ಬೆಂಗಳೂರು : ಭಾರತ ತಂಡದ ಸಂಘಟಿತ ಬೌಲಿಂಗ್ ಮುಂದೆ ಮಂಕಾದ ಆಸ್ಟ್ರೇಲಿಯಾ ತಂಡ 6 ರನ್‌ಗಳಿಂದ ಸೋಲು ಅನುಭವಿಸಿದೆ.
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕೊನೆಯ ಫೈನಲ್ ಪಂದ್ಯದಲ್ಲಿ ಭಾರತ ತಂಡ ಆಸೀಸ್ ಸೋಲಿಸುವ ಮೂಲಕ ಸರಣಿಯನ್ನು 4-1 ರಿಂದ ವಶಪಡಿಸಿಕೊಂಡಿತು.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 160 ರನ್ ಗಳಿಸಿತು. ಭಾರತದ ಬ್ಯಾಟರ್ ಗಳು ಉತ್ತಮ ಆರಂಭ ಪಡೆದರಾದರೂ ಭಾರತ ತಂಡ 33 ರನ್ ಗಳಿಸಿದ್ದಾಗ ಯಶಸ್ವಿ ಜೈಸ್ವಾಲ್ 21 ರನ್ ಗಳಿಸಿ ವಿಕೆಟ್ ಒಪ್ಪಿಸಿದಾಗ, ತಂಡ ಆಘಾತಕ್ಕೊಳಗಾಯಿತು. 4.6 ನೇ ಓವರ್ ನಲ್ಲಿ ಋತುರಾಜ್ ಗಾಯಕ್ವಾಡ್ ಔಟ್ ಆದಾಗ ಭಾರತ ತಂಡ ಕುಸಿಯುವ ಭೀತಿಗೊಳಗಾಯಿತು.
ಸೂರ್ಯ ಕುಮಾರ್ ಯಾದವ್ ಈ ಬಾರಿಯೂ ವೈಫಲ್ಯ ಅನುಭವಿಸಿದರು. ಕೇವಲ 5 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಸ್ಪೋಟಕ ಬ್ಯಾಟರ್ ರಿಂಕು ಸಿಂಗ್, ತನ್ನೀರ್ ಸಂಗ ಅವರ ಎಸೆತದಲ್ಲಿ ಟಿಮ್ ಡೇವಿಡ್ ಗೆ ಕ್ಯಾಚಿತ್ತು 6 ರನ್ ಗೆ ವಿಕೆಟ್ ಒಪ್ಪಿಸಿದರು. 53 ರನ್ ಗಳೊಂದಿಗೆ ಏಕಾಂಗಿ ಹೋರಾಟ ನಡೆಸಿದ ಶ್ರೇಯಸ್ ಅಯ್ಯರ್ ಭಾರತ ತಂಡಕ್ಕೆ ಆಸರೆಯಾದರು. 37 ಎಸೆತಗಳಲ್ಲಿ 53 ರನ್ ಗಳಿಸಿದರು. ಜಿತೇಶ್ ಶರ್ಮಾ24, ಅಕ್ಸರ್ ಪಟೇಲ್ 31 ರನ್ ಗಳಿಸಿ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು.
ಭಾರತ ನೀಡಿದ 160 ರನ್ ಗಳ ಬೆನ್ನತ್ತಿದ ಆಸ್ಟ್ರೇಲಿಯ ಆರಂಭದಲ್ಲಿಯೇ ಜೋಶ್ ಪಿಲಿಪ್ 4 ವಿಕೆಟ್ ಕಳೆದುಕೊಂಡಿತು. ಆರಂಭಿಕ ಆಟಗಾರ ಟ್ರಾವೆಸ್ ಹೆಡ್ 28 ರನ್ ಗಳಿಸಿ ಉತ್ತಮ ಹೋರಾಟದ ಆಟ ಪ್ರದರ್ಶಿಸಿದರು. ಆದರೆ ರವಿ ಬಿಷ್ಟೋಯೊ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ, ಆಸ್ಟ್ರೇಲಿಯಕ್ಕೆ ಆಘಾತ ನೀಡಿದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಬಂದ ಬೆನ್ ಮೆಕ್ಕರ್ಮಾಟ್ 36 ಎಸೆತಗಳಲ್ಲಿ 5 ಸಿಕ್ಸರ್ ಸಹಿತ 54 ರನ್ ಗಳಿಸಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ಆಸ್ಟ್ರೇಲಿಯಾಗೆ ಗೆಲುವಿನ ಭರವಸೆ ನೀಡಿದರು. ಕೊನೆಯಲ್ಲಿ ಅಬ್ಬರಿಸಿದ ನಾಯಕ ಮ್ಯಾಥ್ಯೂ ವೇಡ್ 22ರನ್ ಬಾರಿಸಿ ಗೆಲುವಿನ ಭರವಸೆ ನೀಡಿದರು. ಆದರೆ ತಂಡವನ್ನು ಗೆಲುವಿನ ದಡ ಸೇರಿಸಲು ಆಗಲಿಲ್ಲ. ಭಾರತ ತಂಡ ಬೌಲಿಂಗ್ ಪ್ರದರ್ಶನಕ್ಕೆ ಮಂಕಾದ ಆಸೀಸ್ ಸರಣಿ ಸೋಲು ಅನುಭವಿಸಿತು.
ಭಾರತ ಪರ ಅರ್ಷ್‌ದೀಪ್ ಸಿಂಗ್ 2, ಮುಖೇಶ್ ಕುಮಾರ್ 3, ರವಿ ಬಿಷ್ನೋಯಿ 2 ಮತ್ತು ಅಕ್ಷರ್‌ಪಟೇಲ್ 1 ಪಡೆದರು.
ಪಂದ್ಯಶ್ರೇಷ್ಠ : ಅಕ್ಷರ್ ಪಟೇಲ್
ಸರಣಿ ಶ್ರೇಷ್ಠ : ರವಿ ಬಿಷ್ಣೋಯಿ