Mysore
29
scattered clouds

Social Media

ಶನಿವಾರ, 07 ಡಿಸೆಂಬರ್ 2024
Light
Dark

ಫುಟ್‌ಬಾಲ್‌ ತಾರೆ ನೇಮರ್‌ಗೆ 27 ಕೋಟಿ ರೂ. ದಂಡ ವಿಧಿಸಿದ ಬ್ರೆಜಿಲ್‌ ಅಧಿಕಾರಿಗಳು

ಬ್ರೆಜಿಲ್‌ : ಮನೆ ನಿರ್ಮಿಸುವಾಗ ಪರಿಸರ ನಿಯಮ ಉಲ್ಲಂಘಿಸಿದ್ದಕ್ಕಾಗಿ ಫುಟ್‌ಬಾಲ್‌ ತಾರೆ ನೇಮರ್‌ಗೆ ಬರೋಬ್ಬರಿ 27 ಕೋಟಿ ರೂ. (3.3 ಮಿಲಿಯನ್‌ ಅಮೆರಿಕನ್‌ ಡಾಲರ್)‌ ದಂಡ ವಿಧಿಸಲಾಗಿದೆ.

ದಂಡ ವಿಧಿಸಿರುವ ಬಗ್ಗೆ ಮಾಹಿತಿ ನೀಡಿರುವ ಬ್ರೆಜಿಲ್‌ ಅಧಿಕಾರಿಗಳು, ನೇಮರ್‌ ಅವರು ದಕ್ಷಿಣ ಬ್ರೆಜಿಲ್‌ನ ಕರಾವಳಿ ಪ್ರದೇಶದ ರಿಯೊ ಡಿ ಜನೈರೊದ ಹೊರವಲಯದಲ್ಲಿ ಐಷರಾಮಿ ಮನೆ ನಿರ್ಮಿಸಿದ್ದಾರೆ. ಅದಕ್ಕಾಗಿ ಶುದ್ಧ ನೀರಿನ ಮೂಲಗಳ ಬಳಕೆ, ಬಂಡೆ ಮತ್ತು ಮರಳು ಬಳಕೆ ವೇಳೆ ಪರಿಸರ ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ಅವರಿಗೆ ದಂಡ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಅವರ ನಿವಾಸದಲ್ಲಿ ಕೃತಕ ಕೊಳ ನಿರ್ಮಾಣದ ವೇಳೆ ಪರಿಸರಕ್ಕೆ ಹಾನಿ ಮಾಡಲಾಗಿದೆ ಎಂದು ಮಂಗರಟಿಬ ಸಿಟಿ ಕೌನ್ಸಿಲ್‌ ದೂರಿನಲ್ಲಿ ತಿಳಿಸಿದೆ.

ಅನುಮತಿಯಿಲ್ಲದೆ ಪರಿಸರಕ್ಕೆ ಧಕ್ಕೆಯಾಗುವಂತಹ ಕೆಲಸ ಮಾಡಿರುವುದು, ನದಿ ನೀರನ್ನು ಬಳಸಿರುವುದು, ಸಸ್ಯವರ್ಗದ ಬೆಳವಣಿಗೆಗೆ ಅಡ್ಡಿಪಡಿಸಿರುವುದು ಸೇರಿದಂತೆ ಹಲವು ಅಪರಾಧಗಳನ್ನು ನೇಮರ್‌ ಮೇಲೆ ಹೊರಿಸಲಾಗಿದೆ.

ಬ್ರೆಜಿಲ್ ಫುಟ್‌ಬಾಲ್‌ ತಾರೆ ತಮ್ಮ ಬಲ ಪಾದದ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಫೆಬ್ರವರಿಯಿಂದ ಅವರು ಫುಟ್ಬಾಲ್ ಪಂದ್ಯಗಳಲ್ಲಿ ಆಡಿಲ್ಲ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ