Mysore
26
overcast clouds

Social Media

ಬುಧವಾರ, 12 ಆಗಸ್ಟ್ 2026
Light
Dark

ಇನ್ಮುಂದೆ ಮೊಬೈಲ್ ಸ್ಕ್ರೀನ್ ನಲ್ಲಿ ಬರಲಿದೆ ಕರೆದಾರರ ಹೆಸರು

ಹೊಸದಿಲ್ಲಿ: ಜಾಹೀರಾತು, ಮಾರ್ಕೆಟಿಂಗ್ ಸೇರಿದಂತೆ ಅನಪೇಕ್ಷಿತ ಕರೆಗಳನ್ನು ನಿವಾರಿಸಲು ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೊಸ ನಿಯಮವೊಂದನ್ನು ಜಾರಿಗೆ ತರುತ್ತಿದೆ.
ಸದ್ಯ ಕರೆಗಳು ಬಂದಾಗ ಅವು ಯಾರದ್ದು ಎಂದು ತಿಳಿಯುವುದು ಕಷ್ಟ . ಈ ಸಮಸ್ಯೆ ಗೆ ಶೀಘ್ರ ಪರಿಹಾರ ಸಿಗಲಿದೆ. ಟ್ರಾಯ್ ಇದಕ್ಕೆ ಪರಿಹಾರ ಕಂಡುಹಿಡಿದಿದ್ದು ಇನ್ನು ಮುಂದೆ ಸ್ಕ್ರೀನ್ ಮೇಲೆ ಕರೆ ಮಾಡುವವರ ಹೆಸರು ಬರಲಿದೆ.
ಬಳಕೆದಾರರು ಕರೆ ಸ್ವೀಕರಿಸಿದಾಗ ಕರೆ ಮಾಡುವವರ ಹೆಸರು ಫೋನ್ ಪರದೆಯ ಮೇಲೆ ಕಾಣಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಂಡಿದೆ.
ಟೆಲಿಕಾಂ ಆಪರೇಟರ್ಗಳಲ್ಲಿ ಲಭ್ಯ ವಿರುವ ಚಂದಾದಾರರ ಕೆವೈಸಿ ದಾಖಲೆಯ ಪ್ರಕಾರ ಹೆಸರು ಕಾಣಿಸಿಕೊಳ್ಳಲಿದೆ. ಚಂದಾದಾರರು ಕರೆ ಮಾಡಿದವರ ಹೆಸರು ಕಾಂಟ್ಯಾ ಕ್ಟ್ ಲಿಸ್ಟಿನಲ್ಲಿ ಸೇವ್ ಆಗದೇ ಇದ್ದರೂ ಅವರ ಹೆಸರು ಕಾಣಿಸಿಕೊಳ್ಳಲಿದೆ.
ಪ್ರಸ್ತುತ, ಕೆಲವು ಬಳಕೆದಾರರು ಟ್ರೂಕಾಲ್ ನಂತಹ ಅಪ್ಲಿಕೇಶನ್ ಮೂಲಕ ಅಪರಿಚಿತ ಕಾಲರ್ ಗಳ ಗುರುತನ್ನು ತಿಳಿದುಕೊಳ್ಳು ತ್ತಾರೆ. ಆದಾಗ್ಯೂ , ಇದು ಶೇ. ನೂರರಷ್ಟು ಪರಿಪೂರ್ಣವಲ್ಲ. ಆದರೆ ಟ್ರಾಯ್ ನಿಯಮ ಜಾರಿಗೆ ಬಂದ ಬಳಿಕ ಯಾರ ಹೆಸರಿನಲ್ಲಿ ಸಿಮ್ ಖರೀದಿಸಲಾಗಿದೆಯೋ ಅದೇ ಹೆಸರು ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!