ಪ್ಯಾರಿಸ್: ಭಾರತದ ಭರವಸೆಯ ಕುಸ್ತಿಪಟು ಅಮನ್ ಸೆಹ್ರಾವತ್ ಅವರು ಇಲ್ಲಿನ ನಡೆಯುತ್ತಿರುವ ಒಲಂಪಿಕ್ಸ್‌ನ 57ಕೆಜಿ ಕುಸ್ತಿ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಸೆಮಿ ಫೈನಲ್ಸ್‌ಗೆ ಲಗ್ಗೆಯಿಟ್ಟಿದ್ದಾರೆ.
ಗುರುವಾರ (ಆ.8) ನಡೆದ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಅಲ್ಬೇನಿಯಾದ ಜೆಲಿಮ್ ಖಾನ್ ವಿರುದ್ಧ 12-0 ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಭಾರತ ಪರವಾಗಿ ಕುಸ್ತಿಯಲ್ಲಿ ಭಾಗವಹಿಸುತ್ತಿರುವ ಏಕೈಕ ಕುಸ್ತಿ ಆಟಗಾರ ಅಮನ್ ಸೆಹ್ರಾವತ್ ಆಗಿದ್ದು, ಇವರಿಗೆ ಈಗ ಕೇವಲ 21 ವರ್ಷ ವಯಸ್ಸು.
ಇದೇ ದಿನ ರಾತ್ರಿ 9.45ಕ್ಕೆ ನಡೆಯಲಿರುವ ಸೆಮಿ ಫೈನಲ್ಸ್ ಪಂದ್ಯದಲ್ಲಿ ಜಪಾನ್‌ನ ರೀ ಹಿಗುಚಿ ಅವರ ವಿರುದ್ಧ ಕಣಕ್ಕಿಳಿಯಲಿರುವ ಅಮನ್, ಗೆದ್ದು ಇತಿಹಾಸ ನಿರ್ಮಿಸಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಿದೆ.