ಬರ್ಮಿಂಗ್ ಹ್ಯಾಮ್ : ಕಾಮನ್ವೆಲ್ತ್ ಕ್ರೀಡಾಕೂಟ 2022ರ ಸ್ಪರ್ಧೆಯಲ್ಲಿ ಪುರುಷರ ಹೈಜೆಂಪ್ ನಲ್ಲಿ ಭಾರತದ ತೇಜಸ್ವಿನ್ ಶಂಕರ್ ಅವರು ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ತೇಜಸ್ವಿನ್ ಶಂಕರ್ ಅವರು ಮೊದಲ ಎತ್ತರ ಜಿಗಿತದಲ್ಲಿ 2.19 ಅಂಕಗಳಿಸಿದರು.
ಒಟ್ಟಾರೆಯಾಗಿ ಪುರುಷರ ಎತ್ತರ ಜಿಗಿತದಲ್ಲಿ 2.22 ಮೀಟರ್ ಎತ್ತರ ಜಿಗಿತದೊಂದಿಗೆ ಭಾರತಕ್ಕೆ ಎತ್ತರ ಜಿಗಿತದಲ್ಲಿ ಮೊದಲ ಪದಕ ತಂದುಕೊಟ್ಟ ಸ್ಪರ್ಧಿ ಎಂದು ಹೆಸರುವಾಸಿಯಾಗಿದ್ದಾರೆ.
ತೇಜಸ್ವಿನ್ ಶಂಕರ್ ಅವರು ಕಳೆದ ಒಂದು ವಾರಗಳ ಹಿಂದೆ ಜೆಎಲ್ಎನ್ ಸ್ಟೇಡಿಯಂ ನಲ್ಲಿ ಪ್ರತಿನಿತ್ಯ ತನ್ನ ಮೂರು ಸಾಕು ನಾಯಿಗಳ ಮುಂದೆ ಅಭ್ಯಾಸ ನಡೆಸುತ್ತಿದ್ದರು.
ಎ ಎಫ್ ಐ ಕ್ಯೂ ಎಫ್ ಮಾನದಂಡವನ್ನು ಪೂರೈಸಿದ್ದರೂ ಸಿಡಬ್ಲ್ಯೂಜಿ ತಂಡಕ್ಕೆ ಹೆಸರಿಸಲಾಗಿರಲಿಲ್ಲ. ಫೆಡ್ ಅನ್ನು ನ್ಯಾಯಕ್ಕೆ ತೆಗೆದುಕೊಂಡ ನಂತರ ಕೊನೆಯ ನಿಮಿಷದಲ್ಲಿ ಸೇರಿಸಲಾಗಿತ್ತು. ಇಂದು ನಡೆದ ಕ್ರೀಡಾಕೂಟದಲ್ಲಿ ಎತ್ತರ ಜಿಗಿತಲ್ಲಿ ಸಾಧಿಸುವ ಮೂಲಕ ಎಲ್ಲರ ಗಮನ ತನ್ನತ್ತ ಸೆಳೆದಿದ್ದಾರೆ.