Mysore
21
overcast clouds

Social Media

ಗುರುವಾರ, 17 ಜುಲೈ 2025
Light
Dark

IND vs ENG test series: ಸರಣಿ ವೇಳಾಪಟ್ಟಿ, ನೇರ ಪ್ರಸಾರದ ಮಾಹಿತಿ ಇಲ್ಲಿದೆ

ಹೈದರಾಬಾದ್‌: ಬಹು ನಿರೀಕ್ಷಿತ ಆಂಗ್ಲೋ-ಇಂಡಿಯನ್‌ ಕದನಕ್ಕೆ ಕ್ಷಣಗಣನೆ ಶುರುವಾಗಿದೆ. ದಕ್ಷಿಣ ಆಫ್ರಿಕಾ ಸರಣಿ ಸಮಬಲ ಸಾಧಿಸಿ ತವರಿಗೆ ಮರಳಿರುವ ರೋಹಿತ್‌ ಬಳಗಕ್ಕೆ ಬೆನ್‌ಸ್ಟೋಕ್ಸ್‌ ಸಾರಥ್ಯದ ಇಂಗ್ಲೆಂಡ್‌ ತಂಡ ಐದು ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ ಸವಾಲೊಡ್ಡಲಿದೆ.

ಜನವರಿ 25 ರಿಂದ ಆರಂಭವಾಗುವ ಐದು ಟೆಸ್ಟ್‌ ಪಂದ್ಯಗಳ ಸರಣಿ ಮಾರ್ಚ್‌ 11 ಕ್ಕೆ ಮುಕ್ತಾಯಗೊಳ್ಳಲಿದೆ.

ಈ ಆಂಗ್ಲೋ-ಇಂಡಿಯನ್‌ ಸರಣಿಯೂ ಎಲ್ಲಿ?, ಯಾವಾಗ? ಮತ್ತು ಯಾವುದರಲ್ಲಿ ನೇರ ಪ್ರಸಾರ ವೀಕ್ಷಣೆ ಮಾಡಬಹುದು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ!

ಭಾರತ ಕ್ರಿಕೆಟ್ ತಂಡ ತನ್ನ ಮುಂದಿನ ಸರಣಿಯನ್ನು ಪ್ರವಾಸಿ ಇಂಗ್ಲೆಂಡ್ ವಿರುದ್ಧ ಆಡಲಿದೆ. ಐದು ಪಂದ್ಯಗಳ ಟೆಸ್ಟ್ ಸರಣಿ ಇದಾಗಿದ್ದು, ಮೊಲದ ಟೆಸ್ಟ್‌ ಪಂದ್ಯ ಜನವರಿ 25 ರಂದು ಆರಂಭವಾಗಲಿದೆ.

ವೇಳಾಪಟ್ಟಿ:

ಮೊದಲ ಪಂದ್ಯ ಜನವರಿ 25-29, ಹೈದರಾಬಾದ್‌ನ ರಾಜೀವ್‌ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣ
ಎರಡನೇ ಪಂದ್ಯ ಫೆಬ್ರವರಿ 2-6, ವಿಶಾಖಪಟ್ಟಣಂನ ವೈಎಸ್‌ಆರ್‌ ಕ್ರೀಡಾಂಗಣ
ಮೂರನೇ ಪಂದ್ಯ ಫೆ. 15-19, ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣ
ನಾಲ್ಕನೇ ಟೆಸ್ಟ್‌ ಪಂದ್ಯ ಫೆ. 23-27, ರಾಂಚಿಯ ಜೆಎಸ್‌ಸಿಎ ಅಂತರಾಷ್ಟ್ರೀಯ ಕ್ರೀಡಾಂಗಣ
ಐದನೇ ಪಂದ್ಯ ಮಾರ್ಚ್ 7-11, ಧರ್ಮಶಾಲಾದ ಹಿಮಾಚಲ ಪ್ರದೇಶ್‌ ಕ್ರಿಕೆಟದದ ಅಸೋಸಿಯೆಷನ್‌ ಕ್ರೀಡಾಂಗಣ

ಸಮಯ: ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಬೆಳಿಗ್ಗೆ 9.30ಕ್ಕೆ ಆರಂಭವಾಗಲಿವೆ.

ನೇರಪ್ರಸಾರ: ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಟೆಸ್ಟ್‌ ಸರಣಿಯನ್ನು ಜಿಯೋ ಸಿನಿಮಾದಲ್ಲಿ ಲೈವ್‌ ಸ್ಟ್ರೀಮಿಂಗ್‌ ಮತ್ತು ಸ್ಪೋರ್ಟ್ಸ್ 18 ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ವೀಕ್ಷಣೆ ಮಾಡಬಹುದು.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ ), ಶುಭ್‌ಮನ್‌ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆಎಲ್ ರಾಹುಲ್ (ವಿಕೇಟ್ ಕೀಪರ್), ಕೆಎಸ್ ಭರತ್ (ವಿಕೇಟ್ ಕೀಪರ್), ಧ್ರುವ್ ಜುರೆಲ್ (ವಿಕೇಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್‌ ಪಟೇಲ್, ಕುಲ್ದೀಪ್‌ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಅವೇಶ್ ಖಾನ್.

ಇಂಗ್ಲೆಂಡ್​ ತಂಡ: ಬೆನ್ ಸ್ಟೋಕ್ಸ್ (ನಾಯಕ), ರೆಹಾನ್ ಅಹ್ಮದ್, ಜೇಮ್ಸ್ ಅ್ಯಂರ್ಸನ್, ಗಸ್ ಅಟ್ಕಿನ್ಸನ್ , ಜಾನಿ ಬೈರ್‌ಸ್ಟೋವ್, ಶೋಯೆಬ್ ಬಶೀರ್, ಹ್ಯಾರಿ ಬ್ರೂಕ್, ಝಾಕ್ ಕ್ರಾಲಿ, ಬೆನ್ ಡಕೆಟ್, ಬೆನ್ ಫೋಕ್ಸ್, ಟಾಮ್ ಹಾರ್ಟ್ಲಿ, ಜ್ಯಾಕ್ ಲೀಚ್, ಒಲ್ಲಿ ಪೋಪ್, ಆಲಿ ರಾಬಿನ್ಸನ್, ಜೋ ರೂಟ್, ಮಾರ್ಕ್ ವುಡ್.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!