ಚೆನ್ನೈ: ಚೆಸ್ ಒಲಿಂಪಿಯಾಡ್ 2022 ರಲ್ಲಿ ಕಂಚು ಗೆದ್ದ ಪುರುಷರ ಭಾರತ ಬಿ ತಂಡ ಮತ್ತು ಮಹಿಳೆಯರ ಭಾರತ ಎ ತಂಡಕ್ಕೆ ತಲಾ 1 ಕೋಟಿ ರೂಪಾಯಿ ಬಹುಮಾನವನ್ನು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಘೋಷಿಸಿದ್ದಾರೆ.
ತಮಿಳುನಾಡಿನ ಮಹಾಬಲೀಪುರದಲ್ಲಿ ನಡೆದ 44ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಕಂಚಿನ ಪದಕ ಗೆದ್ದುಕೊಂಡಿದ್ದರು.. ಯುವ ಆಟಗಾರರಾದ ಡಿ ಗುಕೇಶ್ , ಆರ್ ಪ್ರಗ್ನಾನಂದ , ನಿಹಾಲ್ ಸರಿನ್, ರೌನಕ್ ಸಾಧ್ವನಿ, ಬಿ ಅಧಿಬನ್ ಮತ್ತು ಕೊನೇರು ಹಂಪಿ, ಆರ್ ವೈಶಾಲಿ ಭಾರತಕ್ಕಾಗಿ ಪದಕ ತಂದುಕೊಟ್ಟ ಸ್ಪರ್ಧಿಗಳು. ಸೋಮವಾರ ಉಜ್ಬೇಕಿಸ್ತಾನ್ ವಿರುದ್ಧ ನಡೆದ ಪಂದ್ಯದಲ್ಲಿ ಚದುರಂಗ ನಡೆಯಲ್ಲಿ ಸಣ್ಣ ಪುಟ್ಟ ತಪ್ಪುಗಳನ್ನು ಮಾಡಿದ ಭಾರತೀಯ ಬಿ ತಂಡವು ಚಿನ್ನ ಗೆಲ್ಲುವ ಅವಕಾಶವನ್ನು ತಪ್ಪಿಸಿಕೊಂಡರು. ಹಾಗೆಯೇ ಭಾರತೀಯ ಮಹಿಳೆಯರು 11ನೇ ಪಂದ್ಯದಲ್ಲಿ ಯುಎಸ್ ವಿರುದ್ಧ ಸೋಲುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.