Mysore
26
broken clouds
Light
Dark

IND vs SA 2nd Test: ಮೊದಲ ದಿನವೇ ಮೊದಲ ಇನ್ನಿಂಗ್ಸ್‌ ಮುಕ್ತಾಯ; ದ. ಆಫ್ರಿಕಾಗೆ 36 ರನ್‌ ಹಿನ್ನಡೆ

ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ಟೀಮ್‌ ಇಂಡಿಯಾ ಸದ್ಯ ಟೆಸ್ಟ್‌ ಸರಣಿಯಲ್ಲಿ ನಿರತವಾಗಿದ್ದು, ಮೊದಲ ಟೆಸ್ಟ್‌ ಪಂದ್ಯದಲ್ಲಿ ಸೋತ ಬಳಿಕ ಇದೀಗ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಪುಟಿದೆದ್ದಿದೆ. ಇಂದಿನಿಂದ ( ಜನವರಿ 3 ) ಎರಡನೇ ಟೆಸ್ಟ್‌ ಪಂದ್ಯ ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಪಂದ್ಯದ ಮೊದಲ ದಿನವೇ ಎರಡೂ ತಂಡಗಳೂ ಸಹ ಮೊದಲ ಇನ್ನಿಂಗ್ಸ್‌ ಬ್ಯಾಟಿಂಗ್‌ ಮುಗಿಸಿವೆ.

ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ ಭಾರತದ ಬೌಲಿಂಗ್‌ ದಾಳಿಗೆ ತತ್ತರಿಸಿ ಮೊದಲ ಇನ್ನಿಂಗ್ಸ್‌ನಲ್ಲಿ 23.2 ಓವರ್‌ಗೆ ಕೇವಲ 55 ರನ್‌ಗಳಿಗೆ ಆಲ್ ಔಟ್‌ ಆಗಿತ್ತು. ಬಳಿಕ ಬ್ಯಾಟಿಂಗ್‌ ಮಾಡಿದ ಭಾರತ ತಂಡ 34.5 ಓವರ್‌ಗಳಲ್ಲಿ 153 ರನ್‌ಗಳಿಗೆ ಆಲ್‌ಔಟ್‌ ಆಯಿತು.

ಸದ್ಯ ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್‌ ಬ್ಯಾಟಿಂಗ್‌ ಆರಂಭಿಸಿದ್ದು, ಮೊದಲ ದಿನದಾಟದಂತ್ಯಕ್ಕೆ 17 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 62 ರನ್‌ ಕಲೆಹಾಕಿದೆ. ಹರಿಣಗಳು ಇನ್ನೂ 36 ರನ್‌ಗಳ ಹಿನ್ನಡೆಯಲ್ಲಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಡೀನ್‌ ಎಲ್ಗರ್‌ 12, ಟೋನಿ ಡಿ ಝೋರ್ಝಿ 1, ಟ್ರಿಸ್ಟನ್‌ ಸ್ಟಬ್ಸ್‌ 1 ರನ್‌ ಗಳಿಸಿದ್ದು, ಏಡನ್‌ ಮಾರ್ಕ್ರಮ್‌ ಅಜೇಯ 36 ಹಾಗೂ ಡೇವಿಡ್‌ ಬೆಡಿಂಗ್‌ಹ್ಯಾಮ್‌ ಅಜೇಯ 7 ರನ್‌ ಕಲೆಹಾಕಿದ್ದಾರೆ.

ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್: ಭಾರತದ ಪರ ಮೊಹಮ್ಮದ್‌ ಸಿರಾಜ್‌ 6 ವಿಕೆಟ್‌ಗಳನ್ನು ಕಬಳಿಸಿ ಭರ್ಜರಿ ಪ್ರದರ್ಶನ ನೀಡಿದರೆ, ಜಸ್‌ಪ್ರೀತ್‌ ಬುಮ್ರಾ ಹಾಗೂ ಮುಖೇಶ್‌ ಕುಮಾರ್‌ ತಲಾ ಒಂದೊಂದು ವಿಕೆಟ್‌ ಪಡೆದರು. ದಕ್ಷಿಣ ಆಫ್ರಿಕಾ ಪರ ಏಡನ್‌ ಮಾರ್ಕ್ರಮ್‌ 2, ಡೀನ್‌ ಎಲ್ಗರ್‌ 4, ಟೋನಿ ಡಿ ಝೋರ್ಝಿ 2, ಟ್ರಿಸ್ಟನ್‌ ಸ್ಟಬ್ಸ್‌ 3, ಡೇವಿಡ್‌ ಬೆಡಿಂಗ್‌ಹ್ಯಾಮ್‌ 12, ಕೈಲ್‌ ವೆರೆಯ್ನ್‌ 15, ಮಾರ್ಕೊ ಯಾನ್‌ಸೆನ್‌ 0, ಕೇಶವ್‌ ಮಹಾರಾಜ್‌ 3, ಕಗಿಸೋ ರಬಾಡಾ 5, ನಾಂದ್ರೆ ಬರ್ಗರ್‌ 4 ಹಾಗೂ ಲುಂಗಿ ಎನ್‌ಗಿಡಿ ಯಾವುದೇ ರನ್‌ ಗಳಿಸದೇ ಅಜೇಯರಾಗಿ ಉಳಿದರು.‌

ಭಾರತ ಮೊದಲ ಇನ್ನಿಂಗ್ಸ್: ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಪರ ನಾಯಕ ರೋಹಿತ್‌ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಶುಭ್‌ಮನ್‌ ಗಿಲ್ ಹೊರತುಪಡಿಸಿ ಇನ್ಯಾವುದೇ ಆಟಗಾರ ಸಹ ಎರಡಂಕೆ ಮುಟ್ಟುವಲ್ಲಿ ಯಶಸ್ವಿಯಾಗಲಿಲ್ಲ. ಯಶಸ್ವಿ ಜೈಸ್ವಾಲ್‌ ಶೂನ್ಯ, ರೋಹಿತ್‌ ಶರ್ಮಾ 39, ಶುಭ್‌ಮನ್‌ ಗಿಲ್‌ 36, ವಿರಾಟ್‌ ಕೊಹ್ಲಿ 46, ಶ್ರೇಯಸ್‌ ಅಯ್ಯರ್‌ ಶೂನ್ಯ, ಕೆಎಲ್‌ ರಾಹುಲ್‌ 8 ರನ್‌ ಗಳಿಸಿದರೆ, ಬಳಿಕ ಕಣಕ್ಕಿಳಿದ ರವೀಂದ್ರ ಜಡೇಜಾ, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌, ಪ್ರಸಿದ್ಧ್‌ ಕೃಷ್ಣ ಡಕ್‌ಔಟ್‌ ಆದರು ಹಾಗೂ ಯಾವುದೇ ರನ್‌ ಗಳಿಸದ ಮುಖೇಶ್‌ ಕುಮಾರ್‌ ಸಹ ಡಕ್‌ಔಟ್‌ ಆದರು. ದಕ್ಷಿಣ ಆಫ್ರಿಕಾ ಪರ ಕಗಿಸೊ ರಬಾಡಾ, ಲುಂಗಿ ಎನ್‌ಗಿಡಿ ಹಾಗೂ ನಾಂದ್ರೆ ಬರ್ಗರ್‌ ತಲಾ 3 ವಿಕೆಟ್‌ ಪಡೆದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ