Mysore
25
scattered clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಭಾರತ ಸೋತಿದಕ್ಕೆ ನೊಂದ ಅಭಿಮಾನಿಗಳು ಮಾಡಿದ್ದೇನು ಗೊತ್ತಾ?

ಮೈಸೂರು : ಈ ಬಾರಿಯ ವಿಶ್ವಕಪ್ ನಲ್ಲಿ ಅಜೇಯ ಓಟ ಸಾಧಿಸಿದ್ದ ಭಾರತ ತಂಡ ಫೈನಲ್‌ನಲ್ಲಿ ಆಸೀಸ್‌ ವಿರುದ್ಧ ಮುಗ್ಗರಿಸಿ ಟ್ರೋಫಿ ಕೈಚೆಲ್ಲಿದ್ದಾರೆ.

ಆ ಮೂಲಕ ೧೨ ವರ್ಷಗಳ ಟ್ರೋಫಿ ಗೆಲ್ಲುವ  ಕನಸು ಮತ್ತೆ ಕನಸಾಗಿಯೇ ಉಳಿಯಿತು.

ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ  ತಂಡ ಭಾರತೀಯ ನೆಲದಲ್ಲಿ ವಿಶ್ವಕಪ್ ಗೆದ್ದುಕೊಂಡಿತು. ಇದು ಅವರ ಆರನೇ ಪ್ರಶಸ್ತಿಯಾಗಿದೆ. ಇದೇ ವರ್ಷ ಭಾರತ ತಂಡ ಆಸೀಸ್‌ ವಿರುದ್ಧವೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿಯೂ ಸೋತಿತ್ತು. ಇದೇ ವೇಳೆ ಭಾರತ ವಿಶ್ವಕಪ್ ಗೆಲ್ಲುತ್ತದೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು.

ಆದರೆ ಭಾರತೀಯ ಅಭಿಮಾನಿಗಳ ಕನಸು ಭಗ್ನಗೊಂಡ ನಂತರ ಅಭಿಮಾನಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಬೇಸರದ ವಿಡಿಯೋಗಳು ಸಾಕಷ್ಟು ವೈರಲ್‌ ಆಗುತ್ತಿದೆ.

ಭಾರತ ಸೋತಿದಕ್ಕೆ ಟಿವಿ ಒಡೆದ ಅಭಿಮಾನಿ: ಭಾರತದ ಸೋಲಿನ ನಂತರ ಟಿವಿ ಒಡೆದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಸ್ಟ್ರೇಲಿಯ ಪಂದ್ಯವನ್ನು ಗೆದ್ದ ತಕ್ಷಣ, ಅವರ ಆಟಗಾರರು ಹರ್ಷೋದ್ಗಾರ ಮಾಡುತ್ತಾ ಕ್ರೀಡಾಂಗಣಕ್ಕೆ ಓಡಿಹೋದದ್ದನ್ನು ಟಿವಿಯಲ್ಲಿ ನೋಡುತ್ತಿದ್ದ ಅಭಿಮಾನಿ ಬಳಿಕ ಟಿವಿಯನ್ನು ಮನೆಯಿಂದ ಹೊರಗೆ ತೆಗೆದ ಜೋರಾಗಿ ನೆಲಕ್ಕೆ ಹಾಕಿ ಬಳಿಕ ದೊಣ್ಣೆಯಿಂದ ಟಿವಿ ಒಡೆದಿದ್ದಾನೆ.

ಅಷ್ಟರಲ್ಲಿ ಅವನ ಹಿಂದೆ ಯಾರೋ ‘ಹೇ ಮ್ಯಾನ್ 60 ಸಾವಿರ ಟಿವಿ’ ಅನ್ನುವುದು ಕೇಳಿಸುತ್ತದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸೋಲಿಗೆ ಕಣ್ಣಿರಿಟ್ಟ ಚಿಣ್ಣರಿ:  ಭಾರತದ ಸೋಲಿಗೆ ಚಿಕ್ಕ ಮಗು ಅಳುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

ಸದ್ಯ ಈ ವಿಡಿಯೋ ಅಂತರ್ಜಾಲದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಈ ಸೋಲಿಗೆ ಅವರ ತಾಯಿ ಮಗುವಿನ ಕಣ್ಣೀರು ಒರೆಸಿ ಸಾಂತ್ವನ ಹೇಳುತ್ತಿರುವುದು ಕಂಡು ಬಂದಿದೆ.

ಇಬ್ಬರು ಅಭಿಮಾನಿ ಸಾವು : ಇದಕ್ಕೂ ದೊಡ್ಡ ದುರಂತವೆಂದರೆ, ವಿಶ್ವಕಪ್‌ನಲ್ಲಿ ಭಾರತದ ಸೋಲುತ್ತಿದ್ದಂತೆ ಇಬ್ಬರು ಟೀಂ ಇಂಡಿಯಾ ಅಭಿಮಾನಿಗಳ ಸಾವಾಗಿದೆ. ತಿರುಪತಿಯ ಗ್ರಾಮಾಂತರ ಮಂಡಲ ದುರ್ಗಸಮುದ್ರದ ಜ್ಯೋತಿ ಕುಮಾರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಭಾರತ ಸೋತ ನಂತರ ಬಂಕುರಾದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಂಕುರಾದ ಬೆಲಿಯತೋರ್‌ನ ರಾಹುಲ್ ಲೋಹರ್ (23) ಎಂಬ ಯುವ ಸೋಲಿನ ನನೋವನ್ನು ತಡೆದುಕೊಳ್ಳಲಾಗದೇ ಆತ್ಮಹತ್ಯ ಮಾಡಿಕೊಂಡಿದ್ದಾನೆ.

ರಾತ್ರಿ 11 ಗಂಟೆ ಸುಮಾರಿಗೆ ರಾಹುಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬದ ಮೂಲಗಳು ಹೇಳಿವೆ.

https://x.com/mufaddal_vohra/status/1726421724827377853?s=20

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!