Light
Dark

ಕಾಮನ್ ವೆಲ್ತ್ 2022 : ವೇಟ್ ಲಿಪ್ಟಿಂಗ್ ನಲ್ಲಿ ಭಾರತಕ್ಕೆ 3ನೇ ಚಿನ್ನ

ಬರ್ಮಿಂಗ್ ಹ್ಯಾಮ್ : ಕಾಮನ್ವೆಲ್ತ್ 2022ರ ಕ್ರೀಡಾಕೂಟದಲ್ಲಿ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತವು ಮೂರನೇ ಚಿನ್ನದ ಪದಕವನ್ನು ಪಡೆದುಕೊಂಡಿದೆ.

73 ಕೆಜಿ ವಿಭಾಗದಲ್ಲಿ ಅಂಚಿತ ಶೆಯುಲಿ ಅವರು ವಿಜೇತರಾಗಿದ್ದು ಭಾನುವಾರ ರಾತ್ರಿ ನಡೆದ ಫೈನಲ್ ಸ್ಪರ್ಧೆಯಲ್ಲಿ 313 ಕೆಜಿ ಭಾರ ಎತ್ತುವ ಮೂಲಕ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ದಾಖಲೆ ಬರೆದಿದ್ದಾರೆ.

ಪಶ್ಚಿಮ ಬಂಗಾಳದ 20 ವರ್ಷದ ಅಂಚಿತ ಶೆಯುಲಿ ಸ್ನ್ಯಾಚ್ ವಿಭಾಗದಲ್ಲಿ ಮೊದಲ ಸಲ 143 ಕೆಜಿ ಎತ್ತಿ ಬಳಿಕ ಕ್ಲೀನ್ ಅಂಡ್ ಜರ್ಕ್ ವಿಭಾಗದಲ್ಲಿ 170 ಕೆಜಿ ಭಾರ ಎತ್ತುವುದರ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ