Mysore
26
scattered clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ದಾಖಲೆಯ ಮೊತ್ತ ಬೆನ್ನತ್ತಿ ಗೆದ್ದ ಆಸ್ಟ್ರೇಲಿಯಾ

ಲಾಹೋರ್‌: ಮಧ್ಯಮ ಕ್ರಮಾಂಕದ ಬ್ಯಾಟರ್‌ ಜೋಶ್‌ ಇಂಗ್ಲಿಸ್‌ ಅವರ ಭರ್ಜರಿ ಶತಕದ ನೆರವಿನಿಂದ ಚಾಂಪಿಯನ್ಸ್‌ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್‌ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಈ ಮೂಲಕ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯ ಇತಿಹಾಸದಲ್ಲಿ ದಾಖಲೆಯ ಮೊತ್ತ ಬೆನ್ನತ್ತಿ ಗೆದ್ದ ಹೆಗ್ಗಳಿಕೆಗೆ ಆಸ್ಟ್ರೇಲಿಯಾ ತಂಡ ಪಾತ್ರವಾಗಿದೆ.

ಲಾಹೋರ್‌ನ ಗಢಾಫಿ ಸ್ಟೇಡಿಯಂನಲ್ಲಿ ಟಾಸ್‌ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್‌ ಸ್ಮಿತ್‌ ಫಿಲ್ಡಿಂಗ್‌ ಆಯ್ಕೆ ಮಾಡಿ, ಎದುರಾಳಿ ಇಂಗ್ಲೆಂಡ್‌ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು.

ಇಂಗ್ಲೆಂಡ್‌ನ ಆರಂಭಿಕ ಆಟಗಾರ ಫಿಲ್‌ ಸಾಲ್ಟ್‌ 10(6) ಹಾಗೂ ಜಾಮೀ ಸ್ಮಿತ್‌ 15(13) ವಿಕೆಟ್‌ ಪತನದ ನಡುವೆಯೂ ಸೊಗಸಾದ ಆಟವಾಡಿದ ಬೆನ್‌ ಡಕೆಟ್‌ 165(143) ಶತಕ ಹಾಗೂ ಹಾಗೂ ಜೋ ರೂಟ್‌ 68(78) ಅವರ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್‌ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 351 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು.

ಕಠಿಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್‌ ಜೋಶ್‌ ಇಂಗ್ಲಿಸ್‌ನ ಭರ್ಜರಿ ಶತಕದ ನೆರವಿನೊಂದಿಗೆ 47.3 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 356 ರನ್‌ ಸಿಡಿಸಿ ಐತಿಹಾಸಿಕ ಭರ್ಜರಿ ಜಯ ಸಾಧಿಸಿತು.

ಎರಡು ವಿಕೆಟ್‌ ಬೇಗನೇ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ ತಂಡಕ್ಕೆ ಆರಂಭಿಕ ಬ್ಯಾಟರ್‌ ಮ್ಯಾಥ್ಯೂ ಶಾರ್ಟ್‌ 63(66) ಹಾಗೂ ಮಾರ್ನಸ್‌ ಲಾಬುಶೇನ್‌ 47(45) ಜೊತೆಗೂಡಿ 95 ರನ್‌ಗಳ ಜೊತೆಯಾಟ ಆಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು.

ಇವರ ವಿಕೆಟ್‌ ನಂತರ ಇಂಗ್ಲಿಸ್‌ ಜೊತೆ ಗೂಡಿದ ಅಲೆಕ್ಸ್‌ ಕ್ಯಾರಿ 69(63) ಅರ್ಧಶತಕದ ಕಾಣಿಕೆ ನೀಡಿ ಕಾರ್ಸ್‌ ಬೌಲಿಂಗ್‌ನಲ್ಲಿ ಬಟ್ಲರ್‌ಗೆ ಕ್ಯಾಚ್‌ ನೀಡಿ ಪೆವಿಲಿಯನ್‌ ಸೇರಿದರು. ಅಂತಿಮವಾಗಿ ಇಂಗ್ಲಿಸ್‌ ಜೊತೆಗೂಡಿದ ಮ್ಯಾಕ್ಸವೆಲ್‌ 32(15) ತಂಡವನ್ನು ಗೆಲುವಿನ ದಡ ಸೇರಿಸಿದರು.

ಸಂಕ್ಷೀಪ್ತ ಸ್ಕೋರ್:

ಇಂಗ್ಲೆಂಡ್‌: 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 351 ( ಬೆನ್‌ ಡಕೆಟ್‌ 165, ಜೋ ರೂಟ್‌ 68, ಜೋಶ್‌ ಬಟ್ಲರ್‌ 23, ಜೋಫ್ರಾ ಆರ್ಚರ್‌ ಔಟಾಗದೇ 21; ಬೆನ್‌ ಡ್ವಾರಸಿಸ್‌ 66ಕ್ಕೆ3, ಜಂಪಾ 64ಕ್ಕೆ2, ಲಾಬುಶೇನ್‌ 41ಕ್ಕೆ 2);

ಆಸ್ಟ್ರೇಲಿಯಾ: 47.3 ಓವರ್‌ಗಳಲ್ಲಿ 5 ವಿಕೆಟ್‌ಗೆ 356 (ಮ್ಯಾಥ್ಯೂ ಶಾರ್ಟ್‌ 63, ಮಾರ್ನಸ್‌ ಲಾಬುಷೇನ್‌ 47, ಜೋಶ್‌ ಇಂಗ್ಲಿಸ್‌ 120, ಅಲೆಕ್ಸ್‌ ಕ್ಯಾರಿ 69, ಗ್ಲೆನ್‌ ಮ್ಯಾಕ್ಸವೆಲ್‌ ಔಟಾಗದೇ 32 ಅದಿಲ್‌ ರಶೀದ್‌ 47ಕ್ಕೆ1, ಲಿವಿಂಗ್‌ ಸ್ಟೋನ್‌ 47ಕ್ಕೆ1);

ಪಂದ್ಯದ ಆಟಗಾರ: ಜೋಶ್‌ ಇಂಗ್ಲಿಸ್‌

Tags:
error: Content is protected !!