Mysore
26
overcast clouds

Social Media

ಗುರುವಾರ, 02 ಜುಲೈ 2026
Light
Dark

ICC mens t20 team of the year: ನಾಲ್ವರು ಭಾರತೀಯರಿಗೆ ಸ್ಥಾನ!

ಐಸಿಸಿ (​ಇಂಟರ್‌ನ್ಯಾಷನಲ್​ ಕ್ರಿಕೆಟ್ ಕೌನ್ಸಿಲ್) ತನ್ನ 2023ರ ಸಾಲಿನ ಟಿ20 ಪುರುಷರ ಕ್ರಿಕೆಟ್‌ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ನಾಲ್ವರು ಭಾರತೀಯ ಆಟಗಾರರು ಸ್ಥಾನ ಪಡೆದಿದ್ದಾರೆ.

ಪ್ರಮುಖವಾಗಿ ತಂಡದ ನಾಯಕನಾಗಿ ಸೂರ್ಯಕುಮಾರ್ ಯಾದವ್ ನೇಮಕಗೊಂಡಿದ್ದಾರೆ. ಕಳೆದ ವರ್ಷದ ಅತ್ಯುತ್ತಮ ಟಿ20 ಆಟಗಾರರನ್ನು ಒಳಗೊಂಡಿರುವ ತಂಡದಲ್ಲಿ ಟೀಂ ಇಂಡಿಯಾದ ನಾಲ್ವರು ಆಟಗಾರರು ಸ್ಥಾನ ಪಡೆದಿದ್ದಾರೆ. ಉಳಿದಂತೆ ಝಿಂಬಾಬ್ವೆ ತಂಡದ ಇಬ್ಬರು ಆಟಗಾರರು, ಇಂಗ್ಲೆಂಡ್, ವೆಸ್ಟ್ ಇಂಡೀಸ್, ನ್ಯೂಝಿಲೆಂಡ್ ತಂಡಗಳಿಂದ ತಲಾ ಒಬ್ಬರು ಆಟಗಾರರು ವರ್ಷದ ಟೀಂ ನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರತೀಯ ನಾಲ್ವರು ಆಟಗಾರರು:
ಸೂರ್ಯಕುಮಾರ್ ಯಾದವ್: 2023 ರಲ್ಲಿ ಒಟ್ಟು 18 ಟಿ20 ಪಂದ್ಯಗಳನ್ನಾಡಿರುವ ಸೂರ್ಯಕುಮಾರ್ ಒಟ್ಟು 733 ರನ್ ಕಲೆಹಾಕಿದ್ದರು. ಇದರಲ್ಲಿ 2 ಶತಕಗಳು ಸೇರಿತ್ತು. 2023ರ ಸಾಲಿನ ಅತ್ಯುತ್ತಮ ಆಟಗಾರನಾಗಿ ಕಾಣಿಸಿಕೊಂಡಿದ್ದ ಸೂರ್ಯಕುಮಾರ್ ಯಾದವ್​ಗೆ ನಾಯಕನ ಪಟ್ಟ ದಕ್ಕಿಸಿಕೊಂಡಿದ್ದಾರೆ.

ಯಶಸ್ವಿ ಜೈಸ್ವಾಲ್: ವರ್ಷದಲ್ಲಿ ಒಟ್ಟು 15 ಟಿ20 ಪಂದ್ಯಗಳಿಂದ ಜೈಸ್ವಾಲ್‌ 430 ರನ್​ ಕಲೆಹಾಕಿದ್ದಾರೆ.

ರವಿ ಬಿಷ್ಣೋಯ್: ಟೀಂ ಇಂಡಿಯಾ ಪರ ಟಿ20 ಕ್ರಿಕೆಟ್​ನಲ್ಲಿ 44 ಓವರ್​ಗಳನ್ನು ಎಸೆದಿದ್ದ ಸ್ಪಿನ್ನರ್ ರವಿ ಬಿಷ್ಣೋಯ್ ಒಟ್ಟು 18 ವಿಕೆಟ್ ಕಬಳಿಸುಲ್ಲಿ ಯಶಸ್ವಿಯಾಗಿದ್ದರು. ಈ ಪ್ರದರ್ಶನ ಅವರಿಗೆ ವರ್ಷದ ತಂಡದಲ್ಲಿ ಸ್ಥಾನ ಗಳಿಸಿಕೊಟ್ಟಿತು.

ಅರ್ಷದೀಪ್ ಸಿಂಗ್: 23 ಟಿ20 ಪಂದ್ಯಗಳನ್ನಾಡಿ 26 ವಿಕೆಟ್ ಕಬಳಿಸಿ ಅರ್ಶ್‌ದೀಪ್‌ ಮಿಂಚಿದ್ದರು.

ಐಸಿಸಿ ಟಿ20 ತಂಡ :
ಸೂರ್ಯಕುಮಾರ್ ಯಾದವ್ (ನಾಯಕ)
ಯಶಸ್ವಿ ಜೈಸ್ವಾಲ್ (ಭಾರತ)
ಫಿಲ್ ಸಾಲ್ಟ್ (ಇಂಗ್ಲೆಂಡ್)
ನಿಕೋಲಸ್ ಪೂರನ್ (ವೆಸ್ಟ್ ಇಂಡೀಸ್)
ಮಾರ್ಕ್ ಚಾಪ್ಮನ್ (ನ್ಯೂಝಿಲೆಂಡ್)
ಸಿಕಂದರ್ ರಾಝ (ಝಿಂಬಾಬ್ವೆ)
ಅಲ್ಪೇಶ್ ರಾಮ್​ಜಾನಿ (ಉಗಾಂಡ)
ಮಾರ್ಕ್ ಅಡೈರ್ (ಐರ್ಲೆಂಡ್)
ರವಿ ಬಿಷ್ಣೋಯ್ (ಭಾರತ)
ರಿಚರ್ಡ್ ನಾಗರವ (ಝಿಂಬಾಬ್ವೆ)
ಅರ್ಷದೀಪ್ ಸಿಂಗ್ (ಭಾರತ)

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!