Mysore
23
mist

Social Media

ಮಂಗಳವಾರ, 18 ನವೆಂಬರ್ 2025
Light
Dark

ನನ್ನ ಈ ಪದಕವನ್ನು ನನ್ನ ತಾಯಿಗೆ ಅರ್ಪಿಸುತ್ತೇನೆ : ಬೆಳ್ಳಿ ಗೆದ್ದ ತುಲಿಕಾ ಮೊದಲ ಮಾತು

ಬರ್ಮಿಂಗ್ ಹ್ಯಾಮ್ : ಕಾಮನ್ ವೆಲ್ತ್ ಕ್ರೀಡಾಕೂಟ 2022ರ ಸ್ಪರ್ಧೆಯಲ್ಲಿ ಭಾರತದ ಜೂಡೋ ಪಟು ತುಲಿಕಾ ಮಾನ್ ಅವರು ಬೆಳ್ಳಿ ಪದಕ ಬಳಿಕ ತಮ್ಮ ಮೊದಲ ಮಾತನ್ನು ಮಾಧ್ಯಮದ ಮುಂದೆ ಹಂಚಿಕೊಂಡಿದ್ದಾರೆ.

 

ನನ್ನ ಈ ಪ್ರದರ್ಶನದಿಂದ ನನಗೆ ಸಂತೋಷವಿಲ್ಲ ಆದರೆ ಈಗ ಏನನ್ನೂ ಮಾಡಲು ಸಾಧ್ಯವಿಲ್ಲ.ಖೇಲೋ ಇಂಡಿಯಾ ಯೋಜನೆಯನ್ನು ಪ್ರಾರಂಭಿಸಲು ಪ್ರಧಾನ್ ನರೇಂದ್ರ ಮೋದಿ ಅವರ ಸಹಾಯಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಬಯಸುತ್ತೇನೆ. ನಾನು ಈ ಪದಕವನ್ನು ನನ್ನ ತಾಯಿ ಮತ್ತು ತರಬೇತುದಾರರಿಗೆ ಅರ್ಪಿಸುತ್ತೇನೆ”

ಎಂದು ಹೇಳುವ ಮೂಲಕ ತಮ್ಮ ಮಾನದ ಮಾತನ್ನು ಹಂಚಿಕೊಂಡಿದ್ದಾರೆ.

ತುಲಿಕಾ ಮಾನ್ ಅವರು ಇಂದು ನಡೆದ ಜೂಡೋ ಸ್ಪರ್ಧೆಯಲ್ಲಿ 78 ಕೆಜಿ ವಿಭಾಗದಲ್ಲಿ ಸ್ಕಾಟ್ಲೆಂಡಿನ ಅಡ್ಲಿಂಗ್ಟನ್ ಅವರನ್ನು ಸೋಲಿಸುವ ಮೂಲಕ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಭಾರತಕ್ಕೆ ಜೂಡೋ ಆಟದಲ್ಲಿ ಇದು ಮೂರನೇ ಪದಕವಾಗಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ತುಲಿಕಾ ಮಾನ್ ಅವರ ಗೆಲುವಿಗೆ ತಮ್ಮ ಟ್ವಿಟರ್ ಮೂಲಕ ಅಭಿನಂದನೆ ಸಲ್ಲಿಸಿ ವಿಶಿಷ್ಟ ಕ್ರೀಡಾ ವೃತ್ತಿ ಜೀವನದಲ್ಲಿ ಮತ್ತೊಂದು ಗೌರವವಾಗಿದೆ. ಆಕೆಯ ಮುಂಬರುವ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!