ನಿಂಗೊ (ಚೀನಾ): ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಸೇಲಿಂಗ್‌ನಲ್ಲಿ ಭಾರತದ ನೇಹಾ ಠಾಕೂರ್ ಬೆಳ್ಳಿ ಪದಕ ಜಯಿಸಿದ್ದಾರೆ. ಮಹಿಳೆಯರ ಡಿಂಘಿ ಐಎಲ್‌ಸಿಎ-4 ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾರೆ.
ಭೋಪಾಲ್‌ನ ನ್ಯಾಷನಲ್ ಸೇಲಿಂಗ್ ಸ್ಕೂಲ್‌ನ ಉದಯೋನ್ಮುಖ ಸೇಲಿಂಗ್ ಪಟು ನೇಹಾ ಒಟ್ಟು 32 ಅಂಕಗಳೊಂದಿಗೆ ಸ್ಪರ್ಧೆ ಮುಗಿಸಿದರು. ಅವರ ನೆಟ್ ಸ್ಕೋರ್ 27 ಆಗಿದ್ದರಿಂದ ಬೆಳ್ಳಿಗೆ ತೃಪ್ತಿ ಪಡಬೇಕಾಯಿತು. 16 ನೆಟ್ ಸ್ಕೋರ್ ಇದ್ದ ಥಾಯ್ಲೆಂಡ್‌ನ ನೊಪಾಸ್ಪೋರ್ನ್ ಖುನ್‌ಬೂಂಜಾನ್ ಚಿನ್ನ ಗೆದ್ದರು.
28 ನೆಟ್ ಸ್ಕೋರ್ ಇದ್ದ ಸಿಂಗಪುರದ ಕೀರಾ ಮೇರಿ ಕಾರ್ಲೈಲ್ ನೆಟ್ರೋರ್ ಕಂಚಿನ ಪದಕ ಗೆದ್ದರು.
ಸೇಲಿಂಗ್‌ನಲ್ಲಿ ನೆಟ್ ಸ್ಕೋರ್ ಅನ್ನು ನಿರ್ಧರಿಸಲು ಎಲ್ಲಾ ರೇಸ್‌ಗಳಿಂದ ಸ್ಪರ್ಧಿಯ ಕೆಟ್ಟ ಸ್ಕೋರ್ ಅನ್ನು ಒಟ್ಟು ಅಂಕಗಳಿಂದ ಕಳೆಯಲಾಗುತ್ತದೆ. ಕಡಿಮೆ ನೆಟ್ ಸ್ಕೋರ್ ಹೊಂದಿರುವವರನ್ನು ವಿಜೇತ ಎಂದು ನಿರ್ಣಯಿಸಲಾಗುತ್ತದೆ.
ಮಹಿಳೆಯರ ಡಿಂಘಿ ILCA-4 ವಿಭಾಗವು 11 ರೇಸ್‌ಗಳನ್ನು ಒಳಗೊಂಡಿದೆ. ನೇಹಾ ಒಟ್ಟು 32 ಅಂಕಗಳೊಂದಿಗೆ ಸ್ಪರ್ಧೆ ಮುಗಿಸಿದರು. ಐದನೇ ರೇಸ್‌ನಲ್ಲಿ ಕೇವಲ 5 ಅಂಕ ಗಳಿಸುವ ಮೂಲಕ ಕೆಟ್ಟ ಪ್ರದರ್ಶನ ನೀಡಿದ ನೇಹಾ, 27 ನೆಟ್ ಸ್ಕೋರ್‌ನೊಂದಿಗೆ ಆಟ ಮುಗಿಸಿದರು.