Mysore
29
clear sky

Social Media

ಮಂಗಳವಾರ, 21 ಜನವರಿ 2025
Light
Dark

WPL-2024: ಗುಜರಾತ್‌ ವಿರುದ್ಧ ಭರ್ಜರಿಯಾಗಿ ಗೆದ್ದ ಡೆಲ್ಲಿ

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಗುಜರಾತ್‌ ನಡುವಿನ ಪಂದ್ಯದಲ್ಲಿ ಡೆಲ್ಲಿ ತಂಡ 25 ರನ್‌ಗಳ ಅಂತರದ ಗೆಲುವು ದಾಖಲಿಸಿದೆ.

ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 163 ರನ್ ಗಳಿಸಿತು. ಈ ಮೊತ್ತ ಬೆನ್ನತ್ತಿದ ಗುಜರಾತ್‌ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 138 ರನ್‌ ಗಳಿಸಿ 25 ರನ್‌ಗಳ ಸೋಲನುಭವಿಸಿತು.

ಟಾಸ್ ಸೋತು ಮೊದಲು ಬ್ಯಾಟ್‌ ಮಾಡಿದ ಡೆಲ್ಲಿಗೆ, ಗುಜರಾತ್‌ ಮಧ್ಯಮವೇಗಿ ಕಾಡಿದರು. ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಮೇಘನಾ ಅವರು ಶಫಾಲಿ ವರ್ಮಾ ವಿಕೆಟ್ ಗಳಿಸಿದರು. ಮೂರು ಓವರ್‌ಗಳ ನಂತರ ಅಲೈಸ್ ಕ್ಯಾಪ್ತಿಗೂ ಪೆವಿಲಿಯನ್‌ ದಾರಿ ತೋರಿಸಿದರು. ಇದರಿಂದಾಗಿ ತಂಡದ ಮಧ್ಯಮ ಕ್ರಮಾಂಕಕ್ಕೆ ಪೆಟ್ಟು ಬಿತ್ತು.

ಈ ಪರಿಸ್ಥಿತಿಯನ್ನು ಅನುಭವಿ ಬ್ಯಾಟರ್ ಲ್ಯಾನಿಂಗ್ ಸಮರ್ಥವಾಗಿ ನಿಭಾಯಿಸಿದರು. ಅರು ಬೌಂಡರಿ ಮತ್ತು ಒಂದು ಸಿಕ್ಸರ್‌ಗಳಿದ್ದ ಅರ್ಧಶತಕ ಗಳಿಸಿದ ಅವರು ತಂಡದ ಮೊತ್ತ ಹೆಚ್ಚಿಸಿದರು.

ಜೆಮಿಮಾ ರಾಡ್ರಿಗಸ್ ಕೂಡ ವೈಫಲ್ಯ ಅನುಭವಿಸಿದರು. ಆದರೆ ಅನಾಬೆಲ್ ಸದರ್ಲೆಂಡ್ 20 ಮತ್ತು ಕೊನೆಯಲ್ಲಿ ಶಿಖಾ ಪಾಂಡೆ ಔಟಾಗದೆ 14 ಬಾರಿಸಿ ತಂಡವು ಹೋರಾಟದ ಮೊತ್ತ ಗಳಿಸಲು ಸಹಕರಿಸಿದರು.

ಗುಜರಾತ್ ತಂಡದ ಮೇಘನಾ ಸಿಂಗ್ 37/4 ಮತ್ತು ಆ್ಯಷ್ಟೆ ಗಾರ್ಡನರ್ ಎರಡು ವಿಕೆಟ್ ಗಳಿಸಿದರು.

ಈ ಮೊತ್ತ ಬೆನ್ನತ್ತಿದ ಗುಜರಾತ್‌ಗೆ ಡೆಲ್ಲಿ ತಂಡದ ವೇಗಿಗಳು ಕಾಡಿದರು. ಗುಜರಾತ್‌ಗೆ ಆರಂಭದಿಂದಲೇ ಪೆಟ್ಟು ನೀಡುತ್ತಾ ಬಂದರು. ಶಿಖಾ ಪಾಂಡೆ ಆರಂಭಿಕರಾಗಿ ಬಂದ ಲಾರಾ ವೋಲ್ವಾರ್ಡ್‌ ಅವರನ್ನು ಬಂದ ದಾರಿಯಲ್ಲೇ ಹಿಂತಿರುಗಿಸುವ ಮೂಲಕ ಆರಂಭಿಕ ಆಘಾತ ನೀಡಿದರು, ನಾಯಕಿ ಬೆತ್‌ ಮೂನಿ 12 ರನ್‌ ಗಳಿಸಿ ಜಾನೆಸನ್‌ ಅವರಿಗೆ ವಿಕಟ್‌ ಒಪ್ಪಿಸಿ ಹೊರ ನಡೆದರು. ಆಶ್ಲೀಗ್‌ ಗಾರ್ಡನರ್‌ 31 ಎಸೆತಗಳಲ್ಲಿ 5ಬೌಂಡರಿ ಮತ್ತು 1 ಸಿಕ್ಸರ್‌ ಸಹಿತ 40 ರನ್‌ ಬಾರಿಸಿ ತಂಡಕ್ಕೆ ಅಲ್ಪ ಚೇತರಿಕೆ ನೀಡಿದರು. ಆದರೆ ಗಾರ್ಡನರ್‌ ಅವರಿಗೆ ಬೇರಾರೂ ಸಾಥ್‌ ನೀಡಲಿಲ್ಲ.

ಡೆಲ್ಲಿ ಪರ ರಾಧಾ ಯಾದವ್‌ 20/3, ಜೆಸ್‌ ಜನಾಸೆನ್‌ 22/3 ವಿಕೆಟ್‌ ಪಡೆದರು ಮಿಂಚಿದರು.

ಪಂದ್ಯ ಶ್ರೇಷ್ಠ: ಜೆಸ್‌ ಜೊನಾಸೆನ್‌

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ