Mysore
22
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ನಾನು ಸರಿಯಾದ ಸಮಯಕ್ಕೆ ಭಾರತಕ್ಕೆ ಬಂದಿದ್ದೇನೆ: ಫುಟ್ಬಾಲ್‌ ತಾರೆ ಬೆಕ್‌ಹ್ಯಾಮ್‌

ಮುಂಬೈ : ಭಾರತ ಮತ್ತು ನ್ಯೂಜಿಲ್ಯಾಂಡ್‌ ತಂಡದ ಮೊದಲ ಸೆಮಿಸ್‌ ಪಂದ್ಯಕ್ಕೆ ಫುಟ್ಬಾಲ್‌ ತಾರೆ ಸಾಕ್ಷಿಯಾಗಿದ್ದಾರೆ. ಈ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಶತಕಗಳ ಅರ್ಧ ಶತಕ ಸಿಡಿಸಿದ್ದನ್ನು ಹೊಗಳಿದ ಫುಟ್ಬಾಲ್‌ ತಾರೆ ಡೆವಿಡ್‌ ಬ್ಯಾಕ್‌ಹ್ಯಾಮ್‌ “ನಾನು ಸರಿಯಾದ ಸಮಯಕ್ಕೆ ಭಾರತಕ್ಕೆ ಬಂದಿದ್ದೇನೆ” ಎಂದು ವಿರಾಟ್‌ ಶತಕಕ್ಕೆ ಮುಚ್ಚುಗೆ ವ್ಯಕ್ತಪಡಿಸಿದ್ದಾರೆ.

ನ್ಯೂಜಿಲ್ಯಾಂಡ್‌ ವಿರುದ್ಧ ತಮ್ಮ 50ನೇ ಏಕದಿನ ಶತಕ ಸಿಡಿಸಿದ ರನ್‌ ಮೆಷಿನ್‌ ವಿರಾಟ್‌ ಕೊಹ್ಲಿ, ಸಚಿನ್‌ ಹೆಸರಿನಲ್ಲಿದ್ದ 49 ಶತಕ ದಾಖಲೆಯನ್ನು ಮುರಿದು ಸಾರ್ವಕಾಲಿಕ ದಾಖಲೆ ನಿರ್ಮಿಸಿದರು.

ಡೆವಿಡ್‌ ಬ್ಯಾಕ್‌ಹ್ಯಾಮ್‌ ಅವರು ಸಿನ್‌ ತೆಂಡುಲ್ಕರ್‌, ಬಿಸಿಸಿಐ ಕಾರ್ಯದರ್ಶಿ ಜೈ ಶಾ ಅವರೊಂದಿಗೆ ಪಂದ್ಯ ವೀಕ್ಷಿಸಿದರು.

ಮೊದಲ ಇನ್ನಿಂಗ್ಸ್‌ ಬಳಿಕ ಮಾತನಾಡಿ, “ಈ ಕ್ರೀಡಾಂಗಣದಲ್ಲಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿರುವುದು ನಿಜವಾದ ಸಂತೋಷ. ನಾನು ಇಂದು ಸಚಿನ್ ಅವರೊಂದಿಗೆ ಸ್ವಲ್ಪ ಸಮಯವನ್ನು ಕಳೆದಿದ್ದೇನೆ. ಅವರು ಈ ಕ್ರೀಡಾಂಗಣದಲ್ಲಿ ಏನು ಸಾಧಿಸಿದ್ದಾರೆಂದು ನನಗೆ ತಿಳಿದಿದೆ. ಸಚಿನ್ ಸಾಧನೆ ಮುರಿದ ವಿರಾಟ್ ಕೊಹ್ಲಿಯ ಶತಕದ ವೈಭವ ನಂಬಲು ಅಸಾಧ್ಯವಾಗಿದೆ. ನಾನು ಮೊದಲ ಬಾರಿಗೆ ಸರಿಯಾದ ಸಮಯಕ್ಕೆ ಭಾರತಕ್ಕೆ ಬಂದಿದ್ದೇನೆ. ಇದು ತುಂಬಾ ವಿಶೇಷ ಕ್ಷಣ” ಎಂದು ವಿರಾಟ್ ಶತಕಕ್ಕೆ ಬೆಕ್‌ ಹ್ಯಾಮ್‌ ಪ್ರತಿಕ್ರಿಯಿಸಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!