Mysore
15
clear sky

Social Media

ಶನಿವಾರ, 13 ಡಿಸೆಂಬರ್ 2025
Light
Dark

ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಗುರ್ಕೀರತ್‌ ಸಿಂಗ್‌ ಮಾನ್‌

ಮುಂಬೈ : ಭಾರತ ಪರವಾಗಿ 3 ಅಂತರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿರುವ ಬಲಗೈ ದಾಂಡಿಗ ಗುರ್ಕೀರತ್‌ ಸಿಂಗ್‌ ಮಾನ್‌ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. 2016ರಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ಸರಣಿಯಲ್ಲಿ ಅವರು ಆಡಿದ್ದರು.

ಪಂಜಾಬ್‌ ತಂಡದ ಪರವಾಗಿ ಆಡುತ್ತಿದ್ದ ಬಲಗೈ ಬ್ಯಾಟರ್‌ ಶುಕ್ರವಾರ ತಾವು ನಿವೃತ್ತರಾಗುತ್ತಿರುವ ಕುರಿತು ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ನನ್ನ ಅಮೋಘ ಕ್ರಿಕೆಟ್‌ ಪಯಣಕ್ಕೆ ಇಂದು ನಾನು ಕೊನೆಯನ್ನು ಘೋಷಿಸುತ್ತಿದ್ದೇನೆ. ಭಾರತದ ಪರವಾಗಿ ಆಡಿರುವುದು ನನ್ನ ಭಾಗ್ಯವಾಗಿತ್ತು ಎಂದು ತಮ್ಮ ವಿದಾಯದ ಕುರಿತು ವಿವರಿಸಿದ್ದಾರೆ.

2016ರಲ್ಲಿ ಭಾರತ ಪರವಾಗಿ ಆಡಿದ್ದ ಅವರು, 2021-22ರ ವಿಜಯ್‌ ಹಜಾರೆ ಟ್ರೋಫಿಯಲ್ಲಿ ಗರಿಷ್ಠ ರನ್‌ ಗಳಿಸಿದ್ದರು. ಇನ್ನೂ ಐಪಿಎಲ್‌ನಲ್ಲಿ ಪಂಜಾಬ್‌ ಕಿಂಗ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಭಾಗವಾಗಿದ್ದರು. ಅವರು ಕೊನೆಯದಾಗಿ 2020ರ ಐಪಿಎಲ್‌ ಋತುವಿನಲ್ಲಿ ಆಡಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!