Mysore
22
overcast clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ವಾಟ್ಸ್​ಆ್ಯಪ್ ನಲ್ಲಿ ಬಂದಿದೆ ಸಾಲು ಸಾಲು ಅಪ್‌ ಡೇಟ್ಸ್‌

ಬಳಕೆದಾರರ ಮನಗೆದ್ದ ಕಮ್ಯೂನಿಟಿ ಫೀಚರ್ಸ್‌, ಒಂದೇ ಕ್ಲಿಕ್‌ ನಲ್ಲಿ ಸಾವಿರಾರು ಜನರಿಗೆ ಸಂದೇಶ

ಆಂದೋಲನ ಡಿಜಿಟಲ್‌ ವಿಶೇಷ ವರದಿ

 

ಆಂದೋಲನ ಡಿಜಿಟಲ್‌ ವಿಶೇಷ ವರದಿ
ಆಂದೋಲನ ಡಿಜಿಟಲ್‌ ವಿಶೇಷ ವರದಿ

ಮೆಟಾ (Meta) ಕಂಪನಿ ಒಡೆತನದ ಪ್ರಸಿದ್ಧ ಸಂದೇಶ ವಾಹಕ ಸಂಸ್ಥೆ (ಮೆಸೇಜಿಂಗ್ ಅಪ್ಲಿಕೇಶನ್) ವಾಟ್ಸ್​ಆ್ಯಪ್ (WhatsApp) ಹೊಸ ಹೊಸ ಅಪ್ಡೇಟ್‌ ಗಳ ಮೂಲಕ ಜನಸ್ನೇಹಿಯಾಗುವ ಪ್ರಯತ್ನ ಮಾಡುತ್ತಲೇ ಇದೆ. ಒಂದೇ ಬಾರಿ ನಾಲ್ಕೈದು ಹೊಸ ವೈಶಿಷ್ಟ್ಯಗಳನ್ನು ನೀಡಿರುವ ವಾಟ್ಸ್​ಆ್ಯಪ್​ನಲ್ಲಿ ಸಾಲು ಸಾಲು ಅಪ್ಡೇಟ್​ಗಳು ಬರುತ್ತಲೇ ಇವೆ. ವಾಟ್ಸಪ್‌ ಇತ್ತೀಚಿನ ದಿನಗಳಲ್ಲಿ ಪರಿಚಯಿಸಿರುವ ಹೊಸ ವಿಶೇಷತೆಗಳೇನು ನೋಡೋಣ.


ವಾಟ್ಸ್​ಆ್ಯಪ್ ಕಮ್ಯೂನಿಟಿ
ವಾಟ್ಸ್​ಆ್ಯಪ್ ಕಮ್ಯೂನಿಟಿ

ವಾಟ್ಸ್​ಆ್ಯಪ್ ಕಮ್ಯೂನಿಟಿ

ವಾಟ್ಸ್​ಆ್ಯಪ್ ಇತ್ತೀಚೆಗೆ ಪರಿಚಯಿಸಿರುವ ಕಮ್ಯೂನಿಟಿ ಫೀಚರ್ಸ್‌ (WhatsApp Community) ಗ್ರೂಪ್‌ಗಳ ಗ್ರೂಪ್‌ ಎಂದು ಹೇಳಬಹುದು. ಇದರಲ್ಲಿ ಅನೇಕ ಗುಂಪುಗಳನ್ನು ಒಂದೆಡೆ ಸೇರಿಸಬಹುದು. ಒಂದೇ ವಿಚಾರವನ್ನು ಕ್ಷಣ ಮಾತ್ರದಲ್ಲಿ ಸಾವಿರಾರು ಜನರಿಗೆ ತಲುಪಿಸಲು ಈ ಫೀಚರ್‌ ನೆರವಾಗಲಿದೆ.


ಗೌಪ್ಯತೆಗೆ ಒತ್ತು
ಗೌಪ್ಯತೆಗೆ ಒತ್ತು

ಗೌಪ್ಯತೆಗೆ ಒತ್ತು

ವಾಟ್ಸ್​ಆ್ಯಪ್ ಗ್ರೂಪ್‌ ಗಳಲ್ಲಿ ಮೊಬೈಲ್‌ ನಂಬರ್‌ ಎಲ್ಲರಿಗೂ ಸಿಗುವಂತಿತ್ತು. ವಾಟ್ಸ್​ಆ್ಯಪ್ ಕಮ್ಯೂನಿಟಿಯಲ್ಲಿ ಸದಸ್ಯರ ಫೋನ್‌ ನಂಬರ್‌ ಅಡ್ಮಿನ್ ಹೊರತಾಗಿ ಇತರರಿಗೆ ಕಾಣಿಸದೇ ಇರುವ ಹಾಗೆ ಫೀಚರ್‌ ರೂಪಿಸಲಾಗಿದೆ. ಈ ಹೊಸ ಫೀಚರ್​ನಲ್ಲಿ ಇರುವ ಸಂದೇಶಗಳು ಎಂಡ್‌ ಟು ಎಂಡ್‌ ಎನ್‌ಕ್ರಿಪ್ಶನ್ ಅನ್ನು ಸಹ ಪಡೆಯುತ್ತವೆ.


ಡು ನಾಟ್​ ಡಿಸ್ಟರ್ಬ್ ಮೋಡ್
ಡು ನಾಟ್​ ಡಿಸ್ಟರ್ಬ್ ಮೋಡ್

ಡು ನಾಟ್​ ಡಿಸ್ಟರ್ಬ್ ಮೋಡ್

ಡು ನಾಟ್ ಡಿಸ್ಟರ್ಬ್ ಫೀಚರ್ಸ್ ವಾಟ್ಸಪ್​ನಲ್ಲಿ ಹೊಸದಾಗಿ ಬಿಡುಗಡೆಯಾಗುತ್ತಿರುವ ಫೀಚರ್. ಬಳಕೆದಾರರು “ಡು ನಾಟ್ ಡಿಸ್ಟರ್ಬ್’ ಮೋಡ್ ಅನ್ನು ಆನ್ ಮಾಡಿದಾಗ, ಫೋನ್ ಕರೆಗಳು ಮತ್ತು ಎಸ್​ಎಂ​ಎಸ್​ ನಂತಹ ಎಲ್ಲಾ ಎಚ್ಚರಿಕೆಗಳನ್ನು ಮ್ಯೂಟ್ ಮಾಡಲಾಗುತ್ತದೆ. ಕರೆಗಳು ಬಂದಾಗ ವೈಬ್ರೇಶನ್​ಗಳು, ಸ್ಕ್ರೀನ್ ಆನ್ ಆಗುವುದಿಲ್ಲ.


 

ಎಡಿಟ್ ಮೆಸೇಜ್ ಆಯ್ಕೆ
ಎಡಿಟ್ ಮೆಸೇಜ್ ಆಯ್ಕೆ

ಎಡಿಟ್ ಮೆಸೇಜ್ ಆಯ್ಕೆ

ವಾಟ್ಸ್​ಆ್ಯಪ್ ಸದ್ಯದಲ್ಲೇ ಎಡಿಟ್ ಮೆಸೇಜ್ ಆಯ್ಕೆಯನ್ನು ನೀಡಲಿದೆ. ಬಳಕೆದಾರರು ಮೆಸೇಜ್ ಮಾಡುವ ಸಂದರ್ಭದಲ್ಲಿ ಅಕ್ಷರ ತಪ್ಪಿ ಸೆಂಡ್ ಮಾಡಿದ್ದರೆ ಅದನ್ನು ಸರಿಪಡಿಸಲು ಇದು ಸಹಕಾರಿಯಾಗಲಿದೆ. ಈಗ ಇರುವ ಡಿಲೀಟ್ ಫಾರ್ ಎವರಿವನ್ ಆಯ್ಕೆ ಸಂಪೂರ್ಣ ಮೆಸೇಜ್ ಅನ್ನು ಡಿಲೀಟ್ ಮಾಡುತ್ತದೆ. ಎಡಿಟ್ ಮೆಸೇಜ್ ಅನ್ನು ಡಿಲೀಟ್ ಮಾಡುವ ಬದಲು ಅಕ್ಷರವನ್ನು ಸರಿಪಡಿಸುವುದಾಗಿದೆ.


ಗ್ರೂಪ್‌ ಸದಸ್ಯರ ಸಂಖ್ಯೆ ಹೆಚ್ಚಳ
ಗ್ರೂಪ್‌ ಸದಸ್ಯರ ಸಂಖ್ಯೆ ಹೆಚ್ಚಳ


ಗ್ರೂಪ್‌ ಸದಸ್ಯರ ಸಂಖ್ಯೆ ಹೆಚ್ಚಳ
:

ಆರಂಭದಲ್ಲಿ ವಾಟ್ಸ್​ಆ್ಯಪ್​​ ಗ್ರೂಪ್‌ಗೆ 256 ಸದಸ್ಯರನ್ನು ಸೇರಿಸಲು ಅವಕಾಶ ಇತ್ತು. ಬಳಿಕ ಆ ಸಂಖ್ಯೆಯನ್ನು 512 ಕ್ಕೆ ಹೆಚ್ಚಿಸಿತ್ತು. ಈಗ ಈ ಸಂಖ್ಯೆಯನ್ನು 1024 ಕ್ಕೆ ಹೆಚ್ಚಿಸಲಾಗಿದೆ. ಕಮ್ಯೂನಿಟಿ ಬೀಟಾ ಬಳಕೆದಾರರಿಗೆ ಸೀಮಿತವಾಗಿದ್ದ ಈ ಆಯ್ಕೆಯು ಈಗ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಲಭ್ಯವಿದೆ.


ಕಾಪ್ಷನ್​ನೊಂದಿಗೆ ಡಾಕ್ಯುಮೆಂಟ್ ಕಳುಹಿಸಿ:
ಕಾಪ್ಷನ್​ನೊಂದಿಗೆ ಡಾಕ್ಯುಮೆಂಟ್ ಕಳುಹಿಸಿ:

ಕಾಪ್ಷನ್​ನೊಂದಿಗೆ ಡಾಕ್ಯುಮೆಂಟ್ ಕಳುಹಿಸಿ:

ವಾಟ್ಸ್​ಆ್ಯಪ್​ನಲ್ಲಿ ಫೋಟೋ, ವಿಡಿಯೋ ಮತ್ತು ಜಿಫ್ ಫೈಲ್​ಗಳನ್ನು ಅಡಿ ಬರಹ ನೀಡಿ ಕಳುಹಿಸಬಹುದು. ಆದರೆ, ಡಾಕ್ಯುಮೆಂಟ್ ಕಳುಹಿಸುವಾಗ ಈ ಆಯ್ಕೆ ಕಾಣಿಸುವುದಿಲ್ಲ. ಇದೀಗ ವಾಟ್ಸ್​ಆ್ಯಪ್ ತನ್ನ ನೂತನ ಅಪ್ಡೇಟ್​ನಲ್ಲಿ ಡಾಕ್ಯುಮೆಂಟ್ ಕಳುಹಿಸುವಾಗಲೂ ಕಾಪ್ಷನ್ ಆಯ್ಕೆ ನೀಡಲಿದೆ. ಈ ಮೂಲಕ ಕಳುಹಿಸಿದ ಅಥವಾ ರಿಸೀವ್ ಮಾಡಿಕೊಂಡ ಡಾಕ್ಯುಮೆಂಟ್ ಅನ್ನು ಸರ್ಚ್ ಮಾಡಬಹುದು.


ಸ್ಕ್ರೀನ್ ಶಾಟ್ ನಿರ್ಬಂಧ:
ಸ್ಕ್ರೀನ್ ಶಾಟ್ ನಿರ್ಬಂಧ:

ಸ್ಕ್ರೀನ್ ಶಾಟ್ ನಿರ್ಬಂಧ:

ಬಳಕೆದಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಾಟ್ಸ್​ಆ್ಯಪ್ ಈ ವರ್ಷ ವೀವ್ ಒನ್ಸ್ ಎಂಬ ಆಯ್ಕೆಯನ್ನು ಪರಿಚಯಿಸಿತ್ತು. ಇದರಲ್ಲಿ ಫೋಟೋ ಅಥವಾ ವಿಡಿಯೋವನ್ನು ಓಪನ್ ಮಾಡಿ ನೋಡಿದ ತಕ್ಷಣ ಮಾಯವಾಗುವುದು ಮಾತ್ರವಲ್ಲದೆ, ಫೋನ್ ಮೆಮೊರಿಯಲ್ಲಿ ಎಲ್ಲಿಯೂ ಸ್ಟೋರ್ ಕೂಡ ಆಗಿರುವುದಿಲ್ಲ. ಆದರೆ, ಇದರಲ್ಲಿ ಸ್ಕ್ರೀನ್ ಶಾಟ್ ತೆಗೆಯಲು ಅವಕಾಶವಿತ್ತು. ಈಗ ವಾಟ್ಸ್​ಆ್ಯಪ್ ಸ್ಕ್ರೀನ್ ಶಾಟ್ ಫೀಚರ್‌ ನಿರ್ಬಂಧಿಸಲು ಮುಂದಾಗಿದೆ.


ವಾಟ್ಸ್​ಆ್ಯಪ್ ಪ್ರೀಮಿಯಂ ಚಂದಾದಾರಿಕೆ:
ವಾಟ್ಸ್​ಆ್ಯಪ್ ಪ್ರೀಮಿಯಂ ಚಂದಾದಾರಿಕೆ:

ವಾಟ್ಸ್​ಆ್ಯಪ್ ಪ್ರೀಮಿಯಂ ಚಂದಾದಾರಿಕೆ:

ವಾಟ್ಸ್​ಆ್ಯಪ್​ನಲ್ಲಿ ಪಾವತಿ ಮಾಡಿ ಬಳಸಬೇಕಾದ ಪ್ರೀಮಿಯಂ ಸೌಲಭ್ಯ ಸದ್ಯದಲ್ಲೇ ಬರಲಿದೆ. ಪ್ರೀಮಿಯಂ ಸೌಲಭ್ಯಗಳಿರುವ ವಾಟ್ಸ್​ಆ್ಯಪ್ ಪ್ರೀಮಿಯಂ ಅಪ್ಲಿಕೇಷನ್ ಟೆಸ್ಟಿಂಗ್ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಈ ಆಯ್ಕೆ ವಾಟ್ಸ್​ಆ್ಯಪ್ ಬ್ಯುಸಿನೆಸ್ ಬಳಕೆದಾರರಿಗೆ ಲಭ್ಯವಾಗಲಿದೆ.


ಮಲ್ಟಿ ಕಾಲರ್‌ ಸೌಲಭ್ಯ
ಮಲ್ಟಿ ಕಾಲರ್‌ ಸೌಲಭ್ಯ


ಮಲ್ಟಿ ಕಾಲರ್‌ ಸೌಲಭ್ಯ

ವಾಟ್ಸಪ್‌ ನಲ್ಲಿ ಈಗ ಒಂದೇ ಬಾರಿಗೆ 32 ಮಂದಿಯನ್ನು ವಾಟ್ಸಪ್‌ ಕರೆಯಲ್ಲಿ ಸೇರಿಸಬಹುದು. ಈ ವೈಶಿಷ್ಟ್ಯವು ಬಳಕೆದಾರರಿಗೆ ಹೊಸ ಕರೆಗೆ ಜನರನ್ನು ಆಹ್ವಾನಿಸಲು ಇಲ್ಲವೇ ಅಸ್ತಿತ್ವದಲ್ಲಿರುವ ಕರೆಗೆ ಸೇರಲು ಅವರನ್ನು ಅನುಮತಿಸುತ್ತದೆ.


ಕಾಲ್ ಲಿಂಕ್ ವೈಶಿಷ್ಟ್ಯ
ಕಾಲ್ ಲಿಂಕ್ ವೈಶಿಷ್ಟ್ಯ

ಕಾಲ್ ಲಿಂಕ್ ವೈಶಿಷ್ಟ್ಯ

ಮಲ್ಟಿ ಕಾಲರ್‌ ಜತೆಗೆ ಕಾಲ್ ಲಿಂಕ್ ವೈಶಿಷ್ಟ್ಯವನ್ನೂ ಪರಿಚಯಿಸಲಾಗುತ್ತಿದೆ. ಕರೆ ಲಿಂಕ್ ಅನ್ನು ರಚಿಸುವ ಆಯ್ಕೆಯನ್ನು ಕರೆಗಳ ಟ್ಯಾಬ್‌ನ ಮೇಲ್ಭಾಗದಲ್ಲಿ ಪಿನ್ ಮಾಡಲಾಗಿದೆ. “ಕರೆ ಲಿಂಕ್ ರಚಿಸಿ’ ಆಯ್ಕೆಯನ್ನು ಟ್ಯಾಪ್ ಮಾಡುವುದರಿಂದ ಕರೆ ಲಿಂಕ್ ತಂಡ ರಚನೆಯಾಗುತ್ತದೆ. ಒಂದು ಬಾರಿ ಕರೆ ಮಾಡಿದ ಬಳಿಕ ಇದು 90 ದಿನಗಳವರೆಗೆ ಮಾನ್ಯವಾಗಿರುತ್ತದೆ.


ಕಾಲ್ ಲಿಂಕ್ ವೈಶಿಷ್ಟ್ಯ
ಕಾಲ್ ಲಿಂಕ್ ವೈಶಿಷ್ಟ್ಯ

ನಾಲ್ಕು ಹ್ಯಾಂಡ್‌ ಸೆಟ್‌ಗಳಲ್ಲಿ ಒಂದೇ ವಾಟ್ಸಪ್‌

ಬಳಕೆದಾರರು ತಮ್ಮ ಪ್ರಾಥಮಿಕ ಖಾತೆಯನ್ನು ಎರಡು ಆ್ಯಂಡ್ರಾಯ್ಡ್ ಹ್ಯಾಂಡ್‌ ಸೆಟ್‌ ಗಳಲ್ಲಿ ಲಿಂಕ್‌ ಮಾಡಲೂ ವಾಟ್ಸ್​ಆ್ಯಪ್ ಅವಕಾಶ ಮಾಡಿಕೊಡುತ್ತಿದೆ. ನೋಂದಣಿ ಸ್ಕ್ರೀನ್‌ ನಲ್ಲಿರುವ ಸೆಟ್ಟಿಂ ಗ್ಸ್‌ ಮೆನುವಿನಲ್ಲಿರುವ ಡ್ರಾಪ್ಡೌನ್ ಮೆನುವಿನಿಂದ “ಲಿಂಕ್ ಎ ಡಿವೈಸ್ʼ ಆಯ್ಕೆ ಮಾಡುವ ಮೂಲಕ ಈಗಕಂಪ್ಯಾನಿಯನ್ ಮೋಡ್ ಅನ್ನು ಸಕ್ರಿಯಗೊಳಿಸಬಹುದು. ಈ ವೈಶಿಷ್ಟ್ಯ ಸದ್ಯ ಬೀ ಟಾ ಬಳಕೆದಾರರಿಗೆ ಮಾತ್ರ ಲಭ್ಯವಿದ್ದು ಇತರ ಬಳಕೆದಾರರಿಗೂ ಶೀಘ್ರದಲ್ಲಿ ಸಿಗಲಿದೆ.


ನಾಲ್ಕು ಸಾಧನಗಳಿಗೆ ವಾಟ್ಸಪ್‌ ಲಿಂಕ್
ನಾಲ್ಕು ಸಾಧನಗಳಿಗೆ ವಾಟ್ಸಪ್‌ ಲಿಂಕ್

ನಾಲ್ಕು ಸಾಧನಗಳಿಗೆ ವಾಟ್ಸಪ್‌ ಲಿಂಕ್

ಪ್ರಸ್ತುತ ವಾಟ್ಸಾ ಪ್ ಬಳಕೆದಾರರು ಅಸ್ತಿತ್ವದಲ್ಲಿರುವ ಒಂದು ಖಾತೆಯನ್ನು ಒಂದು ಮಾತ್ರ ಸ್ಮಾರ್ಟ್‌ ಫೋನ್‌ ನಲ್ಲಿ ಮಾತ್ರ ಪ್ರವೇಶಿಸಬಹುದು. ಆದರೆ ಲ್ಯಾಪ್‌ ಟಾಪ್‌, ಡೆಸ್ಕ್‌ ಟಾಪ್‌ , ಟ್ಯಾ ಬ್ಲೆಟ್‌ ಸೇರಿ ಇತರ ನಾಲ್ಕು ಸಾಧನಗಳಿಗೆ ಲಿಂಕ್ ಮಾಡಲು ಅವಕಾಶವಿದೆ. ಹೊಸ ಸೇವೆಯೊಂದಿಗೆ ಜನರು ಎರಡು ಫೋನ್‌ ಮತ್ತು ನಾಲ್ಕು ಇತರ ಸಾಧನ ಸೇರಿ ಆರು ಕಡೆಗಳಲ್ಲಿ ವಾಟ್ಸಾಸ್‌ ಸಂಖ್ಯೆ ಬಳಸಿ ಲಾಗ್ಇನ್‌ ಮಾಡಬಹುದು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ