Mysore
20
scattered clouds

Social Media

ಗುರುವಾರ, 16 ಜನವರಿ 2025
Light
Dark

ಏಷ್ಯಾ ಕಪ್‌ 2022 : ʼನಾಗಿಣಿ ಡ್ಯಾನ್ಸ್‌ʼ ಅವಮಾನಕ್ಕೆ ಶ್ರೀಲಂಕಾ ಸೇಡು 

ದುಬೈ : ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್‌ ಟ್ವೆಂಟಿ-20 ಕ್ರಿಕೆಟ್‌ ಟೂರ್ನಿಯಲ್ಲಿಬಿ ಗುಂಪಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ದ ಶ್ರೀಲಂಕಾವು 2 ವಿಕೆಟ್‌ ಅಂತರದ ರೋಚಕ ಜಯವನ್ನು ಸಾಧಿಸುವುದುರ ಮೂಲಕ 4 ವರ್ಷಗಳ ಹಿಂದೆ ಬಾಂಗ್ಲಾದೇಶ ತಂಡದ ಆಟಗಾರರಿಂದ ಎದುರಾಗಿದ್ದ ನಾಗಿಣಿ ಡ್ಯಾನ್ಸ್‌ ಅವಮಾನಕ್ಕೆ ಈ ಪಂದ್ಯದ ಗೆಲುವಿನ ಮೂಲಕ ಶ್ರೀಲಂಕಾ ದೇಶದ ಆಟಗಾರರು ಅದೇ ಧಾಟಿಯಲ್ಲಿ ನಾಗಿಣಿ ಡ್ಯಾನ್ಸ್‌ ಮಾಡುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ. ಪ್ರಮುಖವಾಗಿ ಶ್ರೀಲಂಕಾ ತಂಡದ ಆಟಗಾರ ಚಮಿಕ ಕರುಣಾರತ್ನೆ ಅವರು ನಾಗಿಣಿ ಡ್ಯಾನ್ಸ್‌ ಮಾಡುವ ಮೂಲಕ ಬಾಂಗ್ಲಾದೇಶಕ್ಕೆ ತಿರುಗೇಟು ನೀಡಿದರು .

ನಾಗಿಣಿ ಡ್ಯಾನ್ಸ್‌ ನ ಈ ಪೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ