Mysore
21
few clouds

Social Media

ಮಂಗಳವಾರ, 27 ಜನವರಿ 2026
Light
Dark

ಟೀಂ ಇಂಡಿಯಾ-ಸೌಥ್‌ ಆಫ್ರಿಕಾ ನಡುವಣ ಟಿ20 ಸರಣಿ ವೇಳಾಪಟ್ಟಿ ಪ್ರಕಟ!

ನವದೆಹಲಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ನಾಲ್ಕು ಟಿ20 ಪಂದ್ಯಗಳ ಸರಣಿ ವೇಳಾಪಟ್ಟಿಯನ್ನು ಐಸಿಸಿ ಪ್ರಕಟಿಸಿದೆ. ಟಿ20 ವಿಶ್ವಕಪ್‌ ಮುಗಿದ ಬಳಿಕ ಭಾರತ ತಂಡ ದಕ್ಷಿಣ ಆಫ್ರಿಕಾದೊಂದಿಗೆ ನಾಲ್ಕು ಪಂದ್ಯಗಳ ಟಿ20 ಸರಣಿ ಆಡಲಿದೆ.

ಟಿ20 ವಿಶ್ವಕಪ್‌ ಮುಗಿದ ಬೆನ್ನಲ್ಲೇ ಟೀಂ ಇಂಡಿಯಾ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ. ನಂತರ ತವರಿನಲ್ಲಿ ಬಾಂಗ್ಲಾದೇಶದ ವಿರುದ್ಧ ಟೆಸ್ಟ್‌ ಹಾಗೂ ಟಿ20 ಸರಣಿ ಆಡಲಿದೆ. ಇದರ ಬೆನ್ನಲ್ಲೇ ನ್ಯೂಜಿಲೆಂಡ್‌ ಪ್ರವಾಸ ಆರಂಭವಾಗಲಿದ್ದು, ಇದಾದ ಬಳಿಕ ಟೀಮ ಇಂಡಿಯಾ ಹರಿಣಗಳ ಬೇಟೆಗಾಗಿ ಆಫ್ರಿಕಾಗೆ ಪ್ರವಾಸ ಮಾಡಲಿದೆ.

ಟೀಮ್‌ ಇಂಡಿಯಾ ವೇಳಾಪಟ್ಟಿ: ಭಾರತ ತಂಡ ವಿಶ್ವಕಪ್‌ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ನಾಲ್ಕು ಪಂದ್ಯಗಳ ಟಿ20 ಸರಣಿ ಆಡಲಿದೆ. ನವೆಂಬರ್‌ 8ರಿಂದ ಆರಂಭವಾಗಲಿರುವ ಸರಣಿ ನವೆಂಬರ್‌ 15ಕ್ಕೆ ಕೊನೆಯಾಗಲಿದೆ.

ಟಿ20 ಸರಣಿ ಸಂಪೂರ್ಣ ವೇಳಾಪಟ್ಟಿ

ನವೆಂಬರ್‌. 8: ಮೊದಲ ಟಿ20- ಕಿಂಗ್ಸ್‌ಮೀಡ್‌ ಸ್ಟೇಡಿಯಂ, ಡರ್ಬನ್‌

ನವೆಂಬರ್‌. 10: ಎರಡನೇ ಟಿ20- ಸೇಂಟ್‌ ಜಾರ್ಜ್‌ ಪಾರ್ಕ್‌ ಸ್ಟೇಡಿಯಂ, ಗ್ಕೆಬರ್ಹಾ

ನವೆಂಬರ್‌. 13: ಮೂರನೇ ಟಿ20- ಸೂಪರ್‌ಸೋರ್ಟ್‌ ಪಾರ್ಕ್‌, ಸೆಂಚೂರಿಯನ್‌

ನವೆಂಬರ್‌. 15: ನಾಲ್ಕನೇ ಟಿ20- ದಿ ವಾಂಡರರ್ಸ್‌ ಸ್ಟೇಡಿಯಂ, ಜೋಹಾನ್ಸ್‌ಬರ್ಗ್‌

ಕಳೆದ ವರ್ಷ ದ್ವಿಪಕ್ಷೀಯ ಸರಣಿಯಲ್ಲಿ ಮೂರು ಮಾದರಿಯ ಪಂದ್ಯಾವಳಿಯಲ್ಲಿ ಟಿ20 ಪಂದ್ಯದಲ್ಲಿ 1-1 ಅಂತರದಿಂದ ಸಮಬಲ ಸಾಧಿಸಿತ್ತು. ಇನ್ನು ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಹರಿಣಗಳನ್ನು 2-1 ಅಂತರದಿಂದ ರೋಚಕವಾಗಿ ಸೋಲಿಸಿತ್ತು. ಇನ್ನು ಎರಡು ಟೆಸ್ಟ್‌ ಪಂದ್ಯದಲ್ಲಿ ಇತ್ತಂಡಗಳು 1-1 ಅಂತರದಿಂದ ಸಮಬಲ ಸಾಧಿಸಿದ್ದವು.

Tags:
error: Content is protected !!