ಕರಾಚಿ: ಬ್ಯಾಟರ್ ಮತ್ತು ಬೌಲರ್‌ಗಳ ಅತ್ಯತ್ತಮ ಪ್ರದರ್ಶನದಿಂದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ʼಬಿʼ ಗುಂಪಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಅಫ್ಗಾನಿಸ್ತಾನದ ವಿರುದ್ಧ 107 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಫ್ರಿಕಾದ ನಾಯಕ ಬವುಮಾನ ನಿರ್ಧಾರಕ್ಕೆ ತಕ್ಕಂತೆ ಬ್ಯಾಟರ್‌ಗಳು ಬ್ಯಾಟ್ ಬೀಸಿದರು.
ಆಫ್ರಿಕಾದ ಆರಂಭಿಕ ಆಟಗಾರ ರಯಾನ್ ರಿಕಲ್ಟನ್ ಅವರ ಭರ್ಜರಿ ಶತಕದ 103(106) ಜೊತೆಗೆ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ನಾಯಕ ತೆಂಬಾ ಬವುಮಾ 58(76), ರಸಿ ವಾನ್‌ಡರ್ ಡಸೆ 52(46), ಹಾಗೂ ಏಡನ್ ಮರ್ಕರಂ 52(36) ಅವರ ಅರ್ಧಶತಕಗಳ ಮೂಲಕ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 315 ರನ್‌ಗಳ ಸವಾಲಿನ ಮೊತ್ತ ಕಲೆ ಹಾಕಿದರು.
ಸವಾಲಿನ ಗುರಿ ಬೆನ್ನತ್ತಿದ ಅಫ್ಗಾನಿಸ್ಥಾನ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟರ್ ರಹಮತ್ ಶಾ 90(92) ಅವರ ಅರ್ಧಶತಕ ಹೊರತುಪಡಿಸಿದರೆ ಉಳಿದ ಯಾವ ಬ್ಯಾಟರ್ ಕೂಡ ಆಫ್ರಿಕಾದ ಬೌಲಿಂಗ್ ದಾಳಿ ಎದುರಿಸಲು ವಿಫಲವಾದರು.
ಅಂತಿಮವಾಗಿ ಅಫ್ಗಾನಿಸ್ತಾನ 43.3 ಓವರ್‌ಗಳಲ್ಲಿ 208 ರನ್‌ಗಳಿಗೆ ಆಲೌಟ್ ಆಗುವ ಮೂಲಕ 107ರನ್‌ಗಳ ಸೊಲೊಪ್ಪಿಕೊಂಡಿತ್ತು.
ದಕ್ಷಿಣ ಆಫ್ರಿಕಾ ಪರ ಉತ್ತಮ ದಾಳಿ ನಡೆಸಿದ ಕಗಿಸೊ ರಬಾಡ 3 ವಿಕೆಟ್, ಲುಂಗಿ ನಿಗಡಿ ಹಾಗೂ ಮಲ್ಡರ್ ತಲಾ 2 ವಿಕೆಟ್ ಪಡೆದರೆ, ಮಾರ್ಕೊ ಯಾನ್ಸನ್ ಹಾಗೂ ಕೇಶವ್ ಮಹಾರಾಜ್ ತಲಾ 1 ವಿಕೆಟ್ ಪಡೆದರು