Mysore
30
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

IND vs END 1st test: ಮೊದಲ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್‌ ಆಲ್‌ಔಟ್‌; ಟೀಂ ಇಂಡಿಯಾ 119/1

ಹೈದರಾಬಾದ್‌: ಇಲ್ಲಿನ ರಾಜೀವ್‌ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಉತ್ತಮಪ್ರದರ್ಶನ ತೋರಿರುವ ಟೀಂ ಇಂಡಿಯಾ, ಎರಡನೇ ದಿನಕ್ಕೆ ತನ್ನ ಆಟ ಕಾಯ್ದಿರಿಸಿಕೊಂಡಿದೆ.

ಟಾಸ್‌ಗೆದ್ದು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 246ರನ್‌ ಗಳಿಗೆ ಆಲ್‌ಔಟ್‌ ಆಯಿತು. ಇದನ್ನು ಚೇಸ್‌ ಮಾಡಲು ಹೊರಟ ಟೀಂ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 1 ವಿಕೆಟ್‌ ಕಳೆದುಕೊಂಡು 119 ರನ್‌ ಗಳಿಸಿ ಎರಡನೇ ದಿನಕ್ಕೆ ಆಟ ಕಾಯ್ದಿರಿಸಿಕೊಂಡಿದೆ.

ಬೇಝ್‌ ಬಾಲ್‌ ಕ್ರಿಕೆಟ್‌ಗೆ ಹೆಸರುವಾಸಿಯಾಗಿರುವ ಇಂಗ್ಲೆಂಡ್‌ ಆರಂಭದಲ್ಲಿಯೇ ಅಬ್ಬರಿಸಲು ಮುಂದಾದರು ಸಹಾ ಟೀಂ ಇಂಡಿಯಾ ಬೌಲಿಂಗ್‌ ದಾಳಿಗೆ ತತ್ತರಿಸಿ ಹೋಯಿತು. ಅಂದುಕೊಂಡಂತೆ ನರೀಕ್ಷಿತ ಆಟ ಕಂಡು ಬರಲಿಲ್ಲ. ನಾಯಕ ಬೆನ್‌ ಸ್ಟೋಕ್ಸ್‌ (70) ಹೊರತು ಪಡಿಸಿ ಬೇರಾರಿಂದಲೂ ಅರ್ಧ ಶತಕ ಕಾಣಲಿಲ್ಲ. ಜಾನಿ ಬೇರ್‌ಸ್ಟೋ (37) ಮತ್ತು ಬೆಲ್‌ ಡಕೆಟ್‌ (35) ತಂಡ 200 ಗಡಿ ದಾಟಲು ಸಹಕರಿಸಿದರು. ಉಳಿದಂತೆ ಇಂಗ್ಲೆಂಡ್‌ ಆಟಗಾರರು ಪೆವಿಲಿಯನ್‌ ಪೆರೇಡ್‌ ನಡೆಸಿದರು.

ಟೀಂ ಇಂಡಿಯಾದ ಬೌಲಿಂಗ್‌ ದಾಳಿಗೆ ನಲುಗಿದ ಆಂಗ್ಲ ಪಡೆ 64.3 ಓವರ್‌ಗಳಲ್ಲಿ ಆಲ್‌ಔಟ್‌ ಆಗಿ 246ರನ್‌ ಕೆಲಹಾಕಿ ತನ್ನ ಮೊದಲ ಇನ್ನಿಂಗ್ಸ್‌ ಮುಗಿಸಿತು. ಟೀಂ ಇಂಡಿಯಾ ಪರವಾಗಿ ಅಶ್ವಿನ್‌ ಮತ್ತು ಜಡೇಜಾ ತಲಾ ಮೂರು ವಿಕೆಟ್‌ ಪಡೆದು ಮಿಂಚಿದರೆ, ಬುಮ್ರಾ ಮತ್ತು ಅಕ್ಷರ್‌ ಪಟೇಲ್‌ ತಲಾ ಎರಡು ವಿಕೆಟ್‌ ಪಡೆದು ಗಮನ ಸೆಳೆದರು.

ಇತ್ತ ತನ್ನ ಮೊದಲ ಇನ್ನಿಂಗ್ಸ್‌ ಆರಂಭಿಸಿದ ಭಾರತ ತಂಡ 23 ಓವರ್‌ಗಳಲ್ಲಿ ಒಂದು ವಿಕೆಟ್‌ ಕಳೆದುಕೊಂಡು 119ರನ್‌ ಕಲೆಹಾಕಿತು. ನಾಯಕ ರೋಹಿತ್‌ ಶರ್ಮಾ ಮತ್ತು ಆರಂಭಿಕ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ನಾಯಕ ರೋಹಿತ್‌ 24 ರನ್‌ ಗಳಿಸಿ ಜಾಕ್‌ ಲೀಚ್‌ಗೆ ವಿಕೆಟ್‌ ಒಪ್ಪಿಸಿ ಹೊರ ನಡೆದರು. ಇಂಗ್ಲೆಂಡ್‌ ಆಟವನ್ನು ಅವರಿಗೆ ಪರಿಚಯಿಸಿದ ಜೈಸ್ವಾಲ್‌ 70 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್‌ ಸಹಿತ 76 ರನ್‌ ಕಲೆಹಾಕಿ ಕ್ರೀಸ್‌ ನಲ್ಲಿದ್ದಾರೆ. ಇವರಿಗೆ ಜೊತೆಯಾಗಿ ಶುಭ್‌ಮನ್‌ ಗಿಲ್‌ 14 ರನ್‌ ಬಾರಿಸಿ ನಾಟ್‌ಔಟ್‌ ಆಗಿ ಉಳಿದಿದ್ದಾರೆ.

ಇಂಗ್ಲೆಂಡ್‌ ಮೊಲದ ದಿನದಾಟದಂತ್ಯಕ್ಕೆ 127 ರನ್‌ ಗಳ ಮುನ್ನಡೆ ಕಾಯ್ದುಕೊಂಡಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ