Mysore
28
light rain

Social Media

ಬುಧವಾರ, 25 ಜೂನ್ 2025
Light
Dark

ಐಸಿಸಿ ವಿಶ್ವಕಪ್: ವಾರ್ನರ್-ಮಾರ್ಷ್ ಶತಕ: ಪಾಕಿಸ್ತಾನಕ್ಕೆ 368 ರನ್ ಗುರಿ ನೀಡಿದ ಆಸ್ಟ್ರೇಲಿಯಾ

ಬೆಂಗಳೂರು : ಐಸಿಸಿ ವಿಶ್ವಕಪ್ 2023ರ ಇಂದಿನ ಪಂದ್ಯದಲ್ಲಿ, ಟೂರ್ನಿಯ ಎರಡು ಬಲಿಷ್ಠ ತಂಡಗಳಾದ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದು ಆಸ್ಟ್ರೇಲಿಯಾ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 367 ರನ್ ಪೇರಿಸಿದೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಪರ ಆರಂಭಿಕ ಜೋಡಿ ಡೇವಿಡ್ ವಾರ್ನರ್(163) ಮತ್ತು ಮಿಚೆಲ್ ಮಾರ್ಷ್(121) ಅವರ ಶತಕಗಳ ಆಧಾರದ ಮೇಲೆ ಪಾಕಿಸ್ತಾನಕ್ಕೆ 368 ರನ್‌ಗಳ ಗುರಿಯನ್ನು ನೀಡಿದೆ.

34ನೇ ಓವರ್‌ನಲ್ಲಿ ಪಾಕಿಸ್ತಾನಕ್ಕೆ ಮೊದಲ ಯಶಸ್ಸು ಸಿಕ್ಕಿತು. ಆ ನಂತರ ಪಾಕಿಸ್ತಾನದ ಬೌಲರ್‌ಗಳು ಪ್ರಬಲರಾಗಿ ಆಸ್ಟ್ರೇಲಿಯಾ 400ರ ಗಡಿ ಮುಟ್ಟಲು ಬಿಡಲಿಲ್ಲ. ಶಾಹೀನ್ ಅಫ್ರಿದಿ ಐದು ವಿಕೆಟ್ ಪಡೆದರು. ಒಂದು ಸಮಯದಲ್ಲಿ ಆಸ್ಟ್ರೇಲಿಯಾ 400ಕ್ಕಿಂತ ಹೆಚ್ಚು ರನ್ ಗಳಿಸುತ್ತದೆ ಎಂದು ತೋರುತ್ತಿತ್ತು.

ಆದರೆ 259 ರನ್ ಗಳಿಸಿದ್ದಾಗ ಆಸ್ಟ್ರೇಲಿಯಾ ತನ್ನ ಮೊದಲ ಹೊಡೆತವನ್ನು ಪಡೆಯಿತು. ಇದರರ್ಥ ತಂಡವು 33 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 260 ರನ್ ಗಳಿಸಿತು. ಆದರೆ ಪಾಕಿಸ್ತಾನದ ಬೌಲರ್‌ಗಳು ಅದ್ಭುತ ಪುನರಾಗಮನ ಮಾಡಿದರು.

ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ ಹೊರತುಪಡಿಸಿದರೆ ಇನ್ಯಾವ ಬ್ಯಾಟರ್ ಸಹ ಸ್ಫೋಟಕ ಬ್ಯಾಟಿಂಗ್ ಮಾಡುವಲ್ಲಿ ವಿಫಲರಾದರು. ಸ್ಟೋಯ್ನಿಸ್ 21 ಮತ್ತು ಜೋಶ್ ಇಂಗ್ಲಿಸ್ 13 ರನ್ ಬಾರಿಸಿದರು.

ಪಾಕಿಸ್ತಾನ ಪರ ಶಾಹೀನ್ ಶಾ ಅಫ್ರಿದಿ 5, ಹ್ಯಾರಿಸ್ ರೂಫ್ 3 ಮತ್ತು ಉಸ್ಮಾನ್ ಮಿರ್ 1 ವಿಕೆಟ್ ಪಡೆದಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!