Mysore
19
scattered clouds

Social Media

ಗುರುವಾರ, 16 ಜನವರಿ 2025
Light
Dark

ಬ್ಯಾಡ್ಮಿಂಟನ್ ಮಿಕ್ಸೆಡ್ ಡಬಲ್ಸ್​ನಲ್ಲಿ ಬೆಳ್ಳಿ ಗೆದ್ದ ಅಶ್ವಿನಿ ಪೊನ್ನಪ್ಪಗೆ ರಾಜ್ಯ ಸರ್ಕಾರದಿಂದ ಭರ್ಜರಿ ಬಹುಮಾನ ಘೋಷಣೆ

ಬೆಂಗಳೂರು: ಜುಲೈ 28 ರಂದು ಆರಂಭವಾದ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಸೋಮವಾರ ಅದ್ಧೂರಿ ತೆರೆ ಬಿದ್ದಿದೆ. ಭಾರತದ ದೃಷ್ಟಿಕೋನದಿಂದ, ಈ ಕ್ರೀಡಾಕೂಟ ಬಹಳ ವಿಶೇಷವಾಗಿತ್ತು. ಅಲ್ಲಿ ಅನೇಕ ಆಟಗಾರರು ಇತಿಹಾಸ ಸೃಷ್ಟಿಸಿದರು, ಅನೇಕರು ದಾಖಲೆಗಳನ್ನು ಮಾಡಿ ಇಡೀ ದೇಶವೇ ಹೆಮ್ಮೆ ಪಡುವಂತಹ ಕೆಲಸ ಮಾಡಿದರು. ಇವರಲ್ಲಿ ಕರ್ನಾಟಕದ ಹೆಮ್ಮೆ ಅಶ್ವಿನಿ ಪೊನ್ನಪ್ಪ ಬ್ಯಾಡ್ಮಿಂಟನ್ ಮಿಕ್ಸೆಡ್ ಡಬಲ್ಸ್​ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಈಗ ಅವರ ಸಾಧನೆಯನ್ನು ಗುರುತಿಸಿರುವ ರಾಜ್ಯ ಸರ್ಕಾರ ಭರ್ಜರಿ ಬಹುಮಾನ ಘೋಷಿಸಿದೆ. ದೇಶಕ್ಕೆ ಕೀರ್ತಿ ತಂದ ಅಶ್ವಿನಿ ಪೊನ್ನಪ್ಪ ಅವರಿಗೆ ರಾಜ್ಯ ಸರ್ಕಾರದ ವತಿಯಿಂದ 15 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಕ್ರೀಡಾ ಸಚಿವ ನಾರಾಯಣ ಗೌಡ ಘೋಷಿಸಿದ್ದಾರೆ.

ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಅವರ ಚಿನ್ನದೊಂದಿಗೆ ಆರಂಭವಾದ ಈ ಕಾಮನ್​ವೆಲ್ತ್ ಪಯಣ ಹಾಕಿ ಬೆಳ್ಳಿ ಪದಕದೊಂದಿಗೆ ಕೊನೆಗೊಂಡಿತು. ಭಾರತ 18ನೇ ಬಾರಿಗೆ ಈ ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದು, ಇದರಲ್ಲಿ 104 ಪುರುಷರು ಮತ್ತು 103 ಮಹಿಳೆಯರು ಭಾಗವಹಿಸಿದ್ದರು. ಈ ಆಟಗಾರ 61 ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಭಾರತ 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚಿನ ಪದಕಗಳನ್ನು ಗೆದ್ದಿದೆ. ಪುರುಷರು 35 ಮತ್ತು ಮಹಿಳೆಯರು 26 ಪದಕಗಳನ್ನು ಗೆದ್ದಿದ್ದಾರೆ. ಈ ಮೂಲಕ ಭಾರತ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಕೆನಡಾ ನಂತರ ನಾಲ್ಕನೇ ಸ್ಥಾನ ಪಡೆಯಿತು.

ಭಾರತ ಕುಸ್ತಿಯಲ್ಲಿ ಗರಿಷ್ಠ 12 ಪದಕಗಳನ್ನು ಪಡೆದುಕೊಂಡಿತು, ಇದರಲ್ಲಿ ಆರು ಗೋಲ್ಡ್, ಒಂದು ಬೆಳ್ಳಿ ಮತ್ತು ಐದು ಕಂಚಿನ ಪದಕಗಳು ಸೇರಿದ್ದವು. ಲಾನ್ ಬಾಲ್‌ನಲ್ಲಿ (ಒಂದು ಚಿನ್ನ, ಒಂದು ಬೆಳ್ಳಿ) ಮೊದಲ ಬಾರಿಗೆ ದೇಶವು ಪದಕ ಗೆಲ್ಲುವಲ್ಲಿ ಯಶಸ್ವಿಯಾಯಿತು. ಅದೇ ಸಮಯದಲ್ಲಿ, ಅವರು ಅಥ್ಲೆಟಿಕ್ಸ್ ಮತ್ತು ಬ್ಯಾಡ್ಮಿಂಟನ್ನಲ್ಲಿ ತಮ್ಮ ಅತ್ಯುತ್ತಮ ಸಾಧನೆ ಮಾಡಿದರು.

ಭಾರತ ವೇಟ್‌ಲಿಫ್ಟಿಂಗ್‌ನಲ್ಲಿ 10, ಟೇಬಲ್ ಟೆನಿಸ್‌ನಲ್ಲಿ 7, ವೇಟ್‌ಲಿಫ್ಟಿಂಗ್‌ನಲ್ಲಿ 10, ಬಾಕ್ಸಿಂಗ್‌ನಲ್ಲಿ 7, ಬ್ಯಾಡ್ಮಿಂಟನ್‌ನಲ್ಲಿ 6, ಅಥ್ಲೆಟಿಕ್ಸ್‌ನಲ್ಲಿ 8, ಲಾನ್ ಬಾಲ್‌ನಲ್ಲಿ 2, ಪ್ಯಾರಾ ಲಿಫ್ಟಿಂಗ್‌ನಲ್ಲಿ ಒಂದು, ಜೂಡೋದಲ್ಲಿ ಮೂರು, ಹಾಕಿಯಲ್ಲಿ 2, ಕ್ರಿಕೆಟ್‌ನಲ್ಲಿ ಒಂದು ಮತ್ತು ಒಂದು ಸ್ಕ್ವಾಷ್‌ನಲ್ಲಿ ಎರಡು ಪದಕಗಳನ್ನು ಗೆದ್ದಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ