Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ICC t20 worldcup 2024: ಆಸೀಸ್‌ ವಿರುದ್ಧ ಗೆದ್ದು ವರ್ಲ್ಡ್‌ಕಪ್‌ ಸೋಲಿಗೆ ಸೇಡು ತೀರಿಸಿಕೊಂಡ ಭಾರತ!

ಸೇಂಟ್‌ ಲೂಸಿಯಾ: ಇಲ್ಲಿನ ಡೆರೆನ್‌ ಸ್ಯಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಸೂಪರ್‌-8 ಹಂತದ ಪಂದ್ಯದಲ್ಲಿ ಆಸೀಸ್‌ ವಿರುದ್ಧ ಟೀಂ ಇಂಡಿಯಾ 24 ರನ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಆ ಮೂಲಕ ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್‌ ಫೈನಲ್‌ ಸೋಲಿಗೆ ಟೀಂ ಇಂಡಿಯಾ ಸೇಡು ತೀರಿಸಿಕೊಂಡಿದೆ.

ಇತ್ತ ಭಾರತ ವಿರುದ್ಧ ಸೋತ ಆಸ್ಟ್ರೇಲಿಯಾ ತಂಡಕ್ಕೆ ಸೆಮಿಸ್‌ ಹಾದಿ ಕಠಿಣವಾಗಿದೆ. ನಾಳೆ ನಡೆಯಲಿರುವ ಬಾಂಗ್ಲಾ ಹಾಗೂ ಅಫ್ಘಾನ್‌ ನಡುವಿನ ಪಂದ್ಯದ ಮೇಲೆ ಆಸೀಸ್‌ ತಂಡ ಸೆಮಿಸ್‌ ಹಾದಿ ನಿರ್ಧಾರವಾಗಲಿದೆ.

ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 205ರನ್‌ ಕೆಲಹಾಕಿ ಆಸೀಸ್‌ಗೆ 206ರನ್‌ ಗಳ ಕಠಿಣ ಗುರಿ ನೀಡಿತು. ಈ ಬೃಹತ್‌ ಮೊತ್ತ ಬೆನ್ನತ್ತಿದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 181 ರನ್‌ ಗಳಿಸಿ 24 ರನ್‌ಗಳ ಅಂತರದಿಂದ ಸೋಲಿಗೆ ಶರಣಾಯಿತು.

ಟೀಂ ಇಂಡಿಯಾ ಇನ್ನಿಂಗ್ಸ್‌: ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಟೀಂ ಇಂಡಿಯಾ ತಂಡ ನಾಯಕ ರೋಹಿತ್‌ ಶರ್ಮಾ ಅವರ ಶತಕ ವಂಚಿತ ಆಟದ ನೆರವಿನಿಂದ ತಂಡ ಬೃಹತ್‌ ಮೊತ್ತ ಕೆಲಹಾಕಲು ಸಾದ್ಯವಾಯಿತು.

ರೋಹಿತ್‌ ಶರ್ಮಾ 41 ಎಸೆತ ಎದುರಿಸಿ 7 ಬೌಂಡರಿ ಹಾಗೂ 8 ಸಿಕ್ಸರ್‌ ಸಹಿತ 92 ರನ್‌ ಗಳಿಸಿ ಸ್ಟಾರ್ಕ್‌ಗೆ ವಿಕೆಟ್‌ ಒಪ್ಪಿಸಿದರು. ಇತ್ತ ರೋಹಿತ್‌ ಜೊತೆ ಇನ್ನಿಂಗ್ಸ್‌ ಆರಂಭಿಸಿದ ವಿರಾಟ್‌ ಕೊಹ್ಲಿ 5 ಎಸೆತ ಎದುರಿಸಿ ಶೂನ್ಯ ಸಂಪಾದಿಸಿ ಮತ್ತೊಮ್ಮೆ ನಿರಾಸೆ ಮೂಡಿಸಿದರು.

ಉಳಿದಂತೆ ರಿಷಭ್‌ ಪಂತ್‌ 15(14) ರನ್‌, ಸೂರ್ಯಕುಮಾರ್‌ ಯಾದವ್‌ 31(16) ರನ್‌, ಶಿವಂ ದುಬೆ 28(22) ರನ್‌, ಹಾರ್ದಿಕ್‌ ಪಾಂಡ್ಯ ಔಟಾಗದೇ 27(17) ರನ್‌ ಹಾಗೂ ರವೀಂದ್ರ ಜಡೇಜಾ ಔಟಾಗದೆ 9(5) ರನ್‌ ಗಳಿಸಿದರು

ಆಸ್ಟ್ರೇಲಿಯಾ ಪರ ಮಿಚೆಲ್‌ ಸ್ಟಾರ್ಕ್‌ ಹಾಗೂ ಸ್ಟೋಯ್ನಿಸ್‌ ತಲಾ ಎರಡೆರೆಡು ವಿಕೆಟ್‌, ಹೇಜಲ್‌ವುಡ್‌ ಒಂದು ವಿಕೆಟ್‌ ಕಬಳಿಸಿ ಗಮನ ಸೆಳೆದರು.

ಆಸ್ಟ್ರೇಲಿಯಾ ಇನ್ನಿಂಗ್ಸ್‌: ಭಾರತ ತಂಡ ನೀಡಿದ ಬೃಹತ್‌ ಮೊತ್ತ ಬೆನ್ನತ್ತಿದ ಆಸ್ಟ್ರೇಲಿಯಾಕ್ಕೆ ಆರಂಭಿಕ ಆಘಾತ ಎದುರಾಯಿತು. ಮೊದಲ ಓವರ್‌ನಲ್ಲಿಯೇ ಎಡಗೈ ದಾಂಡಿಗ ಡೆವಿಡ್‌ ವಾರ್ನರ್‌ 6(6) ರನ್‌ ಗಳಿಸಿ ಔಟಾದರು. ಬಳಿಕ ಬಂದ ನಾಯಕ ಮಿಚೆಲ್‌ ಮಾರ್ಷ್‌ 37(28) ರನ್‌ ಗಳಿಸಿ ಔಟಾದರೆ, ಮ್ಯಾಕ್ಸ್‌ವೆಲ್‌ 20(12) ರನ್‌ ಗಳಿಸಿ ಬಂದಷ್ಟೆ ವೇಗವಾಗಿ ಹಿಂತಿರುಗಿದರು.

ಒಂದೆಡೆ ವಿಕೆಟ್‌ ಬೀಳುತ್ತಿದ್ದರು ಮತ್ತೊಂದೆಡೆ ಸುಭದ್ರವಾಗಿ ಇನ್ನಿಂಗ್ಸ್‌ ಕಟ್ಟಿದ ಟ್ರಾವಿಸ್‌ ಹೆಡ್‌ 43 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್‌ ಸಹಿತ 76 ರನ್‌ ಗಳಿಸಿ ಹೋರಾಟ ನಡೆಸಿದರು ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.

ಇವರ ವಿಕೆಟ್‌ ಪತನದ ನಂತರ ಬಂದ ಬೇರಾವ ಆಸೀಸ್‌ ಆಟಗಾರರಿಂದ ಗೆಲುವಿನ ಇನ್ನಿಂಗ್ಸ್‌ ಆಡಲು ಸಾಧ್ಯವಾಗಲಿಲ್ಲ. ಉಳಿದಂತೆ ಮಾರ್ಕಸ್‌ ಸ್ಟೋಯ್ನಿಸ್‌ 2(4) ರನ್‌, ಮ್ಯಾಥ್ಯೂ ವೇಡ್‌ 1(2) ರನ್‌, ಟಿಮ್‌ ಡೇವಿಡ್‌ 15(11) ರನ್‌, ಪ್ಯಾಟ್‌ ಕಮಿನ್ಸ್‌ ಹಾಗೂ ಸ್ಟಾರ್ಕ್‌ ಔಟಾಗದೇ ತಲಾ 11(7) ರನ್‌ ಹಾಗೂ 4(7) ಗಳಿಸಿಯೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.

ಟೀಂ ಇಂಡಿಯಾ ಪರ ಅರ್ಷ್‌ದೀಪ್‌ ಸಿಂಗ್‌ 3, ಕುಲ್ದೀಪ್‌ ಯಾದವ್‌ 2 ಹಾಗೂ ಅಕ್ಷರ್‌ ಪಟೇಲ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

ಪಂದ್ಯ ಶ್ರೇಷ್ಠ: ರೋಹಿತ್‌ ಶರ್ಮಾ

Tags: