Mysore
21
overcast clouds

Social Media

ಶನಿವಾರ, 13 ಜೂನ್ 2026
Light
Dark

ಭಾರತಕ್ಕೆ ಬಂದ ಮನು ಭಾಕರ್‌ಗೆ ಅದ್ದೂರಿ ಸ್ವಾಗತ

ನವದೆಹಲಿ: ಒಲಿಂಪಿಕ್ಸ್‌ ಗೇಮ್‌ನ ಒಂದೇ ಆವೃತ್ತಿಯಲ್ಲಿ ಎರಡು ಪದಕ ಗೆದ್ದ ಭಾರತೀಯ ಮೊದಲ ಅಥ್ಲೀಟ್‌ ಎಂಬ ಹೆಗ್ಗಳಿಕೆ ಪಡೆದಿರುವ ಮನು ಭಾಕರ್‌ ಇಂದು(ಆ.7) ಭಾರತಕ್ಕೆ ಬಂದಿಳಿದಿದ್ದಾರೆ.

ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾಣ ನಿಲ್ದಾಣಕ್ಕೆ ಬಂದ ಮನು ಬಾಕರ್‌ ಅವರಿಗೆ, ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ಸಿಕ್ಕಿದೆ. ಅಭಿಮಾನಿಗಳು, ಕುಟುಂಬಸ್ಥರು, ಕ್ರೀಡಾಪಟುಗಳು ಹಾಗೂ ಅವರ ತವರು ರಾಜ್ಯ ಉತ್ತರಾಖಂಡದ ಅಧಿಕಾರಿಗಳು ಅವರನ್ನು ಕಾದು ಸ್ವಾಗತಿಸಿದರು.

ಹಾಡು, ನೃತ್ಯ, ತಮಟೆ ಬಾರಿಸುವ ಮೂಲಕ ಭಾಕರ್‌ ಆಗಮನವನ್ನು ಏರ್‌ಪೋರ್ಟ್‌ನಲ್ಲಿ ಜನ ಸಂಭ್ರಮಿಸಿದರು.

ಮಹಿಳೆಯರ 10ಮೀಟರ್‌ ಏರ್‌ ಶೂಟರ್‌ ಸ್ಪರ್ಧೆಯಲ್ಲಿ 22 ವರ್ಷದ ಮನು ಭಾಕರ್‌ ಕಂಚು ಗೆಲ್ಲುವ ಮೂಲಕ ಭಾರತದ ಖಾತೆ ತೆರೆದರು. ನಂತರ ಏರ್‌ ಪಿಸ್ತೂಲ್‌ ಮಿಶ್ರ ತಂಡ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

ಆಗಸ್ಟ್‌ 11 ಕ್ಕೆ ಮತ್ತೆ ಪ್ಯಾರಿಸ್‌ಗೆ ಮನು ಭಾಕರ್‌ ತೆರಳಲಿದ್ದು, ಒಲಿಂಪಿಕ್ಸ್‌ ಸಮಾರೋಮ ಸಮಾರಂಭದಲ್ಲಿ ಭಾರತದ ಮಹಿಳಾ ಧ್ವಜಧಾರಿಯಾಗಿ ಪಾಲ್ಗೊಳ್ಳಲಿದ್ದಾರೆ.

Tags:
error: Content is protected !!