Mysore
23
overcast clouds

Social Media

ಭಾನುವಾರ, 20 ಏಪ್ರಿಲ 2025
Light
Dark

Champions Trophy 2025: ಇಂಗ್ಲೆಂಡ್‌ ಮಣಿಸಿ ಸೆಮಿಸ್‌ಗೆ ಲಗ್ಗೆಯಿಟ್ಟ ಹರಿಣ ಪಡೆ

ಕರಾಚಿ: ಮಾರ್ಕೋ ಯಾನ್ಸನ್‌, ಮುಲ್ಡರ್‌ ಪ್ರಭಾವಿ ಬೌಲಿಂಗ್‌ ದಾಳಿ, ಕ್ಲಾಸೆನ್‌ ಹಾಗೂ ಡುಸೆನ್‌ ಅವರ ಬ್ಯಾಟಿಂಗ್‌ ಸಹಾಯದ ಬಲದಿಂದ ಬಲಿಷ್ಠ ಇಂಗ್ಲೆಂಡ ತಂಡವನ್ನು ಬಗ್ಗು ಬಡಿದ ದಕ್ಷಿಣಾ ಆಫ್ರಿಕಾ ತಂಡ ಐಸಿಸಿ ಚಾಂಪಿಯನ್ಸ್‌ ಟ್ರೋಫಿ-2025 ರ ಟೂರ್ನಿಯಲ್ಲಿ ಸೆಮಿಸ್‌ಗೆ ಲಗ್ಗೆಯಿಟ್ಟಿದೆ.

ಇಲ್ಲಿನ ಕರಾಚಿ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ 38.2 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 179 ರನ್‌ ಗಳಿಸಿತು. ಈ ಮೊತ್ತ ಬೆನ್ನತ್ತಿದ ದಕ್ಷಿಣಾ ಆಫ್ರಿಕಾ 29.1 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 181 ರನ್‌ ಗಳಿಸಿ 7 ವಿಕೆಟ್‌ಗಳ ಅಂತರದಿಂದ ಗೆದ್ದು ಬೀಗಿದೆ.

ಇಂಗ್ಲೆಂಡ್‌ ಇನ್ನಿಂಗ್ಸ್‌: ಟೂರ್ನಿಯಲ್ಲಿ ತೀರಾ ಕಳಪೆ ಪ್ರದರ್ಶನ ಮುಂದುವರಿಸಿದ ಇಂಗ್ಲೆಂಡ್‌ ಟೂರ್ನಿಯಲ್ಲಿನ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮಂಕಾಯಿತು. ಆಂಗ್ಲರ ಪರ 37 ರನ್‌ ಗಳಿಸಿದ್ದ ರೂಟ್‌ ಅವರದ್ದೇ ವೈಯಕ್ತಿಕ ಗರಿಷ್ಠ ರನ್‌ ಆಗಿತ್ತು. ಇವರಿಗೆ ಜೊತೆಯಾಗಿ ಡಕೆಟ್‌ 24, ಹ್ಯಾರಿ ಬ್ರೂಕ್‌ 19, ನಾಯಕ ಬಟ್ಲರ್‌ 21, ಜೋಫ್ರಾ ಆರ್ಚರ್‌ 25 ರನ್‌ ಗಳಿಸಿದರು.

ದಕ್ಷಿಣಾ ಆಫ್ರಿಕಾ ಪರ ಮಾರ್ಕೋ ಯಾನ್ಸನ್‌, ಮುಲ್ಡರ್‌ ತಲಾ ಮೂರು ವಿಕೆಟ್‌, ಮಹಾರಾಜ್‌ ಎರಡು ವಿಕೆಟ್‌ಗಳಿಸಿ ಮಿಂಚಿದರು.

ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌: ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಹರಿಣ ಪಡೆಗೆ ಆರಂಭಿಕ ಆಘಾತ ಉಂಟಾಯಿತು. ಸ್ಟಬ್ಸ್‌ ಶೂನ್ಯಕ್ಕೆ ಔಟಾದರು. ರಿಯಾನ್‌ 27 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು.

ಬಳಿಕ ಒಂದಾದ ಡುಸೆನ್‌ ಹಾಗೂ ಕ್ಲಾಸೆನ್‌ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಹನ್ರಿಚ್‌ ಕ್ಲಾಸೆನ್‌ 56 ಎಸತಗಳಲ್ಲಿ 11 ಬೌಂಡರಿ ಸಹಿತ 64 ರನ್‌ ಬಾರಿಸಿದರು. ಡುಸೆನ್‌ ಔಟಾಗದೇ 87 ಎಸತ, 6 ಬೌಂಡರಿ, 3 ಸಿಕ್ಸರ್‌ ಸಹಿತ 72 ರನ್‌ ಗಳಿಸಿದರು. ಕೊನೆಯಲ್ಲಿ ಬಂದ ಮಿಲ್ಲರ್‌ 7 ರನ್‌ ಬಾರಿಸಿ ಗೆಲುವಿನ ನಗೆ ಬೀರಿದರು.

ಜೋಫ್ರಾ ಆರ್ಚರ್‌ ಎರಡು, ಆದಿಲ್‌ ರಶೀದ್‌ ಒಂದು ವಿಕೆಟ್‌ ಕಬಳಿಸಿದರು.

Tags: