Mysore
30
clear sky

Social Media

ಗುರುವಾರ, 06 ಫೆಬ್ರವರಿ 2025
Light
Dark

ಐಸಿಸಿ ವರ್ಷದ ಏಕದಿನ ತಂಡ ಪ್ರಕಟ: ಸ್ಥಾನ ಪಡೆಯುವಲ್ಲಿ ವಿಫಲರಾದ ಭಾರತದ ಆಟಗಾರರು

ದುಬೈ: ಅಂತರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ವರ್ಷದ ಏಕದಿನ ಕ್ರಿಕೆಟ್‌ ತಂಡ 2024 ಅನ್ನು ಪ್ರಕಟಿಸಿದ್ದು, ಅಚ್ಚರಿಯೆಂಬಂತೆ ಈ ತಂಡದಲ್ಲಿ ಭಾರತ ತಂಡದ ಆಟಗಾರರು ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದಾರೆ.

ಇನ್ನು ವರ್ಷದ ಪುರುಷರ ಏಕದಿನ ಕ್ರಿಕೆಟ್‌ ತಂಡದಲ್ಲಿ ನಾಲ್ವರು ಶ್ರೀಲಂಕಾ ಆಟಗಾರರು ಸ್ಥಾನ ಪಡೆದು ಎಲ್ಲರ ಗಮನ ಸೆಳೆದಿದ್ದಾರೆ. ಈ ತಂಡದಲ್ಲಿ ಅಚ್ಚರಿಯೆಂಬಂತೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಇಂಗ್ಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾದ ಯಾವೊಬ್ಬ ಆಟಗಾರರು ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಶ್ರೀಲಂಕಾದ ಚರೀತಾ ಅಸಲಂಕಾ ಈ ತಂಡಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ.

ಇತ್ತ ಮಹಿಳೆಯರ ವರ್ಷದ ಏಕದಿನ ಕ್ರಿಕೆಟ್‌ ತಂಡ ಕೂಡ ಪ್ರಕಟಿಸಿದ್ದು, ಭಾರತ ತಂಡದ ಸ್ಮೃತಿ ಮಂದಾನ ಹಾಗೂ ದೀಪ್ತಿ ಶರ್ಮಾ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಐಸಿಸಿ ವರ್ಷದ ಏಕದಿನ ತಂಡ ಇಂತಿದೆ:

ಚಾರಿತ್‌ ಅಸಲಂಕಾ (ನಾಯಕ), ಸೈಯಮ್‌ ಆಯೂಬ್‌, ರಹಮನುಲ್ಲಾ ಗುರ್ಬಾಜ್‌, ಪಥುಮ್‌ ನಿಸ್ಸಾಂಕ, ಕುಶಾಲ್‌ ಮೆಂಡೀಸ್‌, ಶೆರ್ಫೇನ್‌ ರುದರ್ಫೋರ್ಡ್‌, ಅಜ್ಮತುಲ್ಲಾ ಒಮರ್ಜಾಯ್‌, ವನ್ನಿಂದು ಹಸರಂಗಾ, ಶಾಹಿನ್‌ ಶಾ ಆಫ್ರೀದಿ, ಹ್ಯಾರಿಸ್‌ ರೌಫ್‌, ಅಲ್ಲಾ ಮೊಹಮ್ಮದ್‌ ಘಜನ್ಫರ್‌.

 

Tags: