Mysore
29
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ಕೊಹ್ಲಿ ಜೊತೆ ವೈಯಕ್ತಿಕವಾಗಿ ವಿಶೇಷ ಬಾಂಧವ್ಯ ಹೊಂದಿದ್ದೇನೆ: ಸರ್ಬಿಯಾ ತಾರೆ ಜೊಕೊವಿಕ್‌

ಬೆಂಗಳೂರು: ಟೆನ್ನಿಸ್‌ ದಿಗ್ಗಜ ನೊವಾಕ್‌ ಜೊಕೊವಿಕ್‌ ಅವರು ಕ್ರಿಕೆಟ್‌ ತಾರೆ ವಿರಾಟ್‌ ಕೊಹ್ಲ ಅವರನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ. ಮತ್ತು ಕೊಹ್ಲಿಯನ್ನು ನೇರವಾಗಿ ಭೇಟಿಯಾಗುವ ಬಯಕೆಯನ್ನು ಹೊಂದಿರುವುದಾಗಿ ಜೊಕೊವಿಕ್‌ ಹೇಳಿದ್ದಾರೆ.

ಜನವರಿ 14ರಿಂದ ಆರಂಭವಾಗಲಿರುವ 11ನೇ ಆಸ್ಟ್ರೇಲಿಯಾ ಓಪನ್‌ ಚಾಂಪಿಯನ್‌ಶಿಪ್‌ ಟೂರ್ನಿಗೂ ಮುನ್ನ ಸೋನಿ ಸ್ಪೋರ್ಟ್ಸ್‌ ಜೊತೆ ನಡೆದ ವಿಶೇಷ ಸಂದರ್ಶನದಲ್ಲಿ ತಾವು ವಿರಾಟ್‌ ಕೊಹ್ಲಿಯೊಂದಿಗೆ ಉತ್ತಮ ಭಾಂದವ್ಯ ಹೊಂದಿರುವುದಾಗಿ ಜೊಕೊವಿಕ್‌ ಬಹಿರಂಗಪಡಿಸಿದ್ದಾರೆ.

ವಿರಾಟ್‌ ಅವರು ನನ್ನ ಬಗ್ಗೆ ಆಡವ ಮಾತುಗಳನ್ನು ಕೇಳಲು ತುಂಬಾ ಸಂತೋಷವಾಗುತ್ತದೆ. ಮತ್ತು ಅವರ ಸಾಧನೆಗಳನ್ನು ಕೇಳಲು ಹೆಮ್ಮೆ ಎನಿಸುತ್ತದೆ ಎಂದು ಸರ್ಬಿಯಾದ ತಾರೆ ನೊವಾಕ್‌ ಜೊಕೊವಿಕ್‌ ತಿಳಿಸಿದ್ದಾರೆ.

“ನನಗೆ ಭಾರತದ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಸೇರಿದಂತೆ ಹಲವರ ಜೊತೆಗೆ ವೈಯಕ್ತಿಕವಾಗಿ ವಿಶೇಷ ಬಾಂಧವ್ಯ ಹೊಂದಿದ್ದೇನೆ. ನಮ್ಮಿಬ್ಬರ ನಡುವಿನ ಭಾಂದವ್ಯ ತುಂಬಾ ಚನ್ನಾಗಿದೆ. ಹಲವು ವರ್ಷಗಳಿಂದ ಸಂಪರ್ಕದಲ್ಲಿದ್ದರು ಒಮ್ಮೆಯೂ ವಯಕ್ತಿಕವಾಗಿ ಭೇಟಿಯಾಗಿಲ್ಲ. ವಿರಾಟ್‌ ಅವರನ್ನು ನೇರವಾಗಿ ಭೇಟಿ ಆಗಬೇಕು ಎಂದು ತುಂಬಾ ಅನಿಸುತ್ತದೆ. ಆತ(ಕೊಹ್ಲಿ) ನನ್ನ ಬಗ್ಗೆ ಆಡುವ ಮಾತುಗಳನ್ನು ಕೇಳಲು ಹಿತವಾಗಿರುತ್ತದೆ ಎಂದು ನೊವಾಕ್ ಜೊಕೊವಿಕ್ ಹೇಳಿದ್ದಾರೆ.

ವಿಶ್ವದಲ್ಲೇ ಅತ್ಯಂತ ಶ್ರೀಮಂತ ಕಲೆ ಹಾಗೂ ಸಂಸ್ಕೃತಿ ಹೊಂದಿರುವ ದೇಶವಾದ ಭಾರತಕ್ಕೆ ಶೀಘ್ರವೇ ಭೇಟಿ ನೀಡಲು ಬಯಸಿದ್ದೇನೆ ಎಂದಿದ್ದಾರೆ.

ನನ್ನ ವೃತ್ತಿ ಜೀವನ ನಮ್ಮ ಕುಟುಂಬಕ್ಕೆ ಹೆಮ್ಮೆ ತಂದಿದೆ: ನಾನು 4-5 ವರ್ಷ ಬಾಲಕನಾಗಿದ್ದಾಗಲೇ ಟೆನ್ನಿಸ್ ಲೋಕದಲ್ಲಿ ಬಲು ಎತ್ತರಕ್ಕೆ ಬೆಳೆಯುವ ಕನಸು ಕಂಡಿದ್ದೆ‌. ಈ ಸುಂದರವಾದ ಕ್ರೀಡೆಯಲ್ಲಿ ಹಲವಾರು ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಿರುವುದು ನನಗೂ ಹಾಗೂ ನನ್ನ ಕುಟುಂಬದವರಿಗೂ ತುಂಬಾ ಹೆಮ್ಮೆ ಮೂಡಿಸಿದೆ,” ದೇವರ ಆಶೀರ್ವಾದದಿಂದ ಉತ್ತಮ ಸ್ಥಾನದಲ್ಲಿದ್ದೇನೆ ಎಂದು ಜೊಕೊವಿಕ್ ಹೇಳಿದ್ದಾರೆ.

ಇಂದಿನಿಂದ (ಜನವರಿ 14, ಭಾನುವಾರ) ಆಸ್ಟ್ರೇಲಿಯಾ ಓಪನ್ ಟೂರ್ನಿ ಆರಂಭವಾಗಲಿದೆ. ಸರ್ಬಿಯಾದ ತಾರೆ ನೊವಾಕ್ ಜೊಕೊವಿಕ್ ತಮ್ಮ ಮೊದಲ ಪಂದ್ಯದಲ್ಲಿ ಕ್ರೊಯೇಷಿಯಾದ ಡಿನೊ ಪ್ರಿಜ್ಮಿಕ್ ಅವರೊಂದಿಗೆ ಕಾದಾಡಲಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ