Mysore
23
overcast clouds

Social Media

ಬುಧವಾರ, 01 ಜುಲೈ 2026
Light
Dark

ಪಿಎಸ್ ಜಿ ತೊರೆದು ಅಮೆರಿಕದ ಕ್ಲಬ್ ಸೇರಲಿದ್ದಾರೆ ಫುಟ್ಬಾಲ್‌ ದಿಗ್ಗಜ ಲಿಯೋನೆಲ್‌ ಮೆಸ್ಸಿ

ನವದೆಹಲಿ: ಜಗತ್ತಿನ ಶ್ರೇಷ್ಠ ಫುಟ್ಬಾಲ್‌ ಆಟಗಾರ ಲಿಯೋನೆಲ್‌ ಮೆಸ್ಸಿ ಅಮೆರಿಕದ ಇಂಟರ್‌ ಮಿಯಾಮಿ ಕ್ಲಬ್‌ ಪಾಲಾಗುವುದು ಬಹುತೇಕ ಖಚಿತವಾಗಿದೆ.

ಪ್ಯಾರಿಸ್‌ ಸೇಂಟ್‌ ಜರ್ಮೈನ್‌ (ಪಿಎಸ್‌ಜಿ) ಕ್ಲಬ್‌ ಜತೆಗಿನ ಒಪ್ಪಂದ ಇದೇ ಮಾಸಾಂತ್ಯಕ್ಕೆ ಮುಗಿಯಲಿದೆ. ಸದ್ಯ ಮೆಸ್ಸಿಗೆ ಇಂಟರ್‌ ಮಿಯಾಮಿ, ಹಳೇ ಕ್ಲಬ್‌ ಎಫ್ಸಿ ಬಾರ್ಸಿಲೋನಾ, ಸೌದಿ ಅರೆಬಿಯಾದ ಅಲ್‌ -ಹಿಲಾಲ್‌ ಕಡೆಯಿಂದ ದೊಡ್ಡ ಮಟ್ಟದ ಆಫ‌ರ್‌ಗಳಿವೆ. ಆದರೆ, ಬಾರ್ಸಿಲೋನಾ ತಂಡದಲ್ಲಿ ಇರುವ ಬೇರೊಬ್ಬ ಆಟಗಾರನನ್ನು ಮಾರಾಟ ಮಾಡಿದರಷ್ಟೇ ಮೆಸ್ಸಿ ಪ್ರವೇಶ ಸಾಧ್ಯ.

ಸದ್ಯಕ್ಕೆ ಈ ಬಗ್ಗೆ ಗ್ಯಾರಂಟಿ ಸಿಕ್ಕಿಲ್ಲವಾದ್ದರಿಂದ ಮೆಸ್ಸಿ ಮಿಯಾಮಿಗೆ ಹೋಗುವ ಸಾಧ್ಯತೆಗಳಿವೆ. ಮೂಲಗಳ ಪ್ರಕಾರ, 4 ವರ್ಷಗಳ ಒಪ್ಪಂದ, ವಾರ್ಷಿಕ 54 ಮಿಲಿಯನ್‌ ಡಾಲರ್‌ ನೀಡಲು ಮಿಯಾಮಿ ಒಪ್ಪಿಕೊಂಡಿದೆ.
Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!