ನವದೆಹಲಿ : ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿ 13 ನೇ ಪಂದ್ಯದಲ್ಲಿ ಆಫ್ಘಾನಿಸ್ತಾನ ತಂಡ ಇಂಗ್ಲಂಡ್ ಗೆಲುವಿಗೆ 285 ರನ್ ಗಳ ಗುರಿ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಅಫ್ಘಾನ್ ಭರ್ಜರಿ ಆರಂಭ ಪಡೆಯಿತು. ರಹ್ಮನುಲ್ಲಾ ಗುರ್ಬಾಝ್ ಮತ್ತು ಇಬ್ರಾಹಿಂ ಝರ್ದಾನ್ ತಂಡಕ್ಕೆ 114 ರನ್ ಗಳ ಉತ್ತಮ ಜೊತೆಯಾಟ ನೀಡಿದರು. ಇಬ್ರಾಹಿಂ ಝರ್ದಾನ್(28) ಸ್ಪಿನ್ನರ್ ಆದಿಲ್ ರಶೀದ್ ವಿಕೆಟ್ ಒಪ್ಪಿಸಿದರು. ಇದು ಅಫ್ಘಾನ್ ತನ್ನ ಮೊದಲ ಪತನವಾಯತು..
ರಹ್ಮನುಲ್ಲಾ ಗುರ್ಬಾಝ್ 57 ಎಸೆತಗಳಲ್ಲಿ 8 ಬೌಂಡರಿ 4 ಸಿಕ್ಸರ್ ಸಹಿತ 80 ಸಿಡಿಸಿ ರನೌಟ್ ಅದರು. ಬಳಿಕ ಬಂದ ಯಾವೊಬ್ಬ ಬ್ಯಾಟರ್ ಕೂಡ ಇಂಗ್ಲಂಡ್ ಬಲಿಷ್ಟ ಬೌಲಿಂಗ್ ಎದುರು ಹೆಚ್ಚು ಸಮಯ ಕ್ರೀಸಿನಲ್ಲಿ ನಿಲ್ಲಲು ಸಾಧ್ಯವಾಗದೆ ದಿಢೀರ್ ಕುಸಿತ ಕಂಡರು. ರಹಮತ್ ಶಾ 3 ರನ್ ಗಳಿಸಿ ಆದಿಲ್ ರಶೀದ್ ಬೌಲಿಂಗ್ ನಲ್ಲಿ ಸ್ಟಂಪ್ ಔಟ್ ಆದರೆ, ನಾಯಕ ಹಶ್ಮತುಲ್ಲಾ ಶಾಹಿದಿ 14 ರನ್ ಗಳಿಸಿ ಜೊ ರೂಟ್ ಬೌಲಿಂಗ್ ನಲ್ಲಿ ಚೆಂಡು ವಿಕೆಟ್ ಗೆ ಬಡಿದು ಬೌಲ್ಡ್ ಆಗಿ ನಿರಾಸೆ ಮೂಡಿಸಿದರು.
ಅಝ್ಮತುಲ್ಲಾ ಓಮರ್ಝೈ, ಮೊಹಮ್ಮದ್ ನಬಿ ಕ್ರಮವಾಗಿ 19, 9 ಗಳಿಸಿ ಪೆವಿಲಿಯನ್ ಪರೇಡ್ ಗೆ ಸಾಥ್ ನೀಡಿದರು. ಬಳಿಕ ಕೊಂಚ ಚೇತರಿಸಿಕೊಂಡ ಅಫ್ಘಾನ್ ಇಕ್ರಂ ಅಲಿಖಿಲ್ ಮತ್ತು ರಶೀದ್ ಖಾನ್ ಜೋಡಿ 43 ರನ್ ಗಳ ಜೊತೆಯಾಟ ನೀಡಿ ಮೊತ್ತ ಹೆಚ್ಚಿಸುವ ಯೋಜನೆಯಲ್ಲಿ ಇದ್ದರು. ಆದರೆ ರಶೀದ್ ಖಾನ್ 23 ರನ್ ಗಳಸಿ ಆದಿಲ್ ರಶೀದ್ ಬೌಲಿಂಗ್ ನಲ್ಲಿ ಜೊ ರೂಟ್ ಗೆ ಕ್ಯಾಚ್ ನೀಡಿ ಔಟ್ ಆದರು.
ಇಕ್ರಂ ಅಲಿಖಿಲ್ 3 ಬೌಂಡರಿ 2 ಸಿಕ್ಸರ್ ಸಹಿತ 58 ಗಳಸಿ ಅರ್ಧಶತಕ ಬಾರಿಸಿ ಟೊಪ್ಲಿ ಗೆ ವಿಕೆಟ್ ನೀಡಿದರೆ ಮುಜೀಬ್ ಉರ್ ರಹ್ಮಾನ್ 28 ರನ್ ಗಳ ಉಪಯುಕ್ತ ಕೊಡುಗೆ ನೀಡಿದರು. ಅಂತಿಮ ಜೋಡಿಯಾದ ನವೀನ್ 5 ರನ್ ಗೆ ಜೋಸ್ ಬಟ್ಲರ್ ಗೆ ರನೌಟ್ ಆದರು. ಫಝಲ್ ಹಕ್ ಫಾರೂಕಿ 2 ರನ್ ಗಳಿಸಿದರು.
ಇಂಗ್ಲಂಡ್ ಪರ ಆದಿಲ್ ರಶೀದ್ 3 ವಿಕೆಟ್ ಪಡೆದರೆ, ಮಾರ್ಕ್ ವುಡ್ 2, ಲಿಯಾಮ್ ಲಿವಿಂಗ್ ಸ್ಟೋನ್, ಜೋ ರೂಟ್, ರೀಸ್ ಟೋಪ್ಲಿ ತಲಾ ಒಂದೊಂದು ವಿಕೆಟ್ ಕಬಳಿಸಿದರು.