ಆಂಟಿಗುವಾ: ಇಲ್ಲಿನ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯ ಗ್ರೂಪ್-8ರ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶವನ್ನು 50 ರನ್‌ಗಳ ಅಂತರದಿಂದ ಬಗ್ಗುಬಡಿಯಿತು. ಆ ಮೂಲಕ ಸೆಮಿಸ್‌ಗೆ ನೇರ ಅರ್ಹತೆ ಪಡೆದುಕೊಂಡಿತು.
ಇನ್ನು ಈ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ತಂಡದ ಉಪನಾಯಕ ಹಾರ್ದಿಕ್ ಪಾಂಡ್ಯ, ನಾವು ನಿರಂತರವಾಗಿ ವಿಕೆಟ್ ಕಳೆದುಕೊಳ್ಳುವ ವಿಧಾನವನ್ನು ನಾವು ಸುಧಾರಿಸಬೇಕಿದೆ ಎಂದು ತಂಡದ ನ್ಯೂನತೆ ಬಗ್ಗೆ ಇದೇ ಮೊದಲ ಬಾರಿಗೆ ಪಾಂಡ್ಯ ಮಾತನಾಡಿದ್ದಾರೆ.
ಇದೇ ವರ್ಷ ನಡೆದ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನ ಸ್ಥಾನ ವಹಿಸಿಕೊಂಡ ಬಳಿಕ ತೀರ ಕಳಪೆ ಪ್ರದರ್ಶನ ತೋರಿದರು. ಎಲ್ಲರಿಂದಲೂ ಟೀಕೆಗೆ ಗುರಿಯಾಗಿದ್ದ ಹಾರ್ದಿಕ್ ಟೀಂ ಇಂಡಿಯಾ ಪರವಾಗಿ ಉತ್ತಮ ಪ್ರದರ್ಶನ ತೋರಿದರು.
ಬಾಂಗ್ಲಾದೇಶ ವಿರುದ್ಧ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ತೋರಿದ ಹಾರ್ದಿಕ್ ತಂಡದ ಗೆಲುವಿಗೆ ಶ್ರಮಿಸಿದರು. ಈ ಬಳಿಕ ಮಾತನಾಡಿದ ಅವರು, ನಾವು ಒಂದು ತಂಡವಾಗಿ ಉತ್ತಮವಾಗಿ ಆಡುತ್ತಿದ್ದೇವೆ. ಆದರೆ ಹಲವು ವಿಭಾಗಗಳಲ್ಲಿ ನಾವು ಸುಧಾರಿಸುಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.
ನಮ್ಮ ತಂಡದಲ್ಲಿ ವೇಗವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುವುದನ್ನು ನಾವು ಸುಧಾರಿಸಿದ್ದಲ್ಲಿ, ತಂಡ ಇನ್ನು ಶ್ರೇಷ್ಠ ಪ್ರದರ್ಶನ ನೀಡಬಹುದಾಗಿದೆ. ಸದ್ಯ ತಂಡ ಉತ್ತಮವಾಗಿ ಆಡುತ್ತಿದ್ದು, ಎಲ್ಲರೂ ತಮ್ಮ ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ ಇದು ಪಂದ್ಯದ ಗೆಲುವಿಗೆ ಸಹಕಾರಿಯಾಗುತ್ತಿದೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.