Mysore
24
haze

Social Media

ಶನಿವಾರ, 06 ಡಿಸೆಂಬರ್ 2025
Light
Dark

ಮೊದಲ ಟೆಸ್ಟ್: ಬಾಂಗ್ಲಾ ವಿರುದ್ಧ ಭಾರತ ಸ್ಪಷ್ಟ ಮೇಲುಗೈ

ಚಿತ್ತಗಾಂಗ್: ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಂತ್ಯಕ್ಕೆ ಬಾಂಗ್ಲಾದೇಶ 8 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿದ್ದು ಭಾರತ ಸ್ಪಷ್ಟ ಮೇಲುಗೈ ಸಾಧಿಸಿದೆ.

ಇಲ್ಲಿನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನ ಭಾರತ 133.5 ಓವರ್ಗಳಲ್ಲಿ 404 ರನ್ ಗಳಿಸಿ ಮೊದಲ ಇನ್ನಿಂಗ್ಸ್‌ ಮುಗಿಸಿದೆ.
ಇದಕ್ಕೆ ಪ್ರತ್ಯುತ್ತರವಾಗಿ ಬಾಂಗ್ಲಾದೇಶ 44 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 133 ರನ್ ಗಳಿಸಿದೆ. ಇದರಿಂದ ಟೀಂ ಇಂಡಿಯಾ ಪಂದ್ಯದಲ್ಲಿ ಹಿಡಿತ ಸಾಧಿಸಿದ್ದು, ಜಯದ ವಿಶ್ವಾಸದಲ್ಲಿದೆ.
ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಭಾರತ ಬಾಂಗ್ಲಾದೇಶವನ್ನು ಮೊದಲನೇ ದಿನವೇ ಕಟ್ಟಿಹಾಕಿತು.
ಎರಡನೇ ದಿನದ ಆಟ ಮುಂದುವರಿಸಿದ ಶ್ರೇಯಸ್ ಅಯ್ಯರ್ ಶತಕ ಗಳಿಸುವ ಭರವಸೆ ಮೂಡಿಸಿದ್ದರು. ಆದರೆ ಕೇವಲ 4 ರನ್ ಗಳಿಸಿ 86 ರನ್ ಗಳ ಗಳಿಕೆಯೊಂದಿಗೆ ಅವರು ಪೆವಿಲಿಯನ್ ಗೆ ಮರಳಿದರು. ಆದರೆ ನಂತರ ಬಂದ ರವಿಚಂದ್ರನ್ ಅಶ್ವಿನ್ (58) ಮತ್ತು ಕುಲದೀಪ್ ಯಾದವ್ (40) ಏಳನೇ ವಿಕೆಟ್ ಗೆ ಅದ್ಭುತ ಜತೆಯಾಟ ಪ್ರದರ್ಶಿಸಿ ಭಾರತ 400 ರ ಗಡಿ ದಾಟುವಂತೆ ನೋಡಿಕೊಂಡರು.
ಬಾಂಗ್ಲಾ ಪರ ಝಾಕಿರ್ ಹಸನ್ 22 ರನ್, ನಜ್ಮುಲ್ ಹೊಸೈನ್ ಶಾಂಟೊ ಶೂನ್ಯ, ಲಿಟನ್ ದಾಸ್ 24 ರನ್, ಶಾಕಿಬ್ ಅಲ್ ಹಸನ್ 3 ರನ್, ಮುಶ್ಫಿಕರ್ ರಹೀಮ್ 28 ರನ್, ಯಾಸಿರ್ ಅಲಿ 4 ರನ್, ನೂರುಲ್ ಹಸನ್ 16 ರನ್, ತೈಜುಲ್ ಇಸ್ಲಾಂ ಶೂನ್ಯಕ್ಕೆ ಔಟ್ ಆದರು.
ಮೆಹದಿ ಹಸನ್ ಮಿರಾಜ್ 16 ಹಾಗೂ ಇಬಾದತ್ ಹೊಸೈನ್ ಅಜೇಯ 13 ರನ್ ಗಳಿಸಿದ್ದು ಮೂರನೇ ದಿನದಾಟವನ್ನು ಆರಂಭಿಸಲಿದ್ದಾರೆ.

ಟೀಂ ಇಂಡಿಯಾ ಬೌಲಿಂಗ್ ಗೆ ತತ್ತರಿಸಿದ ಬಾಂಗ್ಲಾ:

ಮೊದಲ ಓವರ್ನಿಂದಲೇ ಬಾಂಗ್ಲಾ ವಿರುದ್ಧ ಭಾರತ ಬಿಗಿ ಹಿಡಿತ ಸಾಧಿಸಿತು. ಮೊಹಮ್ಮದ್ ಸಿರಾಜ್ ಬಾಂಗ್ಲಾದೇಶ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಸಿರಾಜ್ 9 ಓವರ್ ಗೆ ಕೇವಲ 14 ರನ್ ನೀಡಿ 3 ವಿಕೆಟ್ ಪಡೆದರು. ಕುಲ್ದೀಪ್ ಯಾವದ್ 10 ಓವರ್ಗೆ 34 ರನ್ ನೀಡಿ 4 ವಿಕೆಟ್ ಕಬಳಿಸಿದರು. ಉಮೇಶ್ ಯಾದವ್ 1 ವಿಕೆಟ್ ಪಡೆದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!