Mysore
18
scattered clouds

Social Media

ಗುರುವಾರ, 25 ಡಿಸೆಂಬರ್ 2025
Light
Dark

ರೋಹಿರಾಟ್‌ ತಂಡಕ್ಕಾಗಿ ಇಷ್ಟ ವರ್ಷಗಳ ಕಾಲ ಆಡಲಿದ್ದಾರೆ: ಸ್ಪಿನ್ನರ್‌ ಹರಭಜನ್‌ ಸಿಂಗ್‌

ನವದೆಹಲಿ: ಭಾರತ ತಂಡ ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಸೋತ ಬೆನ್ನಲ್ಲೇ ಟೀಂ ಇಂಡಿಯಾದಲ್ಲಿ ಭೂಗಿಲೆದ್ದಿದ್ದ ಹಲವಾರು ಊಹಾಪೋಹಗಳಿಗೆ ಮಾಜಿ ಸ್ಪಿನ್ನರ್‌ ಹರಭಜನ್‌ ಸಿಂಗ್‌ ಉತ್ತರ ನೀಡಿದ್ದಾರೆ.

ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಹಾಗೂ ಬ್ಯಾಟರ್‌ ವಿರಾಟ್‌ ಕೊಹ್ಲಿ ಅವರು ಟಿ20ಗೆ ನಿವೃತ್ತಿ ಘೋಷಸಿದ ಬಳಿಕ ಅವರು ಏಕದಿನ ಮಾದರಿಯಲ್ಲಿಯೂ ನಿವೃತ್ತಿ ಘೋಷಿಸಲಿದ್ದಾರೆ ಎಂದು ಊಹಾಪೋಹಗಳು ಹರದಾಡುತ್ತಿದ್ದವು.

ಈ ಎಲ್ಲಾ ಪ್ರಶ್ನೆಗಳಿಗೂ ಪಿಟಿಐ ಸಂದರ್ಶನದಲ್ಲಿ ಉತ್ತರ ನೀಡಿರುವ ಟೀಂ ಇಂಡಿಯಾದ ಮಾಜಿ ಸ್ಪಿನ್ನರ್‌ ಹರಭಜನ್‌ ಸಿಂಗ್‌, ರೋಹಿತ್‌ ಶರ್ಮಾ ಅವರು ಇನ್ನೆರಡು ವರ್ಷಗಳ ಕಾಲ ಅಂತರಾಷ್ಟ್ರೀಯ ಕ್ರಿಕೆಟ್‌ ಆಡಲಿದ್ದಾರೆ. ಇತ್ತ ವಿರಾಟ್‌ ಕೊಹ್ಲಿ ಅವರಿಗಿರುವ ಫಿಟ್‌ನೆಸ್‌ ಗಮನಿಸಿದರೇ ಇನ್ನ ಐದು ವರ್ಷಗಳ ಕಾಲ ಕ್ರಿಕೆಟ್‌ ಆಡಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರೋಹಿರಾಟ್‌ ಜೋಡಿಯಲ್ಲಿ ಇನ್ನು ಕ್ರಿಕೆಟ್‌ ಉಳಿದಿದೆ. ಇಬ್ಬರು ಸಾಕಷ್ಟು ಫಿಟ್‌ನೆಸ್‌ ಹೊಂದಿದ್ದು, ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ನನಗನಿಸುತ್ತದೆ. ಅವರಿಬ್ಬರು ಟೀಂ ಇಂಡಿಯಾ ಪರವಾಗಿ ಆಟ ಮುಂದುವರಿಸಬೇಕು ಎಂದು ಭಜ್ಜಿ ಅಭಿಪ್ರಾಯಪಟ್ಟಿದ್ದಾರೆ.

Tags:
error: Content is protected !!