ಹಾಂಗ್‌ಝೌ : ಏಷ್ಯನ್ ಕ್ರೀಡಾಕೂಟದ ಕಬಡ್ಡಿಯಲ್ಲಿ ನೇಪಾಳ ತಂಡವನ್ನು 61-17ರ ಭಾರಿ ಅಂತರದಲ್ಲಿ ಮಣಿಸಿದ ಭಾರತ ಮಹಿಳೆಯರ ತಂಡ ಫೈನಲ್ ಪ್ರವೇಶಿಸಿದೆ.
ಎರಡು ಬಾರಿಯ ಚಾಂಪಿಯನ್ ಭಾರತ, ಮೊದಲಾರ್ಧದಲ್ಲಿ 29-10ರ ಅಂತರದಲ್ಲಿ ಮುನ್ನಡೆ ಸಾಧಿಸಿತು. ಪೂಜಾ ಹಾಲಾ, ಪುಷ್ಪಾ ರಾಣಾ ಅವರು ಅತ್ಯುತ್ತಮ ರೇಡ್‌ಗಳ ಮೂಲಕ ನೇಪಾಳವನ್ನು ಕಂಗೆಡಿಸಿದರು.
ಎದುರಾಳಿಯನ್ನು ಒಟ್ಟು ಐದು ಬಾರಿ ಅಲೌಟ್ ಮಾಡಿದ ಭಾರತ, ಎಲ್ಲ ಟೂರ್ನಿಗಳಲ್ಲೂ ಫೈನಲ್ ತಲುಪಿದ ಸಾಧನೆ ಮಾಡಿತು.
ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಇರಾನ್- ಚೀನಾ ಕೃಷಿ ಮುಖಾಮುಖಿಯಾಗಲಿವೆ. ಗೆದ್ದ ತಂಡ ಫೈನಲ್‌ನಲ್ಲಿ ಭಾರತಕ್ಕೆ ಸವಾಲೊಡ್ಡಲಿದೆ.
ಭಾರತ ತಂಡ ಕಳೆದ ಬಾರಿ ರನ್ನರ್ ಅಪ್ ಆಗಿತ್ತು.
ಭಾರತ-ಪಾಕ್ ಹಣಾಹಣಿ: 2018ರ ಕ್ರೀಡಾಕೂಟದಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದ ಭಾರತ ಪುರುಷರ ತಂಡ ಇಂದು ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ.