Mysore
24
clear sky

Social Media

ಗುರುವಾರ, 19 ಮಾರ್ಚ್ 2026
Light
Dark

ಭಾರತದ ಡಿ.ಗುಕೇಶ್‌ ವಿಶ್ವ ಚೆಸ್‌ ಚಾಂಪಿಯನ್‌

ಸಿಂಗಾಪುರ: ಡಿ ಗುಕೇಶ್‌ ಅವರು ಇಂದು ಹಾಲಿ ಚಾಂಪಿಯನ್‌ ಚೀನಾದ ಲಿರೆನ್‌ ಅವರನ್ನು ಸೋಲಿಸಿ FIDE ವಿಶ್ವ ಚಾಂಪಿಯನ್‌ ಶಿಪ್ 2024ನ್ನು ಗೆದ್ದಿದ್ದಾರೆ.

ಭಾರತೀಯ ಗ್ರ್ಯಾಂಡ್‌ಮಾಸ್ಟರ್‌ ಡಿ ಗುಕೇಶ್ 18ನೇ ಮತ್ತು ಅತ್ಯಂತ ಕಿರಿಯ ಚೆಸ್‌ ವಿಶ್ವ ಚಾಂಪಿಯನ್‌ ಆಗಿದ್ದಾರೆ. 14ನೇ ಗೇಮ್‌ ಗೆದ್ದ ನಂತರ ಗುಕೇಶ್‌ ತಮ್ಮ ಸಾಧನೆಗೆ ಆನಂದ ಭಾಷ್ಪ ಹರಿಸಿದ್ದಾರೆ.

14-ಗೇಮ್‌ನ ಕೊನೆಯ ಕ್ಲಾಸಿಕಲ್‌ ಟೈಮ್‌ ಕಂಟ್ರೋಲ್‌ ಗೇಮ್‌ ಅನ್ನು ಗೆದ್ದ ನಂತರ ಲಿರೆನ್‌ನ 6.5ಕ್ಕೆ ವಿರುದ್ಧವಾಗಿ ಅಗತ್ಯವಿರುವ 7.5 ಪಾಯಿಂಟ್‌ಗಳನ್ನು ಗುಕೇಶ್‌ ಗಳಿಸಿದ್ದಾರೆ.

ಇಂದು ಗುಕೇಶ್‌ ಅವರ ಸಾಧನೆಯ ಮೊದಲು, ರಷ್ಯಾದ ದಂತಕಥೆ ಗ್ಯಾರಿ ಕಾಸ್ಪರೋವ್‌ ಅವರು 1985ರಲ್ಲಿ ಅನಾಟೊಲಿ ಕಾರ್ಪೋವ್‌ ಅವರನ್ನು ಪದಚ್ಯುತಗೊಳಿಸಿ 22ನೇ ವಯಸ್ಸಿನಲ್ಲಿ ಪ್ರಶಸ್ತಿಯನ್ನು ಗೆದ್ದಾಗ ಅತ್ಯಂತ ಕಿರಿಯ ವಿಶ್ವ ಚೆಸ್‌ ಚಾಂಪಿಯನ್‌ ಆಗಿದ್ದರು.

ಈ ವರ್ಷದ ಆರಂಭದಲ್ಲಿ ಕ್ಯಾಂಡಿಡೇಟ್ಟ್‌ ಪಂದ್ಯಾವಳಿಯನ್ನು ಗೆದ್ದ ನಂತರ ಗುಕೇಶ್‌ ಅವರು ಅತ್ಯಂತ ಕಿರಿಯ ಆಟಗಾರನಾಗಿ ಕೂಟ ಪ್ರವೇಶಿಸಿದ್ದರು.

ವಿಶ್ವನಾಥನ್‌ ಆನಂದ್‌ ನಂತರ ಡಿ.ಗುಕೇಶ್‌ ಅವರು ಜಾಗತಿಕ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯರಾಗಿದ್ದಾರೆ.

Tags:
error: Content is protected !!