ಮುಂಬೈ: ಈ ವರ್ಷದ ಆರಂಭದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಿಂದ ನಿವೃತ್ತಿ ಘೋಷಿಸಿ ಕೆರಿಬಿಯನ್ ಪ್ರೀಮಿಯರ್ ಲೀಗ್ (CPL) ನಲ್ಲಿ ಆಡಲು ತೆರಳಿದ್ದ ಅಂಬಾಟಿ ರಾಯುಡು ಇದೀಗ ಅಲ್ಲಿಂದಲೂ ಹೊರಬಂದಿದ್ದಾರೆ.
ವೈಯಕ್ತಿಕ ಕಾರಣಗಳಿಂದಾಗಿ ಸಿಪಿಎಲ್ ನ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ನೊಂದಿಗೆ ರಾಯುಡು ತಮ್ಮ ಅವಧಿಯನ್ನು ಕೊನೆಗೊಳಿಸಿದ್ದಾರೆ.
ವೈಯಕ್ತಿಕ ಕಾರಣಗಳಿಂದಾಗಿ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ಜೊತೆಗಿನ ಒಪ್ಪಂದವನ್ನು ರಾಯುಡು ಕೊನೆಗೊಳಿಸಿದ್ದಾರೆ ಎಂದು ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ವರದಿ ಮಾಡಿದೆ.
ಸದ್ಯ ನಡೆಯುತ್ತಿರುವ ಆವೃತ್ತಿಯಲ್ಲಿ ಪೇಟ್ರಿಯಾಟ್ಸ್ ತಂಡದ ಪರವಾಗಿ ರಾಯುಡು ಮೂರು ಇನ್ನಿಂಗ್ಸ್ ಗಳಲ್ಲಿ ಕಾಣಿಸಿಕೊಂಡರು, 117.50 ಸ್ಟ್ರೈಕ್ ರೇಟ್‌ನೊಂದಿಗೆ 47 ರನ್ ಗಳಿಸಿದರು. ಮೂರು ಇನ್ನಿಂಗ್ಸ್‌ಗಳಲ್ಲಿ ಅವರ ಸ್ಕೋರ್‌ಗಳು 0, 32 ಮತ್ತು 15 ರನ್.
ಎರಡು ವಾರಗಳ ಹಿಂದೆ, ರಾಯುಡು ಅವರನ್ನು ಪೇಟ್ರಿಯಾಟ್ಸ್‌ನ ಮಾರ್ಕ್ಯೂ ಆಟಗಾರ ಎಂದು ಘೋಷಿಸಲಾಗಿತ್ತು. ಪ್ರವೀಣ್ ತಾಂಬೆ ನಂತರ ಪುರುಷರ ಸಿಪಿಎಲ್ ನಲ್ಲಿ ಆಡಿದ ಎರಡನೇ ಭಾರತೀಯ ಎಂಬ ಖ್ಯಾತಿಗೆ ರಾಯುಡು ಪಾತ್ರರಾಗಿದ್ದರು. ರಾಯುಡು ಜೊತೆಗೆ ಜಿಂಬಾಬ್ವೆ ವೇಗಿ ಬ್ಲೆಸ್ಸಿಂಗ್ ಮುಜರಬಾನಿ ಕೂಡ ವೈಯಕ್ತಿಕ ಕಾರಣಗಳಿಂದ ಟೂರ್ನಿಯಿಂದ ನಿರ್ಗಮಿಸಿದ್ದಾರೆ.