Mysore
27
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಮ್ಯಾಜಿಕ್ ಮಾಡಿದ ಕ್ಯಾಪ್ಟನ್ ಕೂಲ: 3 ಗಂಟೆಯಲ್ಲಿ 3.6 ಲಕ್ಷ ಕ್ಯಾಂಡಿ ಕ್ರಶ್ ಆ್ಯಪ್​ ಡೌನ್​ಲೋಡ್​!

ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಹಾಗೂ ಜನಪ್ರಿಯ ಗೇಮ್ ಕ್ಯಾಂಡಿ ಕ್ರಶ್ ಹೆಸರು ಸದ್ಯ ಟ್ರೆಂಡಿಂಗ್​ನಲ್ಲಿದೆ. ಇದಕ್ಕೆ ಕಾರಣ ವೈರಲ್ ಆಗಿರುವ ವಿಡಿಯೋ ಎಂದರೆ ನೀವು ನಂಬಲೇಬೇಕು! ಈ ವಿಡಿಯೋವನ್ನು ಇಲ್ಲಿಯವರೆಗೆ ಒಂದು ಕೋಟಿಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

ಇತ್ತೀಚೆಗೆ ಮಹೇಂದ್ರ ಸಿಂಗ್ ಧೋನಿ ಎಕಾನಮಿ ಕ್ಲಾಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಗಗನಸಖಿಯೊಬ್ಬರು ಬಂದು ಚಾಕೋಲೇಟ್​​​​ ನೀಡಿ ಸರ್ಪ್ರೈಸ್​ ಕೊಟ್ಟರು. ಜತೆಗೆ ಸಂದೇಶವಿರುವ ಪತ್ರವೊಂದನ್ನು ನೀಡಿದರು. ಆದರೆ ಧೋನಿ ಚಾಕಲೇಟ್ ತೆಗೆದುಕೊಳ್ಳಲು ನಿರಾಕರಿಸಿ, ಖರ್ಜೂರದ ಪ್ಯಾಕೆಟ್ ಅನ್ನು ತೆಗೆದುಕೊಂಡರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನಿನ್ನೆಯಿಂದ ವೈರಲ್ ಆಗುತ್ತಿದೆ.

ಗಗನಸಖಿ ಬಂದು ಚಾಕೋಲೇಟ್ ನೀಡುತ್ತಿದ್ದ ವೇಳೆ ಟ್ಯಾಬ್ಲೆಟ್​ನಲ್ಲಿ ಧೋನಿ ಕ್ಯಾಂಡಿ ಕ್ರಶ್ ಗೇಮ್ ಆಡುತ್ತಿದ್ದರು. ಇದು ವೈರಲ್ ಆಗಿರುವ ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡು ಬಂದಿದೆ. ಇದರ ಬೆನ್ನಲ್ಲೇ ಎಂಎಸ್ ಧೋನಿ ಹೆಸರಿನೊಂದಿಗೆ ಕ್ಯಾಂಡಿ ಕ್ರಶ್ ಎಂಬ ಹ್ಯಾಶ್‌ಟ್ಯಾಗ್ ಟ್ವಿಟರ್‌ನ ಟ್ರೆಂಡಿಂಗ್ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಈ ಬಗ್ಗೆ ಫ್ಯಾನ್ಸ್ ನಿನ್ನೆಯಿಂದ ಸಾಕಷ್ಟು ಕಮೆಂಟ್ ಮಾಡುತ್ತಿದ್ದಾರೆ.
1 ಗಂಟೆಯಲ್ಲಿ 3 ಲಕ್ಷ ಆಪ್‌ ಡೌನ್‌ಲೋಡ್‌: ಈ ವಿಡಿಯೋ ವೈರಲ್ ಆಗಿದ್ದು, ಕ್ಯಾಂಡಿ ಕ್ರಶ್ ಗೇಮ್ ಲಾಭ ಪಡೆದುಕೊಂಡಿದೆ. ಧೋನಿ ಕ್ಯಾಂಡಿ ಕ್ರಶ್ ಆಡುತ್ತಿದ್ದರು ಎಂಬ ಕಾರಣಕ್ಕೆ ಫ್ಯಾನ್ಸ್ ತಡಮಾಡದೆ ಪ್ಲೇ ಸ್ಟೋರ್​ನಿಂದ ಕ್ಯಾಂಡಿ ಕ್ರಶ್ ಗೇಮ್ ಡೌನ್​ಲೋಡ್​ ಮಾಡಿದ್ದಾರೆ. ಈ ಬಗ್ಗೆ ಕ್ಯಾಂಡಿ ಕ್ರಶ್​ ಇಂಡಿಯಾ ಸಂಸ್ಥೆ ಟ್ವಿಟರ್​​​ನಲ್ಲಿ ಪೋಸ್ಟ್​​​ ಮಾಡಿದೆ.
ಕೇವಲ 3 ಗಂಟೆಗಳಲ್ಲಿ 3.6 ಮಿಲಿಯನ್ ಹೊಸದಾಗ ಕ್ಯಾಂಡಿ ಕ್ರಶ್ ಆ್ಯಪ್​​ ಅನ್ನು ಡೌನ್‌ಲೋಡ್‌ ಆಗಿದೆ. ಭಾರತೀಯ ಕ್ರಿಕೆಟ್ ದಂತಕಥೆಗೆ ಎಂಎಸ್​ ಧೋನಿ (@msdhoni) ಅವರಿಗೆ ಧನ್ಯವಾದಗಳು. ನಿಮ್ಮಿಂದ ನಾವು ಭಾರತದಲ್ಲಿ ಟ್ರೆಂಡಿಂಗ್ ಆಗಿದ್ದೇವೆ ಎಂದು ಬರೆದುಕೊಂಡಿದೆ.
ಇದೊಂದು ಫೇಕ್ ಟ್ವೀಟ್!: @teams_dream(Candy Crush Saga Official) ಹೆಸರಿನ ಟ್ವಿಟರ್ ಪೇಜ್ ಧೋನಿ ಕಾರಣದಿಂದ ಮೂರು ಗಂಟೆಯಲ್ಲಿ 3.6 ಲಕ್ಷ ಜನರು ಕ್ಯಾಂಡಿ ಕ್ರಶ್ ಡೌನ್​ಲೋಡ್ ಮಾಡಿಕೊಂಡಿದ್ದಾರೆ ಎಂದು ಟ್ವೀಟ್ ಮಾಡಿತ್ತು. ಇದೀಗ ಈ ಖಾತೆ ಕ್ಯಾಂಡಿ ಕ್ರಶ್ ಗೇಮ್ ಅಧಿಕೃತ ಖಾತೆ ಅಲ್ಲ ಎಂಬುದು ಗೊತ್ತಾಗಿದೆ.

https://twitter.com/teams_dream/status/1672944660250238976?s=20

ಅಧಿಕೃತ ಖಾತೆ ವೈರಲ್ ಆಗಿರುವ ವೀಡಿಯೊ ಕುರಿತು ಏನನ್ನೂ ಟ್ವಿಟ್ ಮಾಡಿಲ್ಲ. ಅದಾಗ್ಯೂ ಕ್ಯಾಂಡಿ ಕ್ರಶ್ ಗೇಮ್ ಟ್ರೆಂಡಿಂಗ್ ಆಗಿರುವುದಂತು ಸತ್ಯ. ಧೋನಿ ಜನಪ್ರಿಯತೆ ಕಾರಣದಿಂದ ವಿಡಿಯೋ ವೈರಲ್ ಆದ ಆದ ಬೆನ್ನಲ್ಲೇ ಲಕ್ಷಾಂತರ ಮಂದಿ ಗೇಮ್ ಡೌನ್ಲೋಡ್ ಮಾಡಿದ್ದಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ