Mysore
27
scattered clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

ಐಸಿಸಿ ವರ್ಷದ ಶ್ರೇಷ್ಠ ಪ್ರಶಸ್ತಿಗೆ ಬಾಬರ್ ಆಜಂ ಭಾಜನ

ನವದೆಹಲಿ : ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ 2022ರ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿಯನ್ನು ಪ್ರಕಟಿಸಿದೆ. ಶ್ರೇಷ್ಠ ಕ್ರಿಕೆಟಿಗ ಸರ್ ಗಾರ್ಫೀಲ್ಡ್ ಸೋಬರ್ಸ್ ಹೆಸರಿನಲ್ಲಿ ನೀಡಲಾಗುವ ಈ ಪ್ರಶಸ್ತಿಯು ಈ ಬಾರಿ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಜಂ ಅವರಿಗೆ ಒಲಿದಿದೆ.
ಇದಕ್ಕೂ ಮುನ್ನ 2022ರ ಐಸಿಸಿ ಏಕದಿನ ಕ್ರಿಕೆಟಿಗ ಪ್ರಶಸ್ತಿಗೆ ಬಾಬರ್ ಆಜಂ ಆಯ್ಕೆಯಾಗಿದ್ದರು. ಇದೀಗ ಕಳೆದ ವರ್ಷದ ಅತ್ಯುತ್ತಮ ಆಟಗಾರನ ಪ್ರಶಸ್ತಿ ಕೂಡ ಬಾಬರ್ ಪಾಲಾಗಿದೆ.

ಈ ಬಾರಿಯ ಪ್ರಶಸ್ತಿ ಸುತ್ತಿನಲ್ಲಿ ಒಟ್ಟು ನಾಲ್ವರು ಆಟಗಾರರಿದ್ದರು. ಬಾಬರ್ ಆಜಂ ಜೊತೆ ಇಂಗ್ಲೆಂಡ್ ಆಲ್​ರೌಂಡರ್ ಬೆನ್ ಸ್ಟೋಕ್ಸ್​, ಜಿಂಬಾಬ್ವೆ ಆಲ್​ರೌಂಡರ್ ಸಿಕಂದರ್ ರಾಝ ಹಾಗೂ ನ್ಯೂಜಿಲೆಂಡ್ ವೇಗಿ ಟಿಮ್ ಸೌಥಿ ಅಂತಿಮ ಸುತ್ತಿನ ಪೈಪೋಟಿಯಲ್ಲಿದ್ದರು. ಆದರೆ ಮೂರು ಸ್ವರೂಪದ ಕ್ರಿಕೆಟ್​ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದ ಬಾಬರ್​ಗೆ ಇದೀಗ ಶ್ರೇಷ್ಠ ಕ್ರಿಕೆಟಿಗ ಸರ್ ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿ ಒಲಿದಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!