Mysore
18
overcast clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಐಸಿಸಿ ಏಕದಿನ ರ‍್ಯಾಂಕಿಂಗ್‌: ಅಗ್ರಸ್ಥಾನಕ್ಕೇರಿದ ಗಿಲ್‌

ದುಬೈ: ಅಂತರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ನೂತನ ಏಕದಿನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತದ ಆರಂಭಿಕ ಬ್ಯಾಟರ್‌ ಶುಭಮನ್‌ ಗಿಲ್‌ ಅಗ್ರಸ್ಥಾನಕ್ಕೇರಿದ್ದಾರೆ.

ಪಾಕಿಸ್ತಾನ ಆಟಗಾರ ಬಾಬರ್‌ ಅಜಂ ಅವರನ್ನು ಹಿಂದಿಕ್ಕಿ, ಗಿಲ್‌ ಎರಡನೇ ಸಲ ಅಗ್ರಮಾನ್ಯ ಬ್ಯಾಟರ್‌ ಎನಿಸಿದ್ದಾರೆ.

ಇತ್ತೀಚಿಗೆ ಇಂಗ್ಲೆಂಡ್‌ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಗಿಲ್‌ ಒಟ್ಟಾರೆ 796 ರೇಟಿಂಗ್‌ ಅಂಕಗಳನ್ನು ಕಲೆ ಹಾಕಿದ್ದಾರೆ. ಎರಡನೇ ಸ್ಥಾನದಲ್ಲಿರುವ ಬಾಬರ್‌ 773 ರೇಟಿಂಗ್‌ ಅಂಕಗಳನ್ನು ಹೊಂದಿದ್ದಾರೆ.

ಅಗ್ರ 10ರಲ್ಲಿ ಭಾರತದ ನಾಲ್ವರು

ಅಗ್ರ 10ರ ಪಟ್ಟಿಯಲ್ಲಿ ಭಾರತದ ನಾಲ್ವರು ಕಾಣಿಸಿಕೊಂಡಿದ್ದಾರೆ. ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ 3ನೇ ಸ್ಥಾನ (761 ಪಾಯಿಂಟ್‌), ವಿರಾಟ್‌ ಕೊಹ್ಲಿ 6ನೇಸ್ಥಾನ (727 ಪಾಯಿಂಟ್‌), ಮತ್ತು ಶ್ರೇಯಸ್‌ ಅಯ್ಯರ್‌ ಒಂಭತ್ತನೇ ಸ್ಥಾನದಲ್ಲಿದ್ದಾರೆ.

ಮಹೀಶ ತೀಕ್ಷಣ ನಂ.1 ಬೌಲರ್‌

ಬೌಲರ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಶ್ರೀಲಂಕಾದ ಸ್ಪಿನ್ನರ್‌ ಮಹೀಶ ತೀಕ್ಷಣ ಅಗ್ರಸ್ಥಾನಕ್ಕೆರಿದ್ದಾರೆ. ತೀಕ್ಷಣ 680 ಹಾಗೂ ರಶೀದ್‌ 669 ರೇಟಿಂಗ್‌ ಅಂಕಗಳನ್ನು ಪಡೆದಿದ್ದಾರೆ.

ಅಗ್ರ 10ರ ಪಟ್ಟಿಯಲ್ಲಿ ಭಾರತದ ಕುಲದೀಪ್‌ ಯಾದವ್‌ 4ನೇ ಸ್ಥಾನದಲ್ಲಿದ್ದರೆ, ಬಲಗೈ ವೇಗದ ಬೌಲರ್‌ ಮೊಹಮ್ಮದ್‌ ಸಿರಾಜ್‌ 10 ಸ್ಥಾನದಲ್ಲಿದ್ದಾರೆ.

Tags:
error: Content is protected !!