ಕಠ್ಮಂಡು: ನೇಪಾಳ ಕ್ರಿಕೆಟ್ ತಂಡದ ಮಾಜಿ ನಾಯಕ ಸಂದೀಪ್ ಲಮಿಚಾನೆ ವಿರುದ್ಧ ಅಪ್ರಾಪ್ತ ಬಾಲಕೀಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಎಂದು ಕಠ್ಮಂಡು ನ್ಯಾಯಾಲಯ ತೀರ್ಪು ನೀಡಿದೆ.
ನೇಪಾಳದ ಸ್ಟಾರ್ ಆಟಗಾರ ಸಂದೀಪ್ ಲಾಮಿಚಾನೆ ವಿರುದ್ಧ ಸಂತ್ರಸ್ತ ಬಾಲಕಿ ಕಳೆದ ಸೆಪ್ಟೆಂಬರ್ ೬ ರಂದು ಗೊಶಾಲಾ ಮೊಟ್ರೊಪಾಲಿಟಿನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆಗಸ್ಟ್ 21 ರಂದು ತನ್ನೊಂದಿಗೆ ಕಠ್ಮಂಡುವಿನ ಸುತ್ತಮುತ್ತಾ ಓಡಾಡಿ ಹೋಟೆಲ್ ಕರೆದ್ಯೊಯ್ದು ಅತ್ಯಾಚಾರ ಎಸಗಿದ್ದ ಎಂದು ಉಲ್ಲೇಖಿಸಿದ್ದಳು. ಅದರಂತೆ ಬಂಧನಕ್ಕೆ ಒಳಗಾಗಿದ್ದ ಲಮಿಚಾನೆ ಜನವರಿಯಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.
ಈ ಪ್ರಕರಣ ಸಂಬಂಧ ನ್ಯಾ. ಶಿಶಿರ್ ರಾಜ್ ಧಾಕಲ್ ಅವರಿದ್ದ ಏಕಸದಸ್ಯ ಪೀಠ ಶುಕ್ರವಾರ ಲಮಿಚಾನೆ ದೋಷಿಯೆಂದು ತೀರ್ಪು ನೀಡಿದೆ. ಮತ್ತು ಮುಂದಿನ ವಿಚಾರಣೆಯಲ್ಲಿ ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ಕೋರ್ಟ್ ತಿಳಿಸಿದೆ ಎಂದು ʼದಿ ಕಠ್ಮಂಡು ಪೋಸ್ಟ್ʼ ವರದಿ ಮಾಡಿದೆ.
2022 ರಲ್ಲಿ ಈತನ ವಿರುದ್ಧ ಅತ್ಯಾಚಾರ ಆರೋಪ ಕಂಡುಬಂದ ಹಿನ್ನಲೆ ನೇಪಾಳ ಕ್ರಿಕೆಟ್ ತಂಡದ ನಾಯಕ ಸ್ಥಾನದಿಂದ ಅಮಾನತುಗೊಳಿಸಲಾಗಿತ್ತು. ಸಂದೀಪ್ 2018 ರಲ್ಲಿ ಡೆಲ್ಲಿ ಪರ ಪಾದಾರ್ಪಣೆ ಮಾಡುವ ಮೂಲಕ ಟಿ20 ಲೀಗ್ ನಲ್ಲಿ ಭಾಗಿಯಾಗಿದ್ದ ಮೊಲದ ನೇಪಾಳ ಕ್ರಿಕೆಟಿಗ ಎನಿಸಿಕೊಂಡಿದ್ದ.





