ಚೆನ್ನೈ: ನಗರದ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ ತಿಲಕ್ ವರ್ಮಾ 72(55) ಅವರ ಅರ್ಧಶತಕದ ನೆರವಿನಿಂದ ಭಾರತ ವಿರೋಚಿತ ಗೆಲುವು ಸಾಧಿಸಿದೆ. ಆ ಮೂಲಕ ಸರಣಿಯಲ್ಲಿ 2-0 ಮುನ್ನಡೆ ಗಳಿಸಿದೆ.
ಟಾಸ್ ಗೆದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ನಾಯಕ ಜೋಶ್ ಬಟ್ಲರ್ 45(30) ರನ್ ಪೇರಿಸುವ ಮೂಲಕ ಇಂಗ್ಲೆಂಡ್ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕುವಲ್ಲಿ ನೆರವಾದರು.
ಟೀಂ ಇಂಡಿಯಾ ಪರ ಅಕ್ಷರ್ ಹಾಗೂ ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಪಡೆದರೆ, ಉಳಿದವರು ಒಂದೊಂದು ವಿಕೆಟ್ ಪಡೆದರು.
ಈ ಗುರಿ ಬೆನ್ನತ್ತಿದ ಭಾರತ ತಂಡ, ತಿಲಕ್ ವರ್ಮಾ 72(55) ಅವರ ಅರ್ಧಶತಕದ ನೆರವಿನಿಂದ 19.2 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಇಂಗ್ಲೆಂಡ್ ಇನ್ನಿಂಗ್ಸ್: ಪಿಲ್ ಸಾಲ್ಟ್ 4, ಡಕೆಟ್ 3, ಜೋಸ್ ಬಟ್ಲರ್ 45, ಹ್ಯಾರಿ ಬ್ರೂಕ್ 13, ಲಿವಿಂಗ್‌ಸ್ಟೋನ್ 13, ಸ್ಮಿತ್ 22, ಜಾಮಿ ಓವರ್ಟನ್ 5, ಬ್ರಿಡನ್ ಕಾರ್ಸ್ 31, ಆರ್ಚರ್ 12, ಅದಿಲ್ ರಶೀದ್ 10, ಮಾರ್ಕ್ ವುಡ್ 5.
ಭಾರತದ ಪರ ವರುಣ್ ಚಕ್ರವರ್ತಿ ಹಾಗೂ ಅಕ್ಷರ್ ಪಟೇಲ್ 2 ವಿಕೆಟ್ ಮತ್ತು ಅರ್ಷದೀಪ್ ಸಿಂಗ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್ ಹಾಗೂ ಅಭಿಷೇಕ್ ಶರ್ಮಾ ತಲಾ 1 ವಿಕೆಟ್ ಪಡೆದರು.
ಭಾರತದ ಇನ್ನಿಂಗ್ಸ್: ಸಂಜು ಸ್ಯಾಮ್ಸನ್ 5, ಅಭಿಷೇಕ್ ಶರ್ಮಾ 12, ತಿಲಕ್ ವರ್ಮಾ 72, ಸೂರ್ಯಕುಮಾರ್ ಯಾದವ್ 12, ದ್ರುವ್ ಜುರೆಲ್ 4, ಹಾರ್ದಿಕ್ ಪಾಂಡ್ಯ 7, ವಾಷಿಂಗ್ಟನ್ ಸುಂದರ್ 26, ಅಕ್ಷರ್ ಪಟೇಲ್ 2, ಅರ್ಷದೀಪ್ ಸಿಂಗ್ 6, ರವಿ ಬಿಷ್ಣೋಯಿ 9.
ಇಂಗ್ಕೆಂಡ್ ಪರ ಬ್ರಿಡನ್ ಕಾರ್ಸ್ 3 ವಿಕೆಟ್ ಹಾಗೂ ಜೋಫ್ರಾ ಆರ್ಚರ್, ಮಾರ್ಕ್ ವುಡ್, ಅದಿಲ್ ರಶೀದ್, ಹಜಾಮಿ ಓವರ್ಟನ್ ಮತ್ತು ಲಿವಿಂಗ್‌ಸ್ಟೋನ್ ತಲಾ 1 ವಿಕೆಟ್ ಪಡೆದರು.