Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಐಸಿಸಿ ವಿಶ್ವಕಪ್ 23: ಭಾರತ- ಪಾಕ್ ಪಂದ್ಯಕ್ಕೆ ಜನಸಾಗರ, ಗೆಲುವಿಗಾಗಿ ಪ್ರಾರ್ಥನೆ

ಅಹಮದಾಬಾದ್ : ಐಸಿಸಿ  ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಿಂದಾಗಿ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದ ಹೊರಗೆ ಜನಸಾಗರವೇ ಕಂಡುಬಂದಿತು. ಅಭಿಮಾನಿಗಳು ಭಾರತ ತಂಡವನ್ನು ಹುರಿದುಂಬಿಸಲು ಸಜ್ಜಾಗಿದ್ದಾರೆ.

ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಬಗ್ಗು ಬಡಿದು ತನ್ನ ಗೆಲುವಿನ ಅಭಿಯಾನ ಮುಂದುವರೆಸುವ ವಿಶ್ವಾಸದಲ್ಲಿದ್ದರೆ, ಟೀಮ್ ಇಂಡಿಯಾ ವಿರುದ್ಧ ತಮ್ಮ ವಿಶ್ವಕಪ್ ಬರವನ್ನು ಕೊನೆಗೊಳಿಸಲು ಪಾಕ್ ಎದುರು ನೋಡುತ್ತಿದೆ.

ಬೆಳಗ್ಗೆಯಿಂದಲೇ ಕ್ರೀಡಾಂಗಣದ ಹೊರಗೆ ಅಭಿಮಾನಿಗಳು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂತು. ಅವರಲ್ಲಿ ಹಲವರು ಟ್ರೇಡ್‌ಮಾರ್ಕ್ ಬ್ಲೂ ಇಂಡಿಯನ್ ಕ್ರಿಕೆಟ್ ಟೀಮ್ ಜೆರ್ಸಿಗಳನ್ನು ಧರಿಸಿ, ಕೈಯಲ್ಲಿ ರಾಷ್ಟ್ರೀಯ ತ್ರಿವರ್ಣ ಧ್ವಜವನ್ನು ಹಿಡಿದು, ಇಂಡಿಯಾ” “ಇಂಡಿಯಾ” ಎಂದು ಕೂಗುತ್ತಿದ್ದರು. ಪಂದ್ಯ ವೀಕ್ಷಿಸಲು“ನಾವೆಲ್ಲರೂ ಉತ್ಸುಕರಾಗಿದ್ದೇವೆ. ರೋಹಿತ್ ಮತ್ತು ವಿರಾಟ್ ಇಂದು ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಭಾವಿಸುವುದಾಗಿ ಅಭಿಮಾನಿಯೊಬ್ಬರು ಹೇಳಿದರು.

https://x.com/ANI/status/1713054702093648135?s=20

ಭಾರತ ತನ್ನ ವಿಶ್ವಕಪ್ ಅಭಿಯಾನವನ್ನು ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನದ ವಿರುದ್ಧ ಗೆಲುವಿನೊಂದಿಗೆ ಪ್ರಾರಂಭಿಸಿದೆ. ಪಾಕಿಸ್ತಾನ ಕೂಡಾ ಎರಡು ಪಂದ್ಯಗಳಲ್ಲಿ ಎರಡು ವಿಜಯಗಳನ್ನು ಹೊಂದಿದ್ದು, ಇಂದಿನ ಪಂದ್ಯ ಉಭಯ ದೇಶಗಳಿಗೂ ಪ್ರಮುಖವಾಗಿದೆ.

https://x.com/ANI/status/1713050143275315563?s=20

ವಿರಾಟ್ ಕೊಹ್ಲಿ, ನಾಯಕ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್ ಮತ್ತು ಮೊಹಮ್ಮದ್ ಸಿರಾಜ್ ಅವರಂತಹ ಮೆಗಾಸ್ಟಾರ್‌ಗಳಾದ ಮೆನ್ ಇನ್ ಬ್ಲೂ ಪಾಕಿಸ್ತಾನದೊಂದಿಗೆ 50 ಓವರ್‌ಗಳ ವಿಶ್ವಕಪ್‌ಗಳಲ್ಲಿ ದೇಶದ ಗೆಲುವಿನ ಸರಣಿಯನ್ನು ಮುಂದುವರಿಸಲು ಮತ್ತು ತಮ್ಮ ಸ್ಥಿರ ಪ್ರದರ್ಶ ಮುಂದುವರಿಸುತ್ತಾರೆ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. ಮತ್ತೊಂದೆಡೆ ಪಾಕ್ ವಿರುದ್ಧ ಭಾರತದ ಗೆಲುವಿಗಾಗಿ ದೇಶದ ವಿವಿಧೆಡೆ ಪೂಜೆ, ಹವನ, ಪುನಸ್ಕಾರಗಳು ನಡೆಯುತ್ತಿವೆ. ಬಿಹಾರದಲ್ಲಿ ಭಾರತದ ಆಟಗಾರರ ಭಾವಚಿತ್ರವನ್ನು ಕೈಯಲ್ಲಿ ಹಿಡಿದು ಹೋಮ ನಡೆಸಲಾಯಿತು.

https://x.com/ANI/status/1713065414518026740?s=20

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ