ACT ಪ್ರಶಸ್ತಿಯನ್ನು ಭಾರತ ಮುಡಿಗೇರಿಸಿಕೊಳ್ಳಲು ಸಹಾಯ ಮಾಡಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!