Mysore
24
few clouds

Social Media

ಸೋಮವಾರ, 17 ಫೆಬ್ರವರಿ 2025
Light
Dark

ಸಿಡ್ನಿ ಟೆಸ್ಟ್ ಸೋತ ಭಾರತ: 10 ವರ್ಷಗಳ ನಂತರ ಕೈತಪ್ಪಿದ ಬಾರ್ಡರ್‌-ಗವಾಸ್ಕರ್‌ ಟ್ರೋಫಿ

ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕೊನೆಯ ಟೆಸ್ಟ್‌ ಪಂದ್ಯದಲ್ಲಿ ಭಾರತ ಸೋಲುವ ಮೂಲಕ 10 ವರ್ಷದ ಬಳಿಕ ಬಾರ್ಡರ್‌-ಗವಾಸ್ಕರ್‌ ಟ್ರೋಫಿಯನ್ನು ಕಳೆದುಕೊಂಡಿದೆ.

BGT ಟ್ರೋಫಿಯ 5ನೇ ಟೆಸ್ಟ್‌ ಪಂದ್ಯದ ಮೂರನೇ ದಿನದಲ್ಲಿ ಭಾರತ 162 ರನ್‌ಗಳ ಗುರಿ ನೀಡಿತು. ಆಸ್ಟ್ರೇಲಿಯಾ ತಂಡ 4 ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟುವ ಮೂಲಕ 3-1 ಅಂತರದಿಂದ ಸರಣಿಯನ್ನು ಕೈವಶ ಮಾಡಿಕೊಂಡಿದೆ.

ಎರಡನೇ ದಿನದಾಂತ್ಯಕ್ಕೆ 6 ವಿಕೆಟ್‌ ಕಳೆದುಕೊಂಡು 141 ರನ್‌ಗಳಿಸಿದ್ದ ಭಾರತ ಮೂರನೇ ದಿನದಲ್ಲಿ ಕೇವಲ 16 ರನ್‌ ಸೇರಿಸಿ ಆಲೌಟ್‌ ಆಗುವ ಮೂಲಕ ಆಸ್ಟ್ರೇಲಿಯಾಗೆ 162 ರನ್‌ಗಳ ಗುರಿ ನೀಡಿತು.

ಈ ಗುರಿ ಬೆನ್ನಟ್ಟಿದ ಆಸೀಸ್‌ನ ಬ್ಯಾಟರ್‌ಗಳು ಆರಂಭದಲ್ಲಿ ಸುಲಭ ಗೆಲುವ ದಾಖಲಿಸುವ ಮುನ್ಸೂಚನೆ ನೀಡಿದರು. ಆದರೆ ಇಂಡಿಯಾದ ಬೌಲರ್ ಪ್ರಸಿದ್ಧ ಕೃಷ್ಣ‌, ಆಸ್ಟ್ರೇಲಿಯಾ ಬ್ಯಾಟರ್‌ಗಳನ್ನು ಪೆವಿಲಿಯನ್‌ ಹಾದಿ ಹಿಡಿಸುವ ಮೂಲಕ ಸ್ವಲ್ಪ ಮಟ್ಟಿಗೆ ಬಿಗಿ ಹಿಡಿತ ಸಾಧಿಸಿದರು.

ಆದರೆ ಕೊನೆಯಲ್ಲಿ ಟ್ರಾವಿಸ್‌ ಹೆಡ್‌ 34(38) ಹಾಗೂ ವೆಬ್‌ಸ್ಟರ್‌ 39(34) ರನ್‌ ಗಳಿಸಿ ಆಸ್ಟ್ರೇಲಿಯಾ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ 10 ವರ್ಷಗಳ ನಂತರ ಬಾರ್ಡರ್‌-ಗವಾಸ್ಕರ್‌ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

ಆಸ್ಟ್ರೇಲಿಯಾ ವಿರುದ್ಧ ಈ ಹಿಂದಿನ 4 ಸರಣಿಗಳಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿತ್ತು. ತವರಿನಲ್ಲಿ ಹಾಗೂ ಆಸ್ಟ್ರೇಲಿಯಾದಲ್ಲಿ ತಲಾ ಎರಡು ಸರಣಿಗಳಲ್ಲಿ ಭಾರತ ಗೆದ್ದಿತ್ತು.

Tags: